ಬಹಿರಂಗ ಚರ್ಚೆಗೆ ಬರುವಂತೆ ಡಿಕೆ ಶಿವಕುಮಾರ್ ಗೆ ಸವಾಲೆಸೆದ ವಕೀಲ ದೇವರಾಜೇಗೌಡ

ಬಹಿರಂಗ ಚರ್ಚೆಗೆ ಬರುವಂತೆ ಡಿಕೆ ಶಿವಕುಮಾರ್ ಗೆ ಸವಾಲೆಸೆದ ವಕೀಲ ದೇವರಾಜೇಗೌಡ

ಅರುಣ್​ ಕುಮಾರ್​ ಬೆಳ್ಳಿ
|

Updated on: May 08, 2024 | 9:19 PM

ತಾನಾಗಿಯೇ ಅವರಲ್ಲಿಗೆ ಹೋಗಿದ್ದೆನೇ ಅಥವಾ ಅವರೇ ತನ್ನನ್ನು ಕರೆಸಿದ್ದರೇ? ತಮ್ಮ ಬೆಂಬಲಿಗರನ್ನು ತನ್ನಲ್ಲಿಗೆ ಕಳಿಸಿ ಏನೆಲ್ಲ ಮಾಹಿತಿ ಸಂಗ್ರಹಿಸಲು ಹೇಳಿದ್ದರು ಮೊದಲಾದ ಎಲ್ಲ ಸಂಗತಿಗಳನ್ನು ಚರ್ಚಿಸೋಣ, ಅಥವಾ ವಿಧಾನಸೌಧದ ಮುಂದೆ ಒಂದು ವೇದಿಕೆ ಮಾಡಿ, ದೊಡ್ಡ ದೊಡ್ಡ ಸ್ಪೀಕರ್ ಗಳನ್ನಿಟ್ಟು ಮೈಕ್ ಗಳನ್ನು ಹಿಡಿದು ಇಡೀ ರಾಜ್ಯಕ್ಕೆ ಕೇಳಿಸುವ ಹಾಗೆ ಮಾತಾಡೋಣ ಎಂದು ದೇವರಾಜೇಗೌಡರು ಹೇಳಿದರು

ಬೆಂಗಳೂರು: ನಗರದ ಪ್ರೆಸ್ ಕ್ಲಬ್ ನಲ್ಲಿಂದು ಮಾಧ್ಯಮದವರ ಜೊತೆ ಮಾತಾಡಿದ ವಕೀಲ ದೇವರಾಜೇಗೌಡ (Devarajegowda) ತನ್ನನ್ನು ಸುಳ್ಳುಗಾರ ಮೋಸಗಾರ ಎಂದು ಕರೆದಿರುವ ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರಿಗೆ ಪಂಥಾಹ್ವಾನ ನೀಡಿದ್ದಾರೆ. ಅವರು ಶಾಸಕಾಂಗ (legislature) ಸೇರಿದವರು ತಾನು ನ್ಯಾಯಾಂಗಕ್ಕೆ (judiciary) ಸೇರಿದವನು ಮತ್ತು ಇಬ್ಬರೂ ತಮ್ಮ ತಮ್ಮ ಕ್ಷೇತ್ರಗಳೆಡೆ ನಿಷ್ಠೆ ಮತ್ತು ಬದ್ಧತೆ ಇಟ್ಟುಕೊಂಡವರು, ತನ್ನನ್ನು ಸುಳ್ಳುಗಾರ ಎಂದಿರುವ ಅವರಿಗೆ ಸವಾಲು ಹಾಕುತ್ತೇನೆ, ಖಾಸಗಿ ವಾಹಿನಿಯೊಂದು ತನ್ನನ್ನು ಚರ್ಚೆಗೆ ಕರೆದಿದೆ, ಶಿವಕುಮಾರ್ ಸಹ ಅಲ್ಲಿಗೆ ಬರಲಿ, ಅದೇ ವೇದಿಕೆಯಲ್ಲಿ ಚರ್ಚೆ ನಡೆಯಲಿ, ತಾನಾಗಿಯೇ ಅವರಲ್ಲಿಗೆ ಹೋಗಿದ್ದೆನೇ ಅಥವಾ ಅವರೇ ತನ್ನನ್ನು ಕರೆಸಿದ್ದರೇ? ತಮ್ಮ ಬೆಂಬಲಿಗರನ್ನು ತನ್ನಲ್ಲಿಗೆ ಕಳಿಸಿ ಏನೆಲ್ಲ ಮಾಹಿತಿ ಸಂಗ್ರಹಿಸಲು ಹೇಳಿದ್ದರು ಮೊದಲಾದ ಎಲ್ಲ ಸಂಗತಿಗಳನ್ನು ಚರ್ಚಿಸೋಣ, ಅಥವಾ ವಿಧಾನಸೌಧದ ಮುಂದೆ ಒಂದು ವೇದಿಕೆ ಮಾಡಿ, ದೊಡ್ಡ ದೊಡ್ಡ ಸ್ಪೀಕರ್ ಗಳನ್ನಿಟ್ಟು ಮೈಕ್ ಗಳನ್ನು ಹಿಡಿದು ಇಡೀ ರಾಜ್ಯಕ್ಕೆ ಕೇಳಿಸುವ ಹಾಗೆ ಮಾತಾಡೋಣ ಎಂದು ದೇವರಾಜೇಗೌಡರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಅಶ್ಲೀಲ ವಿಡಿಯೋ ಹಂಚಿದವನನ್ನು ಎಸ್ಐಟಿ ತಂಡ ಇದುವರೆಗೆ ಮುಟ್ಟೇ ಇಲ್ಲ: ದೇವರಾಜೇಗೌಡ, ವಕೀಲ