ಐದು ವರ್ಷದಿಂದ ನೆನೆಗುಂದಿಗೆ ಬಿದ್ದ ಏರ್ಪೋಟ್ ಪರ್ಯಾಯ ರಸ್ತೆ: ರಸ್ತೆ ಕಾಮಗಾರಿ ಮುಗಿಸದ ಅಧಿಕಾರಿಗಳಿಗೆ ಗ್ರಾಮಸ್ಥರ ತರಾಟೆ
ಸಿಲಿಕಾನ್ ಸಿಟಿಯ ಸಿಲ್ಕ್ ಬೋರ್ಡ್ ಮತ್ತು ವೈಟ್ ಫಿಲ್ಡ್ ಕಡೆಯಿಂದ ಕೆಂಪೇಗೌಡ ಏರ್ಪೋಟ್ಗೆರ ಸಂಪರ್ಕ ಕಲ್ಪಿಸುವ ಏರ್ಪೋಟ್ ಪರ್ಯಾಯ ರಸ್ತೆ ಕಾಟಮನಲ್ಲೂರು ಕ್ರಾಸ್ ನಿಂದ ಬೂದಿಗೆರೆ ಬಾಗಲೂರು ಮೂಲಕ ನಿರ್ಮಾಣಕ್ಕೆ 2018 ರಲ್ಲಿ ಸರ್ಕಾರ ಚಾಲನೆ ನೀಡಿತ್ತು. ಆದ್ರೆ ಸರ್ಕಾರ ಚಾಲನೆ ನೀಡಿ 5 ವರ್ಷ ಕಳೆದ್ರು ಈ ರಸ್ತೆಯಲ್ಲಿ ಶೇ 50 ರಷ್ಟು ಕಾಮಗಾರಿಯು ಮುಕ್ತಾಯವಾಗಿಲ್ಲ.
ದೇವನಹಳ್ಳಿ, ನವೆಂಬರ್ 15: ಅದು ಎಲೆಕ್ಟ್ರಾನಿಕ್ ಸಿಟಿ ಸಿಲ್ಕ್ ಬೋರ್ಡ್ (Silk Board) ಕಡೆಯಿಂದ ಕೆಂಪೇಗೌಡ ಏರ್ಪೋಟ್ (Kempegowda Airpot) ಸಂಪರ್ಕ ಕಲ್ಪಿಸೋ ಪರ್ಯಾಯ ರಸ್ತೆ. ಐದು ವರ್ಷಗಳ ಹಿಂದೆಯೇ ಸರ್ಕಾರ ಆ ರಸ್ತೆಗೆ ಕೋಟಿ ಕೋಟಿ ಹಣ ಬಿಡುಗಡೆ ಮಾಡಿ ರಸ್ತೆ ನಿರ್ಮಾಣಕ್ಕೆ ಗ್ನಿನ್ ಸಿಗ್ನಲ್ ಸಹ ನೀಡಿತ್ತು. ಆದ್ರೆ ರಸ್ತೆ ನಿರ್ಮಾಣಕ್ಕೆ ಗ್ನಿನ್ ಸಿಗ್ನಲ್ ನೀಡಿ ಐದು ವರ್ಷ ಕಳೆದ್ರೂ ರಸ್ತೆ ಮಾತ್ರ ನಿರ್ಮಾಣವಾಗಿಲ್ಲ. ಹೀಗಾಗಿ ನಡು ರಸ್ತೆಯಲ್ಲಿ ಅಧಿಕಾರಿಗಳನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.
ವರ್ಷಾನುಗಟ್ಟಲೆಯಿಂದ ರಸ್ತೆ ಕಾಮಗಾರಿ ನಿಂತಲ್ಲೇ ನಿಂತಿದೆ ವಾಹನ ಸವಾರರು ಅಂಕು ಡೊಂಕು ರಸ್ತೆಯಲ್ಲಿ ಎದ್ದು ಬಿದ್ದು ಸಂಚರಿಸುತ್ತಿದ್ದಾರೆ ಮತ್ತೊಂದೆಡೆ ಸಾರ್ವಜನಿಕರು ಏರ್ಪೋಟ್ ಪರ್ಯಾಯ ರಸ್ತೆಯಲ್ಲಿ ವಾಹನಗಳನ್ನ ಅಡ್ಡಗಟ್ಟಿ ಆಕ್ರೋಶ ಹೊರ ಹಾಕ್ತಿದ್ದು ವಾಹನ ಸವಾರರ ಆಕ್ರೋಶಕ್ಕೆ ಅಧಿಕಾರಿಗಳು ಥಂಡಾ ಆಗ್ತಿದ್ದಾರೆ. ಹೌದು ಅಂದಹಾಗೆ ಸಾರ್ವಜನಿಕರು ಈ ರೀತಿ ಆಕ್ರೋಶ ಹೊರ ಹಾಕಲು ಕಾರಣ ಇದೇ ರಸ್ತೆ.
ಹೌದು ಅಂದಹಾಗೆ ಸಿಲಿಕಾನ್ ಸಿಟಿಯ ಸಿಲ್ಕ್ ಬೋರ್ಡ್ ಮತ್ತು ವೈಟ್ ಫಿಲ್ಡ್ ಕಡೆಯಿಂದ ಕೆಂಪೇಗೌಡ ಏರ್ಪೋಟ್ಗೆರ ಸಂಪರ್ಕ ಕಲ್ಪಿಸುವ ಏರ್ಪೋಟ್ ಪರ್ಯಾಯ ರಸ್ತೆ ಕಾಟಮನಲ್ಲೂರು ಕ್ರಾಸ್ ನಿಂದ ಬೂದಿಗೆರೆ ಬಾಗಲೂರು ಮೂಲಕ ನಿರ್ಮಾಣಕ್ಕೆ 2018 ರಲ್ಲಿ ಸರ್ಕಾರ ಚಾಲನೆ ನೀಡಿತ್ತು. ಆದ್ರೆ ಸರ್ಕಾರ ಚಾಲನೆ ನೀಡಿ 5 ವರ್ಷ ಕಳೆದ್ರು ಈ ರಸ್ತೆಯಲ್ಲಿ ಶೇ 50 ರಷ್ಟು ಕಾಮಗಾರಿಯು ಮುಕ್ತಾಯವಾಗಿಲ್ಲ. ಜೊತೆಗೆ ಗ್ರಾಮೀಣ ಭಾಗದಲ್ಲೆಲ್ಲ ರಸ್ತೆಯನ್ನ ಕಿತ್ತು ಹಾಕಿ ಹಾಗೆ ಬಿಟ್ಟಿದ್ದು ಎಲ್ಲೆಡೆ ಕಚ್ಚಾ ರಸ್ತೆಯಿಂದ ವಾಹನ ಸವಾರರು ಪರಾಡ್ತಿದ್ದಾರೆ. ಅಲ್ಲದೆ ಮಳೆ ಬಂದ್ರೆ ಅಂತು ರಸ್ತೆಯ ಸ್ಥಿತಿ ಅಯೋಮಯವಾಗ್ತಿದ್ದು ಪ್ರತಿನಿತ್ಯ ಅಪಘಾತಗಳಿಂದ ನೂರಾರು ಜನ ಕೈ ಕಾಲು ಕಳೆದುಕೊಳ್ತಿದ್ದಾರೆ. ಇನ್ನೂ ರಸ್ತೆ ಇಂದು ಸರಿ ಹೋಗುತ್ತೆ ನಾಳೆ ಸರಿಹೋಗುತ್ತೆ ಅಂತ ಕಳೆದ 5 ವರ್ಷದಿಂದ ಕಾದ ಕುಳಿತಿದ್ದ ಸಾರ್ವಜನಿಕರು ಇಂದು ರಸ್ತೆಗಿಳಿದು ಆಕ್ರೋಶ ಹೊರ ಹಾಕಿದ್ರು. ದೇವನಹಳ್ಳೀ ತಾಲೂಕಿನ ಬೂದಿಗೆರೆ ಬಳಿ ರಸ್ತೆ ಬದಿಯಲ್ಲಿ ಟೆಂಟ್ ಹಾಕಿಕೊಂಡು ರಸ್ತೆ ಬಂದ್ ಮಾಡಿ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ರು.
ಕಾಟಮನಲ್ಲೂರು ಕ್ರಾಸ್ ನಿಂದ ಬೂದಿಗೆರೆ ವರೆಗೂ ರಸ್ತೆಯನ್ನ ತುಂಡು ತುಂಡಾಗಿ ಹಲವರಿಗೆ ಗುತ್ತಿಗೆ ನೀಡಿದ್ದು ರಸ್ತೆ ಬದಿಯಲ್ಲಿ ಎರಡು ಕಡೆ ಚರಂಡಿ ಮಾಡಿ ಹಾಗೆ ಬಿಟ್ಟಿದ್ದಾರೆ. ಅಲ್ಲದೆ ಗುತ್ತಿಗೆದಾರರು ಮಾಡಿರುವ ಕಾಮಗಾರಿಯು ಕಳಪೆಯಿಂದ ಮಾಡಿರುವ ಕಾರಣ ಹಾಕಿರುವ ಡಾಂಬಾರು ಸಹ ಕಿತ್ತು ಹೋಗ್ತಿದೆಯಂತೆ. ಹೀಗಾಗಿ ರಸ್ತೆಯನ್ನ ಸಂಪೂರ್ಣವಾಗಿ ಹೊಸದಾಗಿ ಮಾಡಿ ಕಾಮಗಾರಿ ಮುಗಿಸುವಂತೆ ಒತ್ತಾಯಿಸಿದ್ರು. ಇನ್ನೂ ಗ್ರಾಮಸ್ಥರು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಂತೆ ಸ್ಥಳಕ್ಕೆ ಬಂದ ಚೆನ್ನರಾಯಪಟ್ಟಣ ಪೊಲೀಸರು ರಸ್ತೆ ಕಾಮಗಾರಿ ಗುತ್ತಿಗೆ ನೀಡಿರುವ ಕೆಆರ್ಡಿಸಿಎಲ್ ಅಧಿಕಾರಿಗಳನ್ನ ಸ್ಥಳಕ್ಕೆ ಕರೆಸಿದ್ರು. ಜೊತೆಗೆ ಅಧಿಕಾರಿಗಳು ಸ್ಥಳಕ್ಕೆ ಬಂದು ಸಬೂಬು ಕೊಡಲು ಆರಂಬಿಸುತ್ತಿದ್ದಂತೆ ಸಾರ್ವಜನಿಕರು ಅವರನ್ನ ತರಾಟೆಗೆ ತೆಗೆದುಕೊಂಡ್ರು. ಇನ್ನೂ ಈ ವೇಳೆ ಮಾತನಾಡಿದ ಕೆಆರ್ಡಿಸಿಎಲ್ ಅಧಿಕಾರಿ ಮುಂದಿನ ಜುಲೈ 2024 ರ ಒಳಗೆ ಕಾಮಗಾರಿ ಮುಗಿಸುವುದಾಗಿ ಜನರಿಗೆ ಭರವಸೆ ನೀಡಿದ್ರು.
ಇದನ್ನೂ ಓದಿ: ಬಿಎಂಟಿಸಿಯಿಂದಲೇ ನಗರದಲ್ಲಿ ಟ್ರಾಫಿಕ್ ಜಾಮ್, ಬೆಂಗಳೂರು ಟ್ರಾಫಿಕ್ ಪೊಲೀಸರ ಅಂಕಿ ಅಂಶ ಬಿಚ್ಚಿಟ್ಟ ರಹಸ್ಯವೇನು?
ಒಟ್ಟಾರೆ ಸರ್ಕಾರ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ವರ್ಷಗಳೆ ಹುರುಳುತ್ತಾ ಹೋದ್ರು ರಸ್ತೆ ಕಾಮಗಾರಿ ಮುಕ್ತಾಯವಾಗದಿರುವುದು ಸ್ಥಳಿಯರನ್ನ ಕೆರಳಿಸಿದೆ. ಇನ್ನಾದ್ರು ಸರ್ಕಾರ ಹಾಗೂ ಕೆಆರ್ಡಿಸಿಎಲ್ ಎಂಡಿ ಎಚ್ಚೆತ್ತು ಕಾಮಗಾರಿ ಮುಕ್ತಾಯ ಮಾಡಿಸುವ ಕೆಲಸ ಮಾಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ