ಹೊಳೆನರಸೀಪುರ ಗ್ರಾಮಾಂತರ ಠಾಣೆ ಪೊಲೀಸರಿಂದ ವಕೀಲ ಮತ್ತು ಬಿಜೆಪಿ ಮುಖಂಡ ಡಿ ದೇವರಾಜೇಗೌಡ ವಿಚಾರಣೆ

ಹೊಳೆನರಸೀಪುರ ಗ್ರಾಮಾಂತರ ಠಾಣೆ ಪೊಲೀಸರಿಂದ ವಕೀಲ ಮತ್ತು ಬಿಜೆಪಿ ಮುಖಂಡ ಡಿ ದೇವರಾಜೇಗೌಡ ವಿಚಾರಣೆ

ಅರುಣ್​ ಕುಮಾರ್​ ಬೆಳ್ಳಿ
|

Updated on: May 11, 2024 | 10:19 AM

ಅವರನ್ನು ಬಂಧಿಸುವಂತೆ ನಿನ್ನೆ ಬೆಂಗಳೂರಲ್ಲಿ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದ್ದರು. ಹೊಳೆನರಸೀಪುರ ಗ್ರಾಮಾಂತರ ವೃತ್ತ ನಿರೀಕ್ಷರ ಕಚೇರಿಯಲ್ಲಿ ದೇವರಾಜೇಗೌಡರ ವಿಚಾರಣೆ ನಡೆದಿದ್ದು ಅವರನ್ನು ನೋಡಲು ಸಂಬಂಧಿಕರು ಆಗಮಿಸಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಅದರೆ ಪೊಲೀಸರು ಅವರನ್ನು ಕಚೇರಿ ಆವರಣದಿಂದ ಹೊರಗೆ ಕಳಿಸುತ್ತಾರೆ.

ಹಾಸನ: ಶುಕ್ರವಾರ ವರದಿಯಾಗಿರುವಂತೆ ವಕೀಲ ಮತ್ತು ಬಿಜೆಪಿ ಮುಖಂಡ ಡಿ ದೇವರಾಜೇಗೌಡನನ್ನು (D Devarajegowda) ಹಿರಿಯೂರು ಗ್ರಾಮಾಂತರ ಠಾಣೆಯ ಪೊಲೀಸರು ಕೆಅರ್ ಗೇಟ್ ಬಳಿ ಬಂಧಿಸಿ ಹೊಳೆನರಸೀಪುರದ ಗ್ರಾಮಾಂತರ ಪೊಲೀಸ್ ಠಾಣೆ (Holenarasipur Rural Police) ಪೊಲೀಸರ ವಶಕ್ಕೆ ಒಪ್ಪಸಿದ್ದಾರೆ. ದೇವರಾಜೇಗೌಡರ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿವೆ. ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯ (sexual assault) ಮತ್ತು ಜಾತಿ ನಿಂದನೆಯ ದೂರನ್ನು ಅವರ ವಿರುದ್ಧ ದಾಖಲಿಸಿದ್ದರು. 2023 ವಿಧಾನಸಭಾ ಚುನಾವಣೆಯಲ್ಲಿ ಹೊಳೆನರಸೀಪುರ ಕ್ಷೇತ್ರದಿಂದ ಹೆಚ್ ಡಿ ರೇವಣ್ಣ ವಿರುದ್ಧ ಸ್ಪರ್ಧಿಸಿ ಸೋತಿದ್ದ ದೇವರಾಜೇಗೌಡರು ಪ್ರಜ್ವಲ್ ರೇವಣ್ಣ ಸೆಕ್ಸ್ ಟೇಪುಗಳು ಸಾರ್ವಜನಿಕಗೊಂಡ ಬಳಿಕ ಪ್ರತಿದಿನ ಸುದ್ದಿಯಲ್ಲಿದ್ದರು ಮತ್ತು ದಿನಕ್ಕೊಂದು ಪತ್ರಿಕಾ ಗೋಷ್ಟಿ ನಡೆಸಿ ಹೇಳಿಕೆಗಳನ್ನು ನೀಡುತ್ತಿದ್ದರು. ಅವರನ್ನು ಬಂಧಿಸುವಂತೆ ನಿನ್ನೆ ಬೆಂಗಳೂರಲ್ಲಿ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದ್ದರು. ಹೊಳೆನರಸೀಪುರ ಗ್ರಾಮಾಂತರ ವೃತ್ತ ನಿರೀಕ್ಷರ ಕಚೇರಿಯಲ್ಲಿ ದೇವರಾಜೇಗೌಡರ ವಿಚಾರಣೆ ನಡೆದಿದ್ದು ಅವರನ್ನು ನೋಡಲು ಸಂಬಂಧಿಕರು ಆಗಮಿಸಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಅದರೆ ಪೊಲೀಸರು ಅವರನ್ನು ಕಚೇರಿ ಆವರಣದಿಂದ ಹೊರಗೆ ಕಳಿಸುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದ್ದಿದ್ದು ಗೊತ್ತಿದ್ದರೂ ಪೊಲೀಸರಿಗೆ ತಿಳಿಸದ ದೇವರಾಜೇಗೌಡನ ಬಂಧನ ಕಾಂಗ್ರೆಸ್ ಧರಣಿ