Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದ್ದಿದ್ದು ಗೊತ್ತಿದ್ದರೂ ಪೊಲೀಸರಿಗೆ ತಿಳಿಸದ ದೇವರಾಜೇಗೌಡನ ಬಂಧನ ಕಾಂಗ್ರೆಸ್ ಧರಣಿ

ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದ್ದಿದ್ದು ಗೊತ್ತಿದ್ದರೂ ಪೊಲೀಸರಿಗೆ ತಿಳಿಸದ ದೇವರಾಜೇಗೌಡನ ಬಂಧನ ಕಾಂಗ್ರೆಸ್ ಧರಣಿ

ಅರುಣ್​ ಕುಮಾರ್​ ಬೆಳ್ಳಿ
|

Updated on: May 10, 2024 | 3:49 PM

ಕಳೆದ ಎರಡು ವರ್ಷಗಳಿಂದ ಸಂತ್ರಸ್ತೆಯರಿಗೆ ನ್ಯಾಯ ಒದಗಿಸುವ ಪೋಸು ಬಿಗಿಯುತ್ತಾ ಅವರ ಲೈಂಗಿಕ ಶೋಷಣೆ ನಡೆಸಿದ್ದಾನೆ, ಅದೇ ಕಾರಣಕ್ಕೆ ಅವನನ್ನು ಕಾಮುಕ ಎನ್ನುತ್ತಿದ್ದೇವೆ, ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆದಿದ್ದು ಗೊತ್ತಿದ್ದರೂ ವಿಷಯವನ್ನು ಯಾವುದೇ ತನಿಖಾ ಸಂಸ್ಥೆಯ ಗಮನಕ್ಕೆ ತಾರದೆ ಘೋರ ಅಪರಾಧವೆಸಗಿದ್ದಾನೆ, ಹಾಗಾಗಿ ಎಸ್ಐಟಿ ಅಧಿಕಾರಿಗಳು ಅವನನ್ನು ಕೂಡಲೇ ಬಂಧಿಸಲು ಆಗ್ರಹಿಸುತ್ತೇವೆ ಎಂದು ಅವರು ಹೇಳಿದರು.

ಬೆಂಗಳೂರು: ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ (Prajwal Revanna case) ಬಿಜೆಪಿ ನಾಯಕ ಮತ್ತು ವಕೀಲ ದೇವರಾಜೇಗೌಡನದು (Devarajegowda) ದೊಡ್ಡ ಪಾತ್ರವಿದೆ ಅವರನ್ನು ಕೂಡಲೇ ಬಂಧಿಸಿ ವಿಚಾರಣೆ ನಡೆಸಬೇಕೆಂದು ನಗರ ಕಾಂಗ್ರೆಸ್ ಘಟಕ ಸದಸ್ಯರು ಇಂದು ಕಾಂಗ್ರೆಸ್ ಭವನದ ಮುಂದೆ ಧರಣಿ (protest) ನಡೆಸಿದರು. ದೇವರಾಜೇಗೌಡ ಒಬ್ಬ ಕಾಮುಕ ಮತ್ತು ಬ್ಲ್ಯಾಕ್ ಮೇಲರ್ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು. ಬಿಜೆಪಿ ನಾಯಕ ದೇವರಾಜೇಗೌಡ ಒಬ್ಬ ರೇಪಿಸ್ಟ್ ಅವನನ್ನು ಕೂಡಲೇ ಬಂಧಿಸಬೇಕೆಂದು ಬರೆದ ಪ್ಲಕಾರ್ಡ್ ಗಳನ್ನು ಪ್ರದರ್ಶಿಸಿದರು. ನಂತರ ಮಾತಾಡಿದ ಕಾಂಗ್ರೆಸ್ ಮುಖಂಡರೊಬ್ಬರು, ದೇವರಾಜೇಗೌಡ ಒಬ್ಬ ಕುತಂತ್ರ ರಾಜಕಾರಣಿ, ಒಮ್ಮೆ ರಾಜಕಾರಣಿ ಅನ್ನುತ್ತಾನೆ ಮತ್ತೊಮ್ಮೆ ವಕೀಲ ಅನ್ನುತ್ತಾನೆ, ವಕೀಲರ ಸಂಘವೇ ಇವನ ವಿರುದ್ಧ ದೂರು ದಾಖಲಿಸಿದೆ, ಕಳೆದ ಎರಡು ವರ್ಷಗಳಿಂದ ಸಂತ್ರಸ್ತೆಯರಿಗೆ ನ್ಯಾಯ ಒದಗಿಸುವ ಪೋಸು ಬಿಗಿಯುತ್ತಾ ಅವರ ಲೈಂಗಿಕ ಶೋಷಣೆ ನಡೆಸಿದ್ದಾನೆ, ಅದೇ ಕಾರಣಕ್ಕೆ ಅವನನ್ನು ಕಾಮುಕ ಎನ್ನುತ್ತಿದ್ದೇವೆ, ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆದಿದ್ದು ಗೊತ್ತಿದ್ದರೂ ವಿಷಯವನ್ನು ಯಾವುದೇ ತನಿಖಾ ಸಂಸ್ಥೆಯ ಗಮನಕ್ಕೆ ತಾರದೆ ಘೋರ ಅಪರಾಧವೆಸಗಿದ್ದಾನೆ, ಹಾಗಾಗಿ ಎಸ್ಐಟಿ ಅಧಿಕಾರಿಗಳು ಅವನನ್ನು ಕೂಡಲೇ ಬಂಧಿಸಲು ಆಗ್ರಹಿಸುತ್ತೇವೆ ಎಂದು ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಬಹಿರಂಗ ಚರ್ಚೆಗೆ ಬರುವಂತೆ ಡಿಕೆ ಶಿವಕುಮಾರ್ ಗೆ ಸವಾಲೆಸೆದ ವಕೀಲ ದೇವರಾಜೇಗೌಡ