Shocking News: 1 ವರ್ಷದಿಂದ ಅತ್ಯಾಚಾರ; ಸ್ವಂತ ಅಣ್ಣಂದಿರಿಂದಲೇ ಗರ್ಭಿಣಿಯಾದ ಬಾಲಕಿ

ಅಣ್ಣ-ತಂಗಿ ಸಂಬಂಧ ಬಹಳ ಪವಿತ್ರವಾದುದು. ಅಣ್ಣಂದಿರು ತಮ್ಮ ತಂಗಿಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಾರೆ. ಆದರೆ, ಘಜಿಯಾಬಾದ್​ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಸಹೋದರರಿಬ್ಬರು 14 ವರ್ಷದ ತಂಗಿಯ ಮೇಲೆ ಅತ್ಯಾಚಾರ ನಡೆಸಿ, ಆಕೆ ಗರ್ಭ ಧರಿಸುವಂತೆ ಮಾಡಿದ್ದಾರೆ.

Shocking News: 1 ವರ್ಷದಿಂದ ಅತ್ಯಾಚಾರ; ಸ್ವಂತ ಅಣ್ಣಂದಿರಿಂದಲೇ ಗರ್ಭಿಣಿಯಾದ ಬಾಲಕಿ
ಗರ್ಭಿಣಿ
Follow us
ಸುಷ್ಮಾ ಚಕ್ರೆ
|

Updated on: May 20, 2024 | 9:22 PM

ಘಜಿಯಾಬಾದ್: ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್ ಜಿಲ್ಲೆಯಲ್ಲಿ ತಮ್ಮ 14 ವರ್ಷದ ಸಹೋದರಿಯ ಮೇಲೆ 1 ವರ್ಷಕ್ಕೂ ಹೆಚ್ಚು ಕಾಲ ಅತ್ಯಾಚಾರವೆಸಗಿದ ಆರೋಪದ ಮೇಲೆ ಇಬ್ಬರು ಸಹೋದರರನ್ನು ಬಂಧಿಸಲಾಗಿದೆ. ಪದೇಪದೆ ಆ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದರಿಂದ ಇಬ್ಬರೂ ಸಹೋದರರಿಂದಾಗಿ 14 ವರ್ಷದ ಬಾಲಕಿ ಗರ್ಭ (Pregnant) ಧರಿಸಿದ್ದಾಳೆ. ಹೀಗಾಗಿ, ಇದೀಗ ಈ ಘಟನೆ ಬೆಳಕಿಗೆ ಬಂದಿದೆ.

ಉತ್ತರ ಪ್ರದೇಶದ ಘಜಿಯಾಬಾದ್ ಜಿಲ್ಲೆಯಲ್ಲಿ 23 ಮತ್ತು 20 ವರ್ಷ ವಯಸ್ಸಿನ ಇಬ್ಬರು ಸಹೋದರರು ತಮ್ಮ 14 ವರ್ಷದ ತಂಗಿಯ ಮೇಲೆ 1 ವರ್ಷಕ್ಕೂ ಹೆಚ್ಚು ಕಾಲ ಅತ್ಯಾಚಾರವೆಸಗಿದ್ದಾರೆ. ಆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರಿಂದ ಆ ಬಾಲಕಿ ಗರ್ಭ ಧರಿಸಿದ್ದಾಳೆ. ಇಬ್ಬರು ಸಹೋದರರ ವಿರುದ್ಧ ಅವರ ತಾಯಿ ತಿಲಾ ಮೋರ್ಹ್ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಭಾನುವಾರ ಅವರನ್ನು ಬಂಧಿಸಲಾಗಿದೆ ಎಂದು ಘಜಿಯಾಬಾದ್ ಪೊಲೀಸರು ಇಂದು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಶನಿವಾರ 8ನೇ ತರಗತಿಯ ವಿದ್ಯಾರ್ಥಿನಿ ಹೊಟ್ಟೆ ನೋವು ಎಂದು ಮನೆಯಲ್ಲಿ ಹೇಳಿದ್ದಳು. ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರ ಬಳಿ ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್ ಮಾಡಿಸಲು ದೆಹಲಿಯ ಡಯಾಗ್ನೋಸ್ಟಿಕ್ ಸೆಂಟರ್‌ಗೆ ಕರೆದೊಯ್ದಾಗ ಈ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಅಮಲು ಬರುವ ತೀರ್ಥ ನೀಡಿ ದೇವಸ್ಥಾನದ ಅರ್ಚಕನಿಂದ ಅತ್ಯಾಚಾರ; ಟಿವಿ ನಿರೂಪಕಿ ಆರೋಪ

ಸ್ಕ್ಯಾನಿಂಗ್ ವೇಳೆ ಆ 14 ವರ್ಷದ ಬಾಲಕಿ ಗರ್ಭಿಣಿಯಾಗಿರುವ ಬಗ್ಗೆ ವೈದ್ಯರು ತಿಳಿಸಿದ್ದಾರೆ. ಈಗಾಗಲೇ ಆ ಬಾಲಕಿ 22 ವಾರಗಳ ಗರ್ಭಿಣಿಯಾಗಿದ್ದಾಳೆ ಎಂದು ತಿಳಿದುಬಂದಿದೆ. ಇದರಿಂದ ಬಾಲಕಿಯ ತಾಯಿ ಆತಂಕಗೊಂಡಿದ್ದಾರೆ. ನಂತರ ಇದಕ್ಕೆ ಕಾರಣ ಯಾರೆಂದು ವಿಚಾರಿಸಿದಾಗ ಅವಳು 1 ವರ್ಷದಿಂದ ತನ್ನ ಸ್ವಂತ ಅಣ್ಣಂದಿರಿದಂದಲೇ ಪದೇ ಪದೇ ಲೈಂಗಿಕವಾಗಿ ಶೋಷಣೆಗೆ ಒಳಗಾಗಿದ್ದಾಳೆ ಎಂಬ ಸಂಗತಿ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ 1 ವರ್ಷದಿಂದ ತನ್ನ ಸಹೋದರರು ತನ್ನ ಮೇಲೆ ಲೈಂಗಿಕವಾಗಿ ಶೋಷಣೆ ಮಾಡುತ್ತಿದ್ದರು ಎಂದು ಆಕೆ ಅಮ್ಮನಿಗೆ ಹೇಳಿದ್ದಾಳೆ. ಇದರಿಂದಾಗಿ ಅವಳು ಗರ್ಭಿಣಿಯಾಗಿದ್ದಾಳೆ ಎಂದು ಗೊತ್ತಾಗಿದೆ. ಮನೆಯಲ್ಲಿ ಅಮ್ಮ ಇಲ್ಲದಿದ್ದಾಗ ಯುವಕರಿಬ್ಬರೂ ಶಾಲೆಗೆ ಹೋಗುತ್ತಿದ್ದ ತಂಗಿಯ ಮೇಲೆ ಅತ್ಯಾಚಾರ ಎಸಗುತ್ತಿದ್ದರು. ಅಲ್ಲದೆ, ಈ ಲೈಂಗಿಕ ದೌರ್ಜನ್ಯದ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಚಾಕೊಲೇಟ್ ಕೊಡಿಸುವುದಾಗಿ ಕರೆದುಕೊಂಡು ಹೋಗಿ 10 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಕಾಮುಕ ಅರೆಸ್ಟ್

ಆರೋಪಿಗಳ ವಿರುದ್ಧ ಐಪಿಸಿಯ ಸೆಕ್ಷನ್ 376ಡಿ (ಸಾಮೂಹಿಕ ಅತ್ಯಾಚಾರ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಶಾಲಿಮಾರ್ ಗಾರ್ಡನ್‌ನ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಸಿದ್ಧಾರ್ಥ ಗೌತಮ್ ಹೇಳಿದ್ದಾರೆ. ಇಬ್ಬರನ್ನೂ ಬಂಧಿಸಲಾಗಿದ್ದು, ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ