HD Revanna
ಕರ್ನಾಟಕದ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾದ ಎಚ್.ಡಿ. ರೇವಣ್ಣ ಹುಟ್ಟಿದ್ದು 1966ರ ಡಿಸೆಂಬರ್ 17ರಂದು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಹಿರಿಯ ಮಗ. ಎಚ್.ಡಿ. ಕುಮಾರಸ್ವಾಮಿ ಅವರ ಅಣ್ಣನಾದ ರೇವಣ್ಣ ಓದಿದ್ದು ಎಸ್ಸೆಸ್ಸೆಲ್ಸಿವರೆಗೆ ಮಾತ್ರ. ಆದರೆ ತಮ್ಮ ಹುಟ್ಟೂರು ಇರುವ ಹೊಳೆನರಸೀಪುರ ಕ್ಷೇತ್ರವನ್ನು ಜೆಡಿಎಸ್ ಭದ್ರಕೋಟೆಯನ್ನಾಗಿ ಮಾಡುವಲ್ಲಿ ಅವರ ಶ್ರಮ ಹೆಚ್ಚಿದೆ. 1994ರಲ್ಲಿ ಹೊಳೆನರಸೀಪುರ ಕ್ಷೇತ್ರದಿಂದ ಗೆದ್ದು ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಮಾಡಿದರು. 1999ರಲ್ಲಿ ಸೋತ ಬಳಿಕ 2004ರಿಂದ ಇಲ್ಲಿ ಸತತವಾಗಿ ಗೆಲುವು ಪಡೆದರು. ಎಚ್ ಡಿ ರೇವಣ್ಣ ಲೋಕೋಪಯೋಗಿ ಖಾತೆ (ಪಿಡಬ್ಲ್ಯುಡಿ) ಮತ್ತು ಇಂಧನ ಖಾತೆಗಳಿರುವ ಸಚಿವ ಸ್ಥಾನಗಳನ್ನು ನಿಭಾಯಿಸಿದ್ದಾರೆ. ಧರಂ ಸಿಂಗ್ ಮತ್ತು ಕುಮಾರಸ್ವಾಮಿ ನೇತೃತ್ವದ ಸರ್ಕಾರಗಳಲ್ಲಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಕರ್ನಾಟಕ ಹಾಲು ಒಕ್ಕೂಟ ಕೆಎಂಎಫ್ನಲ್ಲಿ 9 ವರ್ಷ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.