Video: ಕುಡಿದ ಮತ್ತಿನಲ್ಲಿ ಪೊಲೀಸರನ್ನೇ ಥಳಿಸಿದ ಮೂವರು ಯುವತಿಯರು
ಕುಡಿತದ ಮತ್ತಿನಲ್ಲಿರುವ ಮೂವರು ಯುವತಿಯ ದುರ್ವತನೆ ಮೊಬೈನಲ್ಲಿ ಸೆರೆಯಾಗಿದ್ದು,ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪೊಲೀಸರು ಮೂವರು ಯುವತಿಯರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.
ಮುಂಬೈನಲ್ಲಿ ಕುಡಿದ ಮತ್ತಿನಲ್ಲಿ ಮೂವರು ಯುವತಿಯರು ಭಾರೀ ಅವಾಂತರ ಸೃಷ್ಟಿಸಿದ್ದಾರೆ. ಕುಡಿದ ಮತ್ತಿನಲ್ಲಿದ್ದ ಮೂವರು ಯುವತಿಯರು ಪೊಲೀಸರನ್ನೇ ಥಳಿಸಿದ್ದಾರೆ. ಈ ಘಟನೆ ಗೋಕುಲ್ ಟೌನ್‌ಶಿಪ್‌ನಲ್ಲಿರುವ ಪಂಖಾ ಫಾಸ್ಟ್ ಎಂಬ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ನಡೆದಿದೆ. ಕುಡಿತದ ಮತ್ತಿನಲ್ಲಿರುವ ಮೂವರು ಯುವತಿಯ ದುರ್ವತನೆ ಮೊಬೈನಲ್ಲಿ ಸೆರೆಯಾಗಿದ್ದು,ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪೊಲೀಸರು ಮೂವರು ಯುವತಿಯರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.
ವಿರಾರ್ ಪಶ್ಚಿಮದಲ್ಲಿರುವ ಗೋಕುಲ್ ಟೌನ್‌ಶಿಪ್‌ನಲ್ಲಿ ಪಂಖಾ ಫಾಸ್ಟ್ ಎಂಬ ಪಬ್ ಇದೆ. ಈ ಪಬ್ ನಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಈ ಬಗ್ಗೆ ಮಾಹಿತಿ ಪಡೆದ ಅರ್ನಾಳ ಸಾಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ ಮೂವರು ಕುಡಿತದ ಮತ್ತಿನಲ್ಲಿದ್ದ ಮಹಿಳೆಯರು ಪೊಲೀಸ್ ತಂಡದೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ನಂತರ ನಿಂದಿಸಿ ಥಳಿಸಿದ್ದಾರೆ. ಈ ಪ್ರಕರಣದಲ್ಲಿ ಅರ್ನಾಳ ಸಾಗರ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಅಧಿಕಾರಿ ಉತ್ಕರ್ಷ ವಂಜರಿ (25) ದೂರು ನೀಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಹಾಜರಾಗದಿದ್ದರೆ ಎಸ್ಐಟಿ ಅಧಿಕಾರಿಗಳು ಅವರಿದ್ದಲ್ಲಿಗೆ ಹೋಗಿ ಅರೆಸ್ಟ್ ಮಾಡುತ್ತಾರೆ: ಜಿ ಪರಮೇಶ್ವರ್