ತೆಲಂಗಾಣ: ಚುನಾವಣಾ ಪ್ರಚಾರದ ವೇಳೆ ತೆರೆದ ವ್ಯಾನ್ನಿಂದ ಮುಗ್ಗರಿಸಿ ಬಿದ್ದ ಸಚಿವ ಕೆಟಿಆರ್, ಅದೃಷ್ಟ ವಶಾತ್ ಅಪಾಯದಿಂದ ಪಾರು
ತೆಲಂಗಾಣ ವಿಧಾನಸಭಾ ಚುನಾವಣೆ ಸನ್ನಿಹಿತವಾಗುತ್ತಿದ್ದು, ವಿವಿಧ ಪಕ್ಷಗಳ ನಾಯಕರು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಹಾಗೆಯೇ ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ(ಬಿಆರ್ಎಸ್) ಕಾರ್ಯಾಧ್ಯಕ್ಷ ಹಾಗೂ ಸಚಿವರಾಗಿರುವ ಕೆಟಿ ರಾಮರಾವ್ ರೋಡ್ ಶೋ ವೇಳೆ ತೆರೆದ ವಾಹನದಿಂದ ಮುಗ್ಗರಿಸಿ ಬಿದ್ದಿದ್ದು, ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ.
ತೆಲಂಗಾಣ ವಿಧಾನಸಭಾ ಚುನಾವಣೆ ಸನ್ನಿಹಿತವಾಗುತ್ತಿದ್ದು, ವಿವಿಧ ಪಕ್ಷಗಳ ನಾಯಕರು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಹಾಗೆಯೇ ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ(ಬಿಆರ್ಎಸ್) ಕಾರ್ಯಾಧ್ಯಕ್ಷ ಹಾಗೂ ಸಚಿವರಾಗಿರುವ ಕೆಟಿ ರಾಮರಾವ್ ರೋಡ್ ಶೋ ವೇಳೆ ತೆರೆದ ವಾಹನದಿಂದ ಮುಗ್ಗರಿಸಿ ಬಿದ್ದಿದ್ದು, ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ.
ಗುರುವಾರ ನಿಜಾಮಾಬಾದ್ ಜಿಲ್ಲೆಯ ಅರ್ಮುರ್ ಪಟ್ಟಣದಲ್ಲಿ ರೋಡ್ ಶೋ ಮಾಡುತ್ತಿದ್ದ ಸಮಯದಲ್ಲಿ ಕೆಟಿಆರ್ ಇದ್ದ ವಾಹನ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದ ಕಾರಣ, ಸಚಿವರು ವಾಹನದಿಂದ ಮುಗ್ಗುರಿಸಿದರು. ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ.
ಬಿಆರ್ಎಸ್ ರಾಜ್ಯಸಭಾ ಸಂಸದ ಕೆಆರ್ ಸುರೇಶ್ ರೆಡ್ಡಿ ಕೂಡ ವ್ಯಾನ್ನಲ್ಲಿ ನಿಂತಿದ್ದರು, ಉಭಯ ನಾಯಕರು ಪಕ್ಷ ಅಭ್ಯರ್ಥಿ ಹಾಗೂ ಶಾಸಕ ಜೀವನ್ ರೆಡ್ಡಿ ಅವರೊಂದಿಗೆ ನಾಮಪತ್ರ ಸಲ್ಲಿಸಲು ತೆರಳುತ್ತಿದ್ದರು.
ಮತ್ತಷ್ಟು ಓದಿ: ತೆಲಂಗಾಣ ಚುನಾವಣಾ ಪ್ರಚಾರದಲ್ಲೂ ಗಮನ ಸೆಳೆದ MLA ಪ್ರದೀಪ್ ಈಶ್ವರ್; ಇಲ್ಲಿದೆ ವಿಡಿಯೋ
ಘಟನೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವ್ಯಾನ್ನ ರೇಲಿಂಗ್ ಮುರಿದು ಬಿದ್ದ ನಂತರ ಮಧ್ಯದಲ್ಲಿ ನಿಂತಿದ್ದ ರಾಮ್ರಾವ್ ಮುಂದೆ ವಾಹನದ ಮೇಲೆ ಹಾಕಿದ್ದ ಸ್ಪೀಕರ್ ಮೇಲೆ ಬಿದ್ದಿದ್ದಾರೆ.
#WATCH | Telangana Minister and BRS leader KTR Rao fell down from a vehicle during an election rally in Armoor, Nizamabad district.
More details awaited. pic.twitter.com/FSNREb5bZZ
— ANI (@ANI) November 9, 2023
ಶಾಸಕರು, ಸಂಸದರು ವಾಹನದಿಂದ ಬಿದ್ದಿದ್ದಾರೆ ಆದರೆ ವ್ಯಾನ್ನ ಜತೆಯೇ ಬರುತ್ತಿದ್ದ ಪೊಲೀಸರು ಅವರನ್ನು ಹಿಡಿದುಕೊಂಡಿದ್ದಾರೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ, ರೆಡ್ಡಿ ಹಾಗೂ ರಾಮರಾವ್ ಅವರನ್ನು ತಕ್ಷಣವೇ ಕಾರಿನಲ್ಲಿ ಕರೆದೊಯ್ಯಲಾಯಿತು.
ಪ್ರಾಥಮಿಕ ತನಿಖೆಯ ಆಧಾರದ ಮೇಲೆ , ವ್ಯಾನ್ನ ಮುಂದಿದ್ದ ವಾಹನದ ಚಾಲಕ ತನ್ನ ಮುಂದೆ ಯಾರೋ ಅಡ್ಡ ಬಂದಿದ್ದಕ್ಕಾಗಿ ಬ್ರೇಕ್ ಹಾಕಬೇಕಾಯಿತು ಎಂದು ಪೊಲೀಸರು ತಿಳಿಸಿದ್ದಾರೆ, ಬಳಿಕ ಜೀವನ್ ರೆಡ್ಡಿ ನಾಮಪತ್ರ ಸಲ್ಲಿಸಿದರು. ಕೆಟಿಆರ್ ಎಂದೇ ಖ್ಯಾತರಾಗಿರುವ ರಾಮರಾವ್ ಅವರ ಆರೋಗ್ಯದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಅವರು ಕ್ಷೇಮವಾಗಿದ್ದಾರೆ. ಬಳಿಕ ಅವರು ಕೊಡಂಗಲ್ಗೆ ರೋಡ್ ಶೋನಲ್ಲಿ ಭಾಗವಹಿಸಲು ತೆರಳಿದ್ದರು. ತೆಲಂಗಾಣದಲ್ಲಿ ನವೆಂಬರ್ 30ರಂದು ವಿಧಾನಸಭಾ ಚುನಾವಣೆ ನಡೆಯಲಿದ್ದು, ಡಿಸೆಂಬರ್ 3ರಂದು ಫಲಿತಾಂಶ ಹೊರಬರಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:00 am, Fri, 10 November 23