Daily Devotional: ಮುಖದ ಮೇಲೆ ಮಚ್ಚೆ ಎಲ್ಲಿದ್ದರೆ ಅದೃಷ್ಟ ತಿಳಿಯಿರಿ
ಡಾ. ಬಸವರಾಜ ಗುರೂಜಿ ಅವರು ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಮುಖದ ಮೇಲಿನ ಮಚ್ಚೆಗಳ ಪ್ರಾಮುಖ್ಯತೆಯ ಬಗ್ಗೆ ತಿಳಿಸಿದ್ದಾರೆ. ಹಣೆ, ಕೆನ್ನೆ, ಮೂಗು ಮತ್ತು ತುಟಿಗಳ ಮೇಲಿನ ಮಚ್ಚೆಗಳು ಪುರುಷರು ಮತ್ತು ಮಹಿಳೆಯರ ಜೀವನದ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದನ್ನು ವಿವರಿಸಲಾಗಿದೆ. ಪ್ರತಿಯೊಂದು ಸ್ಥಾನದ ಮಚ್ಚೆಗಳಿಗೆ ವಿಭಿನ್ನ ಅರ್ಥಗಳಿವೆ ಎಂದು ತಿಳಿಸಲಾಗಿದೆ.
ಬೆಂಗಳೂರು, ಜುಲೈ 05: ಡಾ. ಬಸವರಾಜ ಗುರೂಜಿ ಅವರು ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಮುಖದ ಮೇಲಿನ ಮಚ್ಚೆಗಳ ಅರ್ಥವನ್ನು ವಿವರಿಸಿದ್ದಾರೆ. ಮಚ್ಚೆಗಳ ಸ್ಥಾನದ ಆಧಾರದ ಮೇಲೆ ಅವುಗಳ ಅರ್ಥವನ್ನು ವಿಶ್ಲೇಷಿಸಲಾಗಿದೆ. ಉದಾಹರಣೆಗೆ, ಹಣೆಯ ಮೇಲಿನ ಮಚ್ಚೆ ಸರಾಸರಿ ಜೀವನವನ್ನು ಸೂಚಿಸಿದರೆ, ಬಲ ಕೆನ್ನೆಯ ಮೇಲಿನ ಮಚ್ಚೆ ಪುರುಷರಿಗೆ ಸಾಂಸಾರಿಕ ಸುಖವನ್ನು ಸೂಚಿಸಿತ್ತದೆ. ಎಡ ಕೆನ್ನೆಯ ಮೇಲಿನ ಮಚ್ಚೆ ಮಹಿಳೆಯರಿಗೆ ಸಂಪತ್ತನ್ನು ಮತ್ತು ಸಮಾಜದಲ್ಲಿ ಉನ್ನತ ಸ್ಥಾನವನ್ನು ಸೂಚಿಸುತ್ತದೆ.