ತೆಲಂಗಾಣ ಚುನಾವಣೆ: ಕರ್ನಾಟಕದ ನಾಯಕರಿಗೆ ಎಐಸಿಸಿ ಟಾಸ್ಕ್, ಸಿದ್ದರಾಮಯ್ಯಗೆ ಸಿಕ್ತು ಬಿಗ್ ಗಿಫ್ಟ್
ನವೆಂಬರ್ 30 ರಂದು ನಡೆಯುವ ತೆಲಂಗಾಣ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಎಐಸಿಸಿ, ಕರ್ನಾಟಕದ ಕಾಂಗ್ರೆಸ್ ನಾಯಕರಿಗೂ ಟಾಸ್ಕ್ ಕೊಟ್ಟಿದೆ. 10 ಸಚಿವರು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುವಂತೆ ಸೂಚನೆ ನೀಡಲಾಗಿದೆ. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ತೆಲಂಗಾಣಕ್ಕೆ ತೆರಳಿದ್ದು, ಬೆಳಗಾವಿಯಲ್ಲಿ ಬೆಳ್ಳಿ ಗದೆ ಉಡುಗೊರೆಯಾಗಿ ನೀಡಲಾಗಿದೆ.
ಬೆಂಗಳೂರು, ನ.10: ನವೆಂಬರ್ 30 ರಂದು ನಡೆಯುವ ತೆಲಂಗಾಣ ಚುನಾವಣೆಯನ್ನು (Telangana Elections 2023) ಗಂಭೀರವಾಗಿ ಪರಿಗಣಿಸಿರುವ ಎಐಸಿಸಿ (AICC), ಕರ್ನಾಟಕದ 10 ಸಚಿವರಿಗೆ ತೆಲಂಗಾಣ ಚುನಾವಣಾ ಕಾರ್ಯದಲ್ಲಿ ಭಾಗಿಯಾಗುವಂತೆ ಸೂಚನೆ ನೀಡಿದೆ. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೂ ಪ್ರಚಾರ ನಡೆಸಲು ಸೂಚಿಸಿದೆ. ಅದರಂತೆ ತೆಲಂಗಾಣಕ್ಕೆ ತೆರಳಿದ ಸಿದ್ದರಾಮಯ್ಯಗೆ ದಾರಿ ಮಧ್ಯೆ ಬೆಳಗಾವಿಯಲ್ಲಿ ಅಭಿಮಾನಿಗಳು ಬೆಳ್ಳಿ ಗದೆ ಉಡುಗೊರೆ ನೀಡಲಾಗಿದೆ.
ತೆಲಾಂಗಣ ಚುನಾವಣ ಪ್ರಚಾರಕ್ಕೆ ತೆರಳುವ ಮುನ್ನ ಬೆಳಗಾವಿ ಜಿಲ್ಲೆಯ ಮೂಡಲಗಿ ಗ್ರಾಮದ ಅಭಿಮಾನಿಗಳಾದ ಜಡೆಪ್ಪ, ಪಂಚಪ್ಪ ಹಾಗೂ ಲಕ್ಷ್ಮಣ್ ರಾವ್ ಎಂಬವರು ಬೆಳ್ಳಿ ಗದೆ ನೀಡಿದ್ದಾರೆ. ಈ ವೇಳೆ ಸಚಿವ ಸತೀಶ್ ಜಾರಕಿಹೊಳಿ ಸೇರಿದಂತೆ ಹಲವರು ಇದ್ದರು.
ತೆಲಂಗಾಣ ಚುನಾವಣೆ ಗಂಭೀರವಾಗಿ ಪರಿಗಣಿಸಿದ ಎಐಸಿಸಿ, ಕರ್ನಾಟಕದ ರಾಜ್ಯದ 10 ಸಚಿವರಿಗೆ ತೆಲಂಗಾಣ ಚುನಾವಣಾ ಕಾರ್ಯದಲ್ಲಿ ಭಾಗಿ ಆಗುವಂತೆ ಸೂಚನೆ ನೀಡಲಾಗಿದೆ. ಅಲ್ಲದೆ, ಒಬ್ಬೊಬ್ಬ ಸಚಿವರಿಗೆ ಕ್ಲಸ್ಟರ್ ಮಟ್ಟದ ಪ್ರಚಾರ ಜವಾಬ್ದಾರಿ ನೀಡಲಾಗಿದೆ.
ಇದನ್ನೂ ಓದಿ: ತೆಲಂಗಾಣ ಚುನಾವಣಾ ಪ್ರಚಾರದಲ್ಲೂ ಗಮನ ಸೆಳೆದ MLA ಪ್ರದೀಪ್ ಈಶ್ವರ್; ಇಲ್ಲಿದೆ ವಿಡಿಯೋ
ದಿನೇಶ್ ಗುಂಡೂರಾವ್, ಜಮೀರ್ ಅಹಮದ್ ಖಾನ್, ಡಾ.ಎಂ.ಸಿ. ಸುಧಾಕರ್, ಪ್ರಿಯಾಂಕ್ ಖರ್ಗೆ, ಶಿವರಾಜ್ ತಂಗಡಗಿ, ಕೆ.ಎಚ್. ಮುನಿಯಪ್ಪ, ಶರಣ ಪ್ರಕಾಶ್ ಪಾಟೀಲ್, ಈಶ್ವರ್ ಖಂಡ್ರೆ, ಬಿ ನಾಗೇಂದ್ರ ಅವರಿಗೆ ಪ್ರಚಾರದ ಜವಾಬ್ದಾರಿಯನ್ನು ಎಐಸಿಸಿ ನೀಡಿದೆ.
ಹೈದರಾಬಾದ್ಗೆ ತೆರಳಿದ ಸಿದ್ದರಾಮಯ್ಯ
ನ.30 ರಂದು ತೆಲಂಗಾಣದ 119 ವಿಧಾನಸಭೆ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಈ ನಿಟ್ಟಿನಲ್ಲಿ ಪ್ರಚಾರ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈದರಾಬಾದ್ಗೆ ತೆರಳಿದ್ದಾರೆ. ಹೆಚ್ಎಎಲ್ ವಿಮಾನ ನಿಲ್ದಾಣನಿಂದ ಸಿದ್ದರಾಮಯ್ಯ ಅವರು ಹೈದರಾಬಾದ್ಗೆ ತೆರಳಿದ್ದಾರೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ