ನಾಗಪುರ ವೈದ್ಯೆ ಜನನ ನಿಯಂತ್ರಣ ಆಪರೇಷನ್‌ಗೆ ಅರಿವಳಿಕೆ ಇಂಜೆಕ್ಷನ್ ಕೊಟ್ಟು, ಟೀ ಬ್ರೇಕ್‌ಗೆ 4 ಗಂಟೆ ಕಾಲ ಮನೆಗೆ ಹೋದರು, ಯಾಕೆ ಗೊತ್ತಾ?
ಸರ್ಕಾರದ ಯೋಜನೆಯಡಿ ಕುಟುಂಬ ನಿಯಂತ್ರಣ ಯೋಜನೆಯ ಭಾಗವಾಗಿ ಆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿಯಮಿತವಾಗಿ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ನಾಗಪುರದ ಪಾರ್ಸಿಯೋನಿ ಗ್ರಾಮದಲ್ಲಿ ಕಳೆದ ವಾರ ಇಂತಹುದೇ ಕುಟುಂಬ ನಿಯಂತ್ರಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇಲ್ಲಿ ಏಳು ಮಹಿಳೆಯರು ಮತ್ತು ಒಬ್ಬ ಪುರುಷ ಸೇರಿದಂತೆ ಒಟ್ಟು ಎಂಟು ಶಸ್ತ್ರಚಿಕಿತ್ಸೆಗಳು ನಡೆಯಬೇಕಿದ್ದವು. ಆದರೆ

ವೈದ್ಯೋ ನಾರಾಯಣೋ ಹರಿಃ ವೈದ್ಯ ಮಹಾಶಯ ಕಣ್ಣಿಗೆ ಕಾಣುವ ದೇವರು ಎಂದು ಕರೆಯಲಾಗುತ್ತದೆ… ಮನುಷ್ಯನ ಸೃಷ್ಟಿಕರ್ತ ದೇವರು… ಆದರೆ ಮರುಹುಟ್ಟು ನೀಡುವವ ವೈದ್ಯ ಎಂದು ಹೇಳಲಾಗುತ್ತದೆ … ಅದಕ್ಕಾಗಿಯೇ ವೈದ್ಯರನ್ನು ದೇವರುಗಳಿಗೆ ಹೋಲಿಸಲಾಗುತ್ತದೆ. ಅನೇಕ ಜೀವನ್ಮರಣ ಹೋರಾಟದ ಘಟನೆಗಳನ್ನು ನೋಡಿದಾಗ ವೈದ್ಯರ ವಿಷಯದಲ್ಲಿ ಇದು ನಿಜ ಅನಿಸುತ್ತದೆ. ಆದರೆ, ಕೆಲ ವೈದ್ಯರ ನಿರ್ಲಕ್ಷ್ಯದಿಂದ ರೋಗಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಇಂತಹ ಒಬ್ಬ ವೈದ್ಯರು ನಡೆಸಿರುವ ಅನಾಹುತ ಸದ್ಯಕ್ಕೆ ಎಲ್ಲರ ಕೋಪಕ್ಕೆ ಕಾರಣವಾಗಿದೆ. ಹೆರಿಗೆ ಆಗದಂತೆ ಆಪರೇಷನ್ (Nagpur surgery) ಮಾಡುವ ವೇಳೆ ಅಂದರೆ ಮಹಿಳೆಯರಿಗೆ (Women) ಜನನ ನಿಯಂತ್ರಣ ಆಪರೇಷನ್‌ಗಾಗಿ ರೋಗಿಗಳಿಗೆ ಔಷಧಿ ನೀಡಿದ ವೈದ್ಯರೊಬ್ಬರು ( Doctor), ಟೀ ಕುಡಿಯಲು ಮನೆಗೆ ಹೋದವರು 4 ಗಂಟೆ ಬಳಿಕ ಆಸ್ಪತ್ರೆಗೆ ವಾಪಸಾಗಿದ್ದಾರೆ. ಈ ಘಟನೆ ಇದೀಗ ಭಾರೀ ಸಂಚಲನ ಮೂಡಿಸಿದೆ. ಇದರಿಂದ ಜನ ಅಸಮಾಧಾನಗೊಂಡಿದ್ದಾರೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ಈ ಆತಂಕಕಾರಿ ಘಟನೆ ನಡೆದಿದೆ. ವಿವರಗಳನ್ನು ನೋಡುವುದಾದರೆ
ಸರ್ಕಾರದ ಯೋಜನೆಯಡಿ ಕುಟುಂಬ ನಿಯಂತ್ರಣ ಯೋಜನೆಯ ಭಾಗವಾಗಿ ಆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿಯಮಿತವಾಗಿ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ನಾಗಪುರದ ಪಾರ್ಸಿಯೋನಿ ಗ್ರಾಮದಲ್ಲಿ ಕಳೆದ ವಾರ ಇಂತಹುದೇ ಕುಟುಂಬ ನಿಯಂತ್ರಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇಲ್ಲಿ ಏಳು ಮಹಿಳೆಯರು ಮತ್ತು ಒಬ್ಬ ಪುರುಷ ಸೇರಿದಂತೆ ಒಟ್ಟು ಎಂಟು ಶಸ್ತ್ರಚಿಕಿತ್ಸೆಗಳು ನಡೆಯಬೇಕಿದ್ದವು. ಒಂದು ಶಸ್ತ್ರಚಿಕಿತ್ಸೆ ಮಾಡಲು ಸುಮಾರು ಒಂದೂವರೆ ಗಂಟೆ ತೆಗೆದುಕೊಳ್ಳುತ್ತದೆ. ಕೆಲವರಿಗೆ ಮಧ್ಯಾಹ್ನ ಸರ್ಜರಿ ಮಾಡಲಾಗಿದೆ. ಮಧ್ಯಾಹ್ನ 2.30ಕ್ಕೆ ನಾಲ್ವರು ರೋಗಿಗಳಿಗೆ ಅರಿವಳಿಕೆ ಮದ್ದು ನೀಡಿ ಆಪರೇಷನ್ ಥಿಯೇಟರ್ ನಿಂದ ವೈದ್ಯೆ ಬಾಲವಿ ಹೊರ ಹೋಗಿದ್ದಾರೆ.
ಆಸ್ಪತ್ರೆಯಿಂದ ಹೊರಬಂದು ತಮ್ಮ ವಾಹನ ಸ್ಟಾರ್ಟ್ ಮಾಡಿ ನೇರವಾಗಿ 40 ಕಿ.ಮೀ. ದೂರದಲ್ಲಿರುವ ತಮ್ಮ ನಿವಾಸಕ್ಕೆ ತೆರಳಿ ಟೀ ಕುಡಿಯಲು ತೆರಳಿದರು ಎಂದು ಸಂತ್ರಸ್ತ ಕುಟುಂಬದವರು ಆರೋಪಿಸಿದ್ದಾರೆ. ರಾತ್ರಿ ವಾಪಸ್ ಬಂದು ರೋಗಿಗಳಿಗೆ ಅರಿವಳಿಕೆ ಮದ್ದು ನೀಡಿ ಆಪರೇಷನ್‌ಗೆ ಒಳಪಡಿಸಿದ್ದಾರೆ. ಗ್ರಾಮಸ್ಥರು, ರೋಗಿಗಳು ಮತ್ತು ತಾಲ್ಲೂಕಿನ ಜನರು ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಘಟನೆ ಕುರಿತು ಜಿಲ್ಲಾ ವೈದ್ಯಾಧಿಕಾರಿ ಡಾ. ಅಜಯ್ ದಾವ್ಲೆ ಪ್ರತಿಕ್ರಿಯಿಸಿದ್ದಾರೆ. ಘಟನೆಯ ಕುರಿತು ತನಿಖೆ ನಡೆಸುತ್ತೇವೆ, ತನಿಖೆಯಿಂದ ಎಲ್ಲವೂ ಹೊರಬೀಳಲಿದೆ ಎಂದರು. ಮೂವರು ಸದಸ್ಯರ ಸಮಿತಿ ತನಿಖೆ ನಡೆಸುತ್ತಿದ್ದೇವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್ ಒ) ಡಾ.ಅಜಯ್ ದಾವ್ಲೆ ಹೇಳಿದರು.
ಇದನ್ನೂ ಓದಿ: ಪುಟ್ಟ ಬಾಲಕಿಯ ಮೈಮೇಲೆ ರಾಮ್ ಮತ್ತು ರಾಧಾ ಹೆಸರುಗಳು! ವೈದ್ಯರಿಗೆ ಶಾಕ್, ಎಲ್ಲಾ ದೇವರ ದಯೆ ಎನ್ನುತ್ತಿದ್ದಾರೆ ಜನ
ಇದೇ ವೇಳೆ, ಶಿಬಿರದಲ್ಲಿ ಬಹುತೇಕ ಎಲ್ಲಾ ಶಸ್ತ್ರಚಿಕಿತ್ಸೆಗಳು ಯಶಸ್ವಿಯಾಗಿವೆ ಎಂದು ಡಾ. ಅಜಯ್ ತಿಳಿಸಿದ್ದಾರೆ. ಆದರೆ, ಟೀ ಕುಡಿಯಲು ಹೋದ ವೈದ್ಯರು ನಾಲ್ಕು ಸರ್ಜರಿ ಮುಗಿಸಿದ್ದಾರೋ ಅಥವಾ..? ಈ ಬಗ್ಗೆ ಅಧಿಕಾರಿಗಳು ಸ್ಪಷ್ಟನೆ ನೀಡಿಲ್ಲ. ಆದರೆ, ಮನೆಗೆ ಹೋಗಿದ್ದ ಮಹಿಳಾ ವೈದ್ಯೆ ಡಾ. ಬಾಲ್ಯ ಅವರು ಮಧುಮೇಹದಿಂದ ಬಳಲುತ್ತಿದ್ದಾರೆ.
ನಾಲ್ಕು ಮಹಿಳೆಯರಿಗೆ ನಿರಂತರವಾಗಿ ಶಸ್ತ್ರಚಿಕಿತ್ಸೆ ನಡೆಸಿದ ನಂತರ ಸದರಿ ವೈದ್ಯರ ರಕ್ತದಲ್ಲಿನ ಸಕ್ಕರೆಯ ಮಟ್ಟವು ಕಡಿಮೆಯಾಗಿದೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಈ ಮಧ್ಯೆ ಮಾಹಿತಿ ನಿಡಿದ್ದಾರೆ. ವೈದ್ಯರು ಚಹಾ ಕೇಳಿದರು. ಆದರೆ ಪಿಎಚ್‌ಸಿಯಲ್ಲಿ ಯಾರೂ ಕೊಡಲಿಲ್ಲ. ಅವರಿಗೆ ಆರೋಗ್ಯ ಸಮಸ್ಯೆಗಳಿದ್ದು, ಮನೆಗೆ ಹೋಗಬೇಕಾದ ಅನಿವಾರ್ಯತೆ ಎದುರಾಯಿತು ಎಂದು ಅವರು ಘಟನೆಯ ವೃತ್ತಾಂತವನ್ನು ವಿವರಿಸಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ