AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತ್ಯಾಚಾರ ಆರೋಪ ಪ್ರಕರಣ: ವಕೀಲ ದೇವರಾಜೇಗೌಡಗೆ 14 ದಿನ ನ್ಯಾಯಾಂಗ ಬಂಧನ

ಅತ್ಯಾಚಾರ ಆರೋಪ ಪ್ರಕರಣದಲ್ಲಿ ವಕೀಲ ದೇವರಾಜೇಗೌಡಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಪ್ರಿನ್ಸಿಪಲ್‌ ಸಿ.ಜೆ‌, ಜೆಎಂಎಫ್‌ಸಿ ಜಡ್ಜ್​ ಸಿದ್ದರಾಮ.ಎಸ್‌ ಆದೇಶ ಹೊರಡಿಸಿದ್ದಾರೆ. ಹೊಳೆನರಸೀಪುರದ ಜಡ್ಜ್ ನಿವಾಸದಲ್ಲಿ ಹಾಜರುಪಡಿಸಲಾಗಿತ್ತು.

ಅತ್ಯಾಚಾರ ಆರೋಪ ಪ್ರಕರಣ: ವಕೀಲ ದೇವರಾಜೇಗೌಡಗೆ 14 ದಿನ ನ್ಯಾಯಾಂಗ ಬಂಧನ
ಅತ್ಯಾಚಾರ ಆರೋಪ ಪ್ರಕರಣ: ವಕೀಲ ದೇವರಾಜೇಗೌಡಗೆ 14 ದಿನ ನ್ಯಾಯಾಂಗ ಬಂಧನ
Follow us
ಮಂಜುನಾಥ ಕೆಬಿ
| Updated By: ಗಂಗಾಧರ​ ಬ. ಸಾಬೋಜಿ

Updated on:May 11, 2024 | 8:54 PM

ಹಾಸನ, ಮೇ 11: ಅತ್ಯಾಚಾರ ಆರೋಪ ಪ್ರಕರಣದಲ್ಲಿ (Rape case) ವಕೀಲ ದೇವರಾಜೇಗೌಡಗೆ (Devarajegowda) 14 ದಿನ ನ್ಯಾಯಾಂಗ ಬಂಧನ ವಿಧಿಸಿ ಪ್ರಿನ್ಸಿಪಲ್‌ ಸಿ.ಜೆ‌, ಜೆಎಂಎಫ್‌ಸಿ ಜಡ್ಜ್​ ಸಿದ್ದರಾಮ.ಎಸ್‌ ಆದೇಶ ಹೊರಡಿಸಿದ್ದಾರೆ. ಹೊಳೆನರಸೀಪುರದ ಜಡ್ಜ್ ನಿವಾಸದಲ್ಲಿ ಹಾಜರುಪಡಿಸಲಾಗಿತ್ತು. ಅತ್ಯಾಚಾರ ಕೇಸ್ ದಾಖಲಾಗ್ತಿದ್ದಂತೆ ದೇವರಾಜೇಗೌಡ ಲಾಕ್ ಆಗಿದ್ದು, ಚಿತ್ರದುರ್ಗದ ಹಿರಿಯೂರು ಬಳಿ ವಶಕ್ಕೆ ಪಡೆಯಲಾಗಿತ್ತು. ಬೆಳಗ್ಗೆ 5.30ಕ್ಕೆ ಹೊಳೆನರಸೀಪುರಕ್ಕೆ ಕರೆತರಲಾಗಿತ್ತು.

ನಿನ್ನೆ ಸಂಜೆ ಮತ್ತೆರೆಡು ಆಡಿಯೋ ರಿಲೀಸ್‌ ಮಾಡಿದ್ದ ದೇವರಾಜೇಗೌಡ, ವಿಡಿಯೋ ಕೂಡಾ ಹರಿ ಬಿಟ್ಟಿದ್ದರು. ಇದಾದ ಎಂಟೇ ನಿಮಿಷದಲ್ಲಿ ಮೊಬೈಲ್‌ ಲೋಕೇಶನ್‌ ಆಧಾರದಲ್ಲಿ ದೇವರಾಜೇಗೌಡನನ್ನ ನಿನ್ನೆ ರಾತ್ರಿ ಲಾಕ್‌ ಮಾಡಲಾಗಿತ್ತು. ಇವತ್ತು ಹೊಳೆನರಸೀಪುರದಲ್ಲಿ ತೀವ್ರ ವಿಚಾರಣೆ ನಡೆಸಿದ ಬಳಿಕ ಬಂಧಿಸಲಾಗಿದೆ. ಆದರೆ ಆರೋಪ ತಳ್ಳಿಹಾಕಿರುವ ದೇವರಾಜೇಗೌಡ ಸತ್ಯಕ್ಕೆ ಜಯ ಸಿಗುತ್ತೆ ಎಂದಿದ್ದರು.

ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಆರೋಪ: ವಕೀಲ ದೇವರಾಜೇಗೌಡ ಪೊಲೀಸರಿಗೆ ಸಿಕ್ಕಿದ್ದು ಹೇಗೆ? ಇಲ್ಲಿದೆ ಓದಿ

ದೇವರಾಜೇಗೌಡ ವಿಚಾರಣೆಯೇ ಪೊಲೀಸರಿಗೆ ಸವಾಲ್ ಆಗಿದ್ದು, ಪೊಲೀಸರಿಗೆ ಮರುಪ್ರಶ್ನೆ ಹಾಕಿದ್ದಾರೆ. ಸಂತ್ರಸ್ತೆ ಮಾಡಿರುವ ಆರೋಪವನ್ನೇ ಮುಂದಿಟ್ಟು ಪ್ರಶ್ನೆ ಕೇಳ್ತಿದ್ರೂ, ಇದೊಂದು ವ್ಯವಸ್ಥಿತ ಹನಿಟ್ರ್ಯಾಪ್ ಅಂತಾ ವಾದಿಸಿದ್ದಾರಂತೆ. ಬೆಂಗಳೂರಿನಲ್ಲಿ ನಾನು ದೂರು ಕೊಟ್ಟ ಬಳಿಕ ನನ್ನ ಮೇಲೆ ಕೇಸ್ ಹಾಕಿದ್ದೀರಾ ಅಂತಾ ಪ್ರಶ್ನಿಸಿದ್ದಾರಂತೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಅಶ್ಲೀಲ‌ ವಿಡಿಯೋ ಕೇಸ್: 3 ಆಡಿಯೋ ಕ್ಲಿಪ್ ಬಿಡುಗಡೆ ಮಾಡಿದ ದೇವರಾಜೇಗೌಡ

ಸದ್ಯ ದೇವರಾಜೇಗೌಡ ವಿಚಾರಣೆ ಮುಗಿಸಿ ಪೊಲೀಸರು, ವೈದ್ಯಕೀಯ ಚಿಕಿತ್ಸೆಗೊಳಪಡಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು, ದೇವರಾಜೇಗೌಡರನ್ನ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದ್ದಾರೆ.

ದೇವರಾಜೇಗೌಡ ಬಂಧನಕ್ಕೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಇದೊಂದು ರಾಜಕೀಯ ಬಂಧನ ಎಂದಿರೋ ಬಿಜೆಪಿ ಕಲಿಗಳು, ಮತ್ತಷ್ಟು ಸಾಕ್ಷ್ಯಗಳು ಹೊರಬರುತ್ತೆಂಬ ಭಯದಿಂದ ದೇವರಾಜೇಗೌಡರನ್ನ ಬಂಧಿಸಿದ್ದಾರೆ ಅಂತಾ ಆರೋಪಿಸಿದ್ದಾರೆ. ದೇವರಾಜೇಗೌಡ ಬಂಧನದ ಹಿಂದೆ ದೊಡ್ಡವರಿದ್ದಾರೆ. ರಾಜಕೀಯ ಬಂಧನ ಎಂಬ ಆರೋಪಕ್ಕೆ ಕೈ ನಾಯಕರು ತಿರುಗೇಟು ಕೊಟ್ಟಿದ್ದಾರೆ. ಕಾಂಗ್ರೆಸ್‌ ಮೇಲೇಕೆ ಗೂಬೆ ಕೂರಿಸೋದು ಅಂತಾ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:45 pm, Sat, 11 May 24