ಸರ್ಕಾರದ ವಿರುದ್ಧ ಸಿಡಿಯುವ ರೇವಣ್ಣ ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ಮತ್ತು ಗುಂಡೂರಾವ್ರನ್ನು ಟೀಕಿಸಲ್ಲ
ಗಮನಿಸಬೇಕಾದ ಸಂಗತಿಯೆಂದರೆ, ಜಿಲ್ಲಾಸ್ಪತ್ರೆ ಮತ್ತು ನಿರ್ದಿಷ್ಟವಾಗಿ ಹಾಸನ ಜಿಲ್ಲೆ ಅವ್ಯವಸ್ಥೆಗಳ ಆಗರವಾಗಿದ್ದರೂ ಶಾಸಕ ರೇವಣ್ಣ, ಅರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮತ್ತು ಉಸ್ತುವಾರಿ ಸಚಿವ ಕೆಎನ್ ರಾಜಣ್ಣ ಅವರನ್ನು ದೂರುವುದಿಲ್ಲ, ಇಬ್ಬರೂ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ ಎನ್ನುತ್ತಾರೆ. ಉಸ್ತುವಾರಿ ಸಚಿವನಿಗೆ ಮಂತ್ರಗಿರಿ ಬೇಕಿಲ್ಲ ಅನ್ನೋದು ರೇವಣ್ಣಗೆ ಇನ್ನೂ ಗೊತ್ತಾದಂತಿಲ್ಲ.
ಹಾಸನ, ಜುಲೈ 5: ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ಹೊಳೆನರಸೀಪುರ ಶಾಸಕ ಹೆಚ್ ಡಿ ರೇವಣ್ಣ ಅವರು ಸರ್ಕಾರದ ಕಾರ್ಯವೈಖರಿ ಮತ್ತು ಎಲ್ಲ ಇಲಾಖೆಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ (corruption) ನಡೆಯುತ್ತಿದೆ ಎಂದು ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಜಿಲ್ಲೆಯಲ್ಲಿ ಹೃದಯಾಘಾತಗಳು ಹೆಚ್ಚುತ್ತಿದ್ದರೂ ಜಿಲ್ಲಾಸ್ಪತ್ರೆಯಲ್ಲಿ ಪರಿಣಿತ ವೈದ್ಯರಿಲ್ಲ, ತೊಂದರೆಗೊಳಗಾದ ಜನ ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳಿಗೆ ಹೋಗುವ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಹೇಳಿದ ರೇವಣ್ಣ ಸಾರ್ವಜನಿಕ ಆಸ್ಪತ್ರೆಗಳನ್ನು ಮುಚ್ಚುವುದೇ ಒಳಿತು ಎಂದರು. ಖಾಸಗಿ ಅಸ್ಪತ್ರೆಗಳಲ್ಲಿ ಕೇವಲ ನಾಡಿಬಡಿತ ಪರೀಕ್ಷಿಸಲು 2-3 ಲಕ್ಷ ರೂ. ಪೀಕಲಾಗುತ್ತದೆ, ಬಡಜನ ಹಣವನ್ನು ಹೇಗೆ ಹೊಂದಿಸಿಯಾರು ಎಂದು ರೇವಣ್ಣ ಕೇಳಿದರು.
ಇದನ್ನೂ ಓದಿ: ಅತ್ಯಾಚಾರ ಕೇಸ್: ಹೊಸ ವಕೀಲರಿಗಾಗಿ ಕೋರ್ಟ್ ಮುಂದೆ ಪರಿ ಪರಿಯಾಗಿ ಬೇಡಿಕೊಂಡ ಪ್ರಜ್ವಲ್-ಭವಾನಿ ರೇವಣ್ಣ!
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ