ಅಮಲು ಬರುವ ತೀರ್ಥ ನೀಡಿ ದೇವಸ್ಥಾನದ ಅರ್ಚಕನಿಂದ ಅತ್ಯಾಚಾರ; ಟಿವಿ ನಿರೂಪಕಿ ಆರೋಪ

ತಮಿಳುನಾಡಿನ ಟಿವಿ ನಿರೂಪಕಿಯ ಮೇಲೆ 2022ರ ಕೊನೆಯಲ್ಲಿ ಮತ್ತು 2023ರ ಆರಂಭದಲ್ಲಿ ಅತ್ಯಾಚಾರ ನಡೆದಿದೆ ಎಂದು ಹೇಳಲಾಗಿದೆ. ಆದರೆ, ಆ ಮಹಿಳೆ ಈಗ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಅಮಲು ಬರುವ ತೀರ್ಥ ನೀಡಿ ದೇವಸ್ಥಾನದ ಅರ್ಚಕನಿಂದ ಅತ್ಯಾಚಾರ; ಟಿವಿ ನಿರೂಪಕಿ ಆರೋಪ
ಅತ್ಯಾಚಾರ
Follow us
ಸುಷ್ಮಾ ಚಕ್ರೆ
|

Updated on: May 15, 2024 | 8:23 PM

ಚೆನ್ನೈ: ಪಾರಿಸ್ ಕಾರ್ನರ್‌ನಲ್ಲಿರುವ ಜನಪ್ರಿಯ ದೇವಸ್ಥಾನದ ಅರ್ಚಕರ ಮೇಲೆ ಅತ್ಯಾಚಾರದ ಆರೋಪ ಕೇಳಿಬಂದಿದೆ. ಟಿವಿ ನಿರೂಪಕಿಯೊಬ್ಬರು ತನ್ನ ಮೇಲೆ ಅತ್ಯಾಚಾರ ನಡೆದಿರುವುದರ ಬಗ್ಗೆ ವಿರುಗಂಬಾಕ್ಕಂ (Virugambakkam) ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಅತ್ಯಾಚಾರದ ಆರೋಪದ ಮೇಲೆ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಸದ್ಯಕ್ಕೆ ಇಬ್ಬರ ವಿಚಾರಣೆಯನ್ನು ನಡೆಸಲಾಗುತ್ತಿದೆ.

ಮಹಿಳೆ ನೀಡಿದ ದೂರಿನ ಪ್ರಕಾರ, ‘ಅರ್ಚಕ ಕಾರ್ತಿಕ್ ಮುನುಸಾಮಿ 2022ರ ಕೊನೆಯಲ್ಲಿ ಮತ್ತು 2023ರ ಆರಂಭದಲ್ಲಿ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ. ತೀರ್ಥಕ್ಕೆ ಅಮಲು ಬರುವ ಔಷಧಿ ಹಾಕಿ ಅದನ್ನು ನೀಡಿದ ಬಳಿಕ ಅತ್ಯಾಚಾರ ನಡೆಸಿದ್ದಾರೆ. ಈ ಬಗ್ಗೆ ಅವರೊಂದಿಗೆ ಜಗಳವಾಡಿದ ನಂತರ ಆತ ನನಗೆ ತಾಳಿ ಕಟ್ಟಿ ಮದುವೆಯಾಗುವ ಮೂಲಕ ಒಟ್ಟಿಗೆ ಜೀವನ ಪ್ರಾರಂಭಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಮದುವೆಯಾಗಬೇಕೆಂದು ನಿನ್ನ ಹೊಟ್ಟೆಯಲ್ಲಿರುವ ಭ್ರೂಣವನ್ನು ಗರ್ಭಪಾತ ಮಾಡುವಂತೆ ಒತ್ತಾಯಿಸಿದರು. ಆದರೆ, ಹಣಕ್ಕಾಗಿ ಇನ್ನೊಬ್ಬ ಪುರುಷನೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಒತ್ತಾಯಿಸಿ ಈಗ ಹಿಂಸೆ ನೀಡುತ್ತಿದ್ದಾರೆ ಎಂದು ಆ ಮಹಿಳೆ ದೂರು ನೀಡಿದ್ದಾರೆ.

ಇದನ್ನೂ ಓದಿ: ತುಮಕೂರಿನಲ್ಲಿ ಪಾಪಿ ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ

ದೂರಿನ ಪ್ರಕಾರ, ಕಾರ್ತಿಕ್ ಮುನುಸಾಮಿ 2022ರಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ 30 ವರ್ಷ ವಯಸ್ಸಿನ ಇಂಜಿನಿಯರಿಂಗ್ ಪದವೀಧರೆ ಮತ್ತು ಖಾಸಗಿ ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಂದಿಗೆ ಸ್ನೇಹ ಬೆಳೆಸಿದ್ದರು. ಬಳಿಕ ಕಾರ್ತಿಕ್ ಮುನುಸಾಮಿ ದೇವಸ್ಥಾನದಲ್ಲಿ ನಡೆಯುವ ಪ್ರವಚನ ಹಾಗೂ ಕಾರ್ಯಕ್ರಮಗಳ ಕುರಿತು ಮಹಿಳೆಗೆ ವಾಟ್ಸಾಪ್ ನಲ್ಲಿ ಕಾಲಕಾಲಕ್ಕೆ ಸಂದೇಶ ಕಳುಹಿಸುತ್ತಿದ್ದ. ಇಬ್ಬರ ನಡುವೆ ಸ್ನೇಹ ಮೂಡಿದ್ದರಿಂದ ಆ ಮಹಿಳೆ ದೇವಸ್ಥಾನಕ್ಕೆ ಬಂದಾಗಲೆಲ್ಲ ಗರ್ಭಗುಡಿಗೆ ಕರೆದೊಯ್ದು ವಿಶೇಷ ದರ್ಶನ ನೀಡಲಾಗುತ್ತಿತ್ತು.

ಕೆಲವು ವಾರಗಳ ನಂತರ, ಅವರನ್ನು ದೇವಸ್ಥಾನದಿಂದ ಮನೆಗೆ ಬಿಡುವ ನೆಪದಲ್ಲಿ ಆಕೆಯ ಮನೆಗೆ ಹೋಗಿದ್ದಾಗ ಈ ಅತ್ಯಾಚಾರ ನಡೆದಿದೆ. ಆಕೆಯ ಮನೆಯಲ್ಲಿ ಅಮಲು ಬರುವ ತೀರ್ಥ ನೀಡಿ ಅತ್ಯಾಚಾರ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ನಂತರ ಮಹಿಳೆ ಈ ವಿಷಯವಾಗಿ ಜಗಳವಾಡಿದಾಗ ಆಕೆಯ ಬಳಿ ಕ್ಷಮೆ ಯಾಚಿಸಿದರು. ಅಲ್ಲದೆ, ಗುಟ್ಟಾಗಿ ದೇವಸ್ಥಾನದಲ್ಲೇ ತಾಳಿ ಕಟ್ಟಿ ಇಬ್ಬರೂ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು.

ಇದನ್ನೂ ಓದಿ: ತಮಿಳುನಾಡು: ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ, ಮೂವರು ಅಪ್ರಾಪ್ತರು ಸೇರಿ 6 ಮಂದಿ ಬಂಧನ

ಫೆಬ್ರವರಿ 2023ರಲ್ಲಿ ಮಹಿಳೆ ತಾನು ಗರ್ಭಿಣಿ ಎಂದು ಹೇಳಿದಾಗ, ಕಾರ್ತಿಕ್ ಅವಳನ್ನು ವಡಪಳನಿಯ ಆಸ್ಪತ್ರೆಗೆ ಕರೆದೊಯ್ದು ಗರ್ಭಪಾತ ಮಾಡಿಸಿದ್ದರು. ಕೊನೆಗೆ ತನ್ನ ಸ್ನೇಹಿತನನ್ನು ಮನೆಗೆ ಕರೆದು ಆತನೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಆ ಮಹಿಳೆಗೆ ಒತ್ತಾಯಿಸಿದ್ದರು. ಅದಕ್ಕೆ ಆಕೆ ಒಪ್ಪದಿದ್ದಾಗ ದೈಹಿಕ, ಮಾನಸಿಕ ಹಿಂಸೆ ನೀಡಲು ಶುರು ಮಾಡಿದ್ದರು ಎನ್ನಲಾಗಿದೆ.

ಕಾರ್ತಿಕ್ ಮುನುಸಾಮಿ ವಿರುದ್ಧ 6 ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಪೊಲೀಸರಿಗೆ ದೇವಸ್ಥಾನದ ಅರ್ಚಕ ಕಾರ್ತಿಕ್ ಮುನುಸಾಮಿಯ ಮೊಬೈಲ್​ನಲ್ಲಿ ಆ ಮಹಿಳೆಯ ಜತೆಗಿರುವ ಖಾಸಗಿ ಚಿತ್ರಗಳು ಹಾಗೂ ವಿಡಿಯೋಗಳು ಪತ್ತೆಯಾಗಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ