ತೆಲಂಗಾಣ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ವಿಶೇಷ ವಿಮಾನದಲ್ಲಿ ಆಗಮಿಸಿದ ಸಿದ್ದರಾಮಯ್ಯ
ಲಭ್ಯವಿರುವ ಮಾಹಿತಿಯ ಪ್ರಕಾರ ಡಿಕೆ ಶಿವಕುಮಾರ್ ಮತ್ತು ತೆಲುಗು ಮಾತಾಡಬಲ್ಲ ರಾಜ್ಯದ ಕಾಂಗ್ರೆಸ್ ನಾಯಕರು ಸಹ ತೆಲಂಗಾಣದಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಅಂದಹಾಗೆ, ಸಿದ್ದರಾಮಯ್ಯ ಮತ್ತು ಶಿವಕುಮಾರ್ ಯಾವ ಭಾಷೆಯಲ್ಲಿ ಜನರನ್ನು ಸಂಬೋಧಿಸುತ್ತಾರೋ? ಅವರಿಗೆ ತೆಲುಗು ಭಾಷೆ ಬರುತ್ತಾ?
ಹೈದರಾಬಾದ್: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೆರೆರಾಜ್ಯ ತೆಲಂಗಾಣದಲ್ಲೂ ಜನಪ್ರಿಯರೇ? ಇರಬಹುದು ಮಾರಾಯ್ರೇ, ಹಾಗಾಗೇ; ಚುನಾವಣೆ ಎದುರಿಸುತ್ತಿರುವ ಪಕ್ಕದ ರಾಜ್ಯಕ್ಕೆ ಅವರನ್ನು ವಿಶೇಷ ವಿಮಾನದಲ್ಲಿ ಕರೆಸಿಕೊಳ್ಳಲಾಗಿದೆ. ವಿಮಾನದಲ್ಲಿ ಬಂದಿಳಿದ ಸಿದ್ದರಾಮಯ್ಯ ಅವರನ್ನು ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ (TPCC) ಸದಸ್ಯರು ಬರಮಾಡಿಕೊಳ್ಳುತ್ತಿರುವದನ್ನು ದೃಶ್ಯಗಳಲ್ಲಿ ನೋಡಬಹುದು. ಇಲ್ಲೂ ಅವರು ಹಾರ ಹಾಕಿಸಿಕೊಳ್ಳುವುದಿಲ್ಲ! ರಾಜ್ಯದ ಮಾದರಿ ತೆಲಂಗಾಣದಲ್ಲೂ ಗ್ಯಾರಂಟಿ ಯೋಜನೆಗಳನ್ನು (Guarantee schemes) ಕಾಂಗ್ರೆಸ್ ಘೋಷಣೆ ಮಾಡಿದೆ. ರಾಜ್ಯದ ನಾನಾ ಕಡೆ ರಾರಾಜಿಸುತ್ತಿರುವ ಫ್ಲೆಕ್ಸ್, ಬ್ಯಾನರ್ ಮತ್ತು ಪೋಸ್ಟರ್ ಗಳಲ್ಲಿ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರ ಭಾವಚಿತ್ರಗಳೊಂದಿಗೆ ಸಿದ್ದರಾಮಯ್ಯ ಅವರು ಫೋಟೋ ಕೂಡ ಬಳಸಲಾಗಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ ಡಿಕೆ ಶಿವಕುಮಾರ್ ಮತ್ತು ತೆಲುಗು ಮಾತಾಡಬಲ್ಲ ರಾಜ್ಯದ ಕಾಂಗ್ರೆಸ್ ನಾಯಕರು ಸಹ ತೆಲಂಗಾಣದಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಅಂದಹಾಗೆ, ಸಿದ್ದರಾಮಯ್ಯ ಮತ್ತು ಶಿವಕುಮಾರ್ ಯಾವ ಭಾಷೆಯಲ್ಲಿ ಜನರನ್ನು ಸಂಬೋಧಿಸುತ್ತಾರೋ? ಅವರಿಗೆ ತೆಲುಗು ಭಾಷೆ ಬರುತ್ತಾ? ಗೊತ್ತಿಲ್ಲ ಮಾರಾಯ್ರೇ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?

ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್ ಟ್ರಾಫಿಕ್ ಜಾಮ್

ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..

ಟಿವಿ9 ನೆಟ್ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
