Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿ: ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ಬಂದು ಸೀರೆ ಕಳ್ಳತನ; ಎಂಟು ಮಂದಿ ಅರೆಸ್ಟ್

ಗ್ರಾಹಕರ ಸೋಗಿನಲ್ಲಿ ಸೀರೆ ಅಂಗಡಿಗೆ ಆಗಮಿಸಿ ದುಬಾರಿ ಬೆಲೆಯ ಸೀರೆಗಳನ್ನ ಕೊಳ್ಳುವ ರೀತಿ ನಟಿಸಿ ಸೀರೆಗಳನ್ನು ಕಳ್ಳತನ ಮಾಡುತ್ತಿದ್ದ ಆರು ಮಂದಿ ಮಹಿಳೆಯರು ಮತ್ತು ಇಬ್ಬರು ಪುರುಷರನ್ನು ಬೆಳಗಾವಿಯ ಖಡೇಬಜಾರ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಶಿರಡಿಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

ಬೆಳಗಾವಿ: ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ಬಂದು ಸೀರೆ ಕಳ್ಳತನ; ಎಂಟು ಮಂದಿ ಅರೆಸ್ಟ್
ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ಬಂದು ಸೀರೆ ಕಳ್ಳತನ ಮಾಡುತ್ತಿದ್ದ ಆರೋಪಿಗಳು
Follow us
Sahadev Mane
| Updated By: Rakesh Nayak Manchi

Updated on: Nov 10, 2023 | 10:10 AM

ಬೆಳಗಾವಿ, ನ.10: ಗ್ರಾಹಕರ ಸೋಗಿನಲ್ಲಿ ಸೀರೆ ಅಂಗಡಿಗೆ ಆಗಮಿಸಿ ದುಬಾರಿ ಬೆಲೆಯ ಸೀರೆಗಳನ್ನ ಕೊಳ್ಳುವ ರೀತಿ ನಟಿಸಿ ಸೀರೆಗಳನ್ನು ಕಳ್ಳತನ ಮಾಡುತ್ತಿದ್ದ ಆರು ಮಂದಿ ಮಹಿಳೆಯರು ಮತ್ತು ಇಬ್ಬರು ಪುರುಷರನ್ನು ಬೆಳಗಾವಿಯ (Belagavi) ಖಡೇಬಜಾರ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಶಿರಡಿಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

ಬೆಳಗಾವಿ ನಗರದಲ್ಲಿರುವ ಸೀರೆ ಅಂಗಡಿಯೊಂದರಲ್ಲಿ ನವೆಂಬರ್ 3 ರಂದು ನಾಲ್ಕು ಲಕ್ಷ ಮೌಲ್ಯದ ಸೀರೆಗಳನ್ನು ಕಳ್ಳತನ ಮಾಡಲಾಗಿತ್ತು. ಆರು ಜನ ಮಹಿಳೆಯರು ಏಕಕಾಲದಲ್ಲಿ ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ಆಗಮಿಸಿ ದುಬಾರಿ ಬೆಲೆಯ ಸೀರೆಗಳನ್ನ ಕೊಳ್ಳುವ ರೀತಿ ನಟಿಸಿ ಬಳಿಕ ಐದಾರೂ ಸೀರೆಯನ್ನ ಒಟ್ಟಿಗೆ ಕಾಂಗರೂ ಚೀಲದಲ್ಲಿಟ್ಟುಕೊಂಡು ಕಳ್ಳತನ ಮಾಡಿದ್ದರು.

ಹೀಗೆ ಸೀರೆಗಳ ಬಂಡಲ್ ಒಳಗೆ ಇಟ್ಟುಕೊಳ್ಳುವಾಗ ಸಿಸಿಟಿವಿಗೆ ಕಾಣದಂತೆ ಸೀರೆಯಿಂದ ಮುಚ್ಚಿ ಕವರ್ ಮಾಡಲಾಗಿತ್ತು. ಕಳ್ಳತನ ಆಗುತ್ತಿದ್ದಂತೆ ಎನೂ ಗೊತ್ತಿಲ್ಲದಂತೆ ಮಹಿಳೆಯರು ಅಂಗಡಿಯಿಂದ ಹೊರ ಬಂದು ಪರಾರಿಯಾಗಿದ್ದರು.

ಇದನ್ನೂ ಓದಿ: ಬೆಳಗಾವಿ ಜಿಲ್ಲಾ ಸಿಇಎನ್ ಪೊಲೀಸರು ಭರ್ಜರಿ ಬೇಟೆ; ಜೂಜು ಅಡ್ಡೆ ಮೇಲೆ ದಾಳಿ, 70 ಜನರ ಬಂಧನ

ಈ ಕುರಿತು ಖಡೇಬಜಾರ್ ಪೊಲೀಸ್ ಠಾಣೆಗೆ ನೀಡಲಾದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸೀರೆ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಬೆನ್ನು ಬಿದಿದ್ದರು. ಅದರಂತೆ ಮಹಾರಾಷ್ಟ್ರದ ಶಿರಡಿಯಲ್ಲಿ ಇಬ್ಬರು ಪುರುಷರ ಸೇರಿದಂತೆ ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಆಂದ್ರಪ್ರದೇಶ ಮೂಲದ ಸುನಿತಾ ಈಟಾ (45), ಕನಕದುರ್ಗ ಚಡಾಲ್ (36), ರಾಣಿ ಮಟ್ಟಪರ್ತಿ (33), ಮಣಿ ದೇವರಕೊಂಡ (39), ರಜನಿ ಮೇಚಾರಪ್ಪು (30), ಚುಕ್ಕಮ್ಮಾ ಪೊಣ್ಣ (50), ವೆಂಕಟೇಶರಾವ್ ಕನುಮುರಿ (41), ವೆಂಕಟೇಶ್‌ರಾವಲು ಉಸುರುಗಂಟಿ (34) ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತರಿಂದ ಎಂಟು ಮೊಬೈಲ್ ಫೋನ್​ಗಳನ್ನು ಮತ್ತು ಒಂದು ಕಾರು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಬೆಳಗಾವಿ ನಗರದಲ್ಲಿ ಮಾತ್ರವಲ್ಲದೆ, ಮೈಸೂರಿನಲ್ಲೂ ಕಳ್ಳತನ ಮಾಡಿರುವ ಅನುಮಾನ ವ್ಯಕ್ತವಾಗಿದ್ದು, ಈ ಕುರಿತು ತೀವ್ರ ವಿಚಾರಣೆ ನಡೆಯುತ್ತಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ