AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೈಂಗಿಕ ದೌರ್ಜನ್ಯ ಕೇಸ್ ನಲ್ಲಿ ಜೆಡಿಎಸ್ ಶಾಸಕ ಎಚ್​​​ಡಿ ರೇವಣ್ಣಗೆ ಬಿಗ್ ರಿಲೀಫ್‌

ಮಾಜಿ ಸಚಿವ, ಹಾಲಿ ಜೆಡಿಎಸ್ ಶಾಸಕ ಎಚ್‌.ಡಿ.ರೇವಣ್ಣಗೆ ಬೆಂಗಳೂರಿನ 42ನೇ ಎಸಿಜೆಎಂ ಕೋರ್ಟ್ ಇಂದು ದೊಡ್ಡ ರಿಲೀಫ್ ನೀಡಿದೆ. ಲೈಂಗಿಕ ದೌರ್ಜನ್ಯ ಕೇಸ್ ನಲ್ಲಿ ಐಪಿಸಿ ಸೆಕ್ಷನ್ 354ಎ ಅಡಿಯ ಆರೋಪದ ಕೇಸ್ ಪರಿಗಣನೆಗೆ ಕೋರ್ಟ್ ನಿರಾಕರಿಸಿದೆ. ಈ ಹಿಂದೆ ಇದೇ ಪ್ರಕರಣದಲ್ಲಿ ಬಂಧಿತರಾಗಿದ್ದ ರೇವಣ್ಣ ಇದೀಗ ಕೋರ್ಟ್​ ಆದೇಶದಿಂದ ನಿರಾಳರಾಗಿದ್ದಾರೆ. ಹಾಗಾದ್ರೆ, ಕೋರ್ಟ್​ ಕೈಬಿಟ್ಟ ಸೆಕ್ಷನ್ ಯಾವುದು? ಏನು ಅಪರಾಧ, ಏನು ಶಿಕ್ಷೆ ಎನ್ನುವ ವಿವರ ಇಲ್ಲಿದೆ.

ಲೈಂಗಿಕ ದೌರ್ಜನ್ಯ ಕೇಸ್ ನಲ್ಲಿ ಜೆಡಿಎಸ್ ಶಾಸಕ  ಎಚ್​​​ಡಿ ರೇವಣ್ಣಗೆ ಬಿಗ್ ರಿಲೀಫ್‌
Hd Revanna
Ramesha M
| Edited By: |

Updated on:Dec 29, 2025 | 7:39 PM

Share

ಬೆಂಗಳೂರು, (ಡಿಸೆಂಬರ್ 29): ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ( assault Case)  ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣಗೆ (HD Revanna) ರಿಲೀಫ್ ಸಿಕ್ಕಿದೆ. ಎಚ್. ಡಿ. ರೇವಣ್ಣ ವಿರುದ್ಧದ ಐಪಿಸಿ ಸೆಕ್ಷನ್ 354A ಅಡಿಯ ಪ್ರಕರಣವನ್ನು ಕೋರ್ಟ್ ಕೈ ಬಿಟ್ಟಿದೆ. ವಿಳಂಬವಾಗಿ ಕೇಸ್ ದಾಖಲಿಸಿದ ಕಾರಣಕ್ಕೆ ಲೈಂಗಿಕ ದೌರ್ಜನ್ಯ ಕೇಸ್ ನಲ್ಲಿ ಐಪಿಸಿ ಸೆಕ್ಷನ್ 354ಎ ಅಡಿಯ ಆರೋಪದ ಕೇಸ್ ಪರಿಗಣನೆಗೆ ಬೆಂಗಳೂರಿನ 42ನೇ ಎಸಿಜೆಎಂ ಜಡ್ಜ್ ಕೆ.ಎನ್.ಶಿವಕುಮಾರ್ ನಿರಾಕರಿಸಿ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ಇದೇ ಪ್ರಕರಣದಲ್ಲಿ ಬಂಧಿತರಾಗಿದ್ದ ಹೆಚ್.ಡಿ.ರೇವಣ್ಣ ವಿರುದ್ಧದ ಎರಡು ಸೆಕ್ಷನ್‌ಗಳಲ್ಲಿ ಹೈಕೋರ್ಟ್, ಸೆಕ್ಷನ್ 354 ರದ್ದುಪಡಿಸಿತ್ತು. ಇದೀಗ ಮತ್ತೊಂದು ಸೆಕ್ಷನ್​​ ಕೋರ್ಟ್ ಕೈಬಿಟ್ಟಿದ್ದು, ರೇವಣ್ಣಗೆ ರಿಲೀಫ್ ಸಿಕ್ಕಂತಾಗಿದೆ.

ಈ ಹಿಂದೆಯೂ ಒಂದು ಸೆಕ್ಷನ್​​ನಿಂದ ಬಚಾವ್

ಹೊಳೆನರಸಿಪುರದ ಮಹಿಳೆ ಹೆಚ್ ಡಿ ರೇವಣ್ಣ ವಿರುದ್ಧ ದೂರು ದಾಖಲಿಸಿದ್ದರು. ಈ ಹಿಂದೆ ಇದೇ ಪ್ರಕರಣದಲ್ಲಿ ಎಚ್‌.ಡಿ. ರೇವಣ್ಣ ಬಂಧಿತರಾಗಿದ್ದರು. ಎರಡು ಸೆಕ್ಷನ್ ಗಳಲ್ಲಿ ಹೈಕೋರ್ಟ್ ಒಂದು ಸೆಕ್ಷನ್ ರದ್ದುಪಡಿಸಿತ್ತು. 354 ಎ ಅಡಿಯ ಕೇಸ್ ಕಾಗ್ನಿಜೆನ್ಸ್ ಪಡೆಯಲು 42 ನೇ ಎಸಿಜೆಎಂ ಕೋರ್ಟ್ ನಿರಾಕರಿಸಿದೆ. ಹೀಗಾಗಿ ಐಪಿಸಿ ಸೆಕ್ಷನ್ 354ಎ ಅಡಿಯ ಕೇಸ್ ರದ್ದಾಗಿದೆ. ಮಹಿಳೆ ವಿಳಂಬವಾಗಿ ಕೇಸ್ ದಾಖಲಿಸಿದ ಕಾರಣಕ್ಕಾಗಿ ಐಪಿಸಿ ಸೆಕ್ಷನ್ 354ಎ ಅಡಿಯ ಆರೋಪದ ಕೇಸ್ ಅನ್ನು ಪರಿಗಣಿಸಲು ನಿರಾಕರಿಸಿದೆ.

ಇದನ್ನೂ ಓದಿ: ಮಹಿಳೆ ಅಪಹರಣ ಪ್ರಕರಣ; ಹೆಚ್​ಡಿ ರೇವಣ್ಣ ಜಾಮೀನು ಷರತ್ತು ಸಡಿಲಿಸಿದ ನ್ಯಾಯಾಲಯ

ಏನು ಹೇಳುತ್ತೆ ಈ 354A ಸೆಕ್ಷನ್ ?

ಯಾವುದೇ ಪುರುಷ ಈ ಕೆಳಗಿನ ಕೃತ್ಯಗಳಲ್ಲಿ ತೊಡಗಿದರೆ, ಅವನು ಲೈಂಗಿಕ ಕಿರುಕುಳದ ಅಪರಾಧವನ್ನು ಮಾಡಿದ್ದಾನೆ ಎಂದು ಪರಿಗಣಿಸಲಾಗುತ್ತದೆ. ಅಸಮ್ಮತಿಯೊಂದಿಗೆ ಮತ್ತು ಸ್ಪಷ್ಟವಾಗಿ ಲೈಂಗಿಕ ಆಸಕ್ತಿಗಳನ್ನು ತೋರಿಸುವ ದೈಹಿಕ ಸ್ಪರ್ಶ, ಲೈಂಗಿಕ ಪರವಾಗಿ ಬೇಡಿಕೆ ಅಥವಾ ವಿನಂತಿ ಮಾಡುವುದು, ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಅಶ್ಲೀಲ ಚಿತ್ರಗಳನ್ನು ತೋರಿಸುವುದು, ಲೈಂಗಿಕವಾಗಿ ಆಕ್ರಮಣಕಾರಿ ಟೀಕೆಗಳನ್ನು ಮಾಡುವುದು. ಇನ್ನು ಈ ಮೇಲಿನ ಅಪರಾಧಗಳಿಗೆ ಗರಿಷ್ಠ ಮೂರು ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ, ದಂಡ, ಅಥವಾ ಎರಡೂ.

ಸೆಕ್ಷನ್​ 354 ಅಡಿಯ ಕೇಸ್ ಅನ್ನು ಹೈಕೋರ್ಟ್ ರದ್ದುಪಡಿಸಿತ್ತು. ಈಗ 354A ಅಡಿಯ ಕೇಸ್ ಅನ್ನು ಬೆಂಗಳೂರಿನ 42ನೇ ಎಸಿಜೆಎಂ ಕೋರ್ಟ್ ಕೈಬಿಟ್ಟಿದೆ. ಹೀಗಾಗಿ ಒಟ್ಟಾರೆ ಪ್ರಕರಣದಿಂದ ಹೆಚ್ ಡಿ ರೇವಣ್ಣಗೆ ರಿಲೀಫ್ ಸಿಕ್ಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:28 pm, Mon, 29 December 25

ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆ: ಕ್ಯಾಪ್ಟನ್ ಗಿಲ್ಲಿ ನಟ ಯಾರ ಪರ?
ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆ: ಕ್ಯಾಪ್ಟನ್ ಗಿಲ್ಲಿ ನಟ ಯಾರ ಪರ?
ಕಾರಿಗೆ ಗುದ್ದಿ ಪಾದಚಾರಿ ಮೇಲೆ ಕ್ಯಾಂಟರ್ ಪಲ್ಟಿ​​: ಎದೆ ಝಲ್ ಎನಿಸೋ ದೃಶ್ಯ!
ಕಾರಿಗೆ ಗುದ್ದಿ ಪಾದಚಾರಿ ಮೇಲೆ ಕ್ಯಾಂಟರ್ ಪಲ್ಟಿ​​: ಎದೆ ಝಲ್ ಎನಿಸೋ ದೃಶ್ಯ!
ಬಾರ್​ಗೆ ನುಗ್ಗಿದ ಕೊಬ್ಬರಿ ಹೋರಿ, ಮದ್ಯಪ್ರಿಯರು ಕಕ್ಕಾಬಿಕ್ಕಿ!
ಬಾರ್​ಗೆ ನುಗ್ಗಿದ ಕೊಬ್ಬರಿ ಹೋರಿ, ಮದ್ಯಪ್ರಿಯರು ಕಕ್ಕಾಬಿಕ್ಕಿ!
ರಾಯಚೂರಲ್ಲೂ ಘರ್ಜಿಸಿದ ಜೆಸಿಬಿಗಳು: 20ಕ್ಕೂ ಅಧಿಕ ಮನೆಗಳ ತೆರವು
ರಾಯಚೂರಲ್ಲೂ ಘರ್ಜಿಸಿದ ಜೆಸಿಬಿಗಳು: 20ಕ್ಕೂ ಅಧಿಕ ಮನೆಗಳ ತೆರವು
ಅಪಾರ್ಟ್ಮೆಂಟ್​​ನಲ್ಲಿ ಸಿಲುಕಿಕೊಂಡ ಬೆಕ್ಕನ್ನು ಕಾಪಾಡಿದ ಅಗ್ನಿಶಾಮಕ ದಳ
ಅಪಾರ್ಟ್ಮೆಂಟ್​​ನಲ್ಲಿ ಸಿಲುಕಿಕೊಂಡ ಬೆಕ್ಕನ್ನು ಕಾಪಾಡಿದ ಅಗ್ನಿಶಾಮಕ ದಳ
ಬಿಗ್ ಬಾಸ್​​ನಿಂದ ಹೊರ ಬರಲು ಅದುವೇ ಕಾರಣವಾಯ್ತು; ಸೂರಜ್ ಬೇಸರ
ಬಿಗ್ ಬಾಸ್​​ನಿಂದ ಹೊರ ಬರಲು ಅದುವೇ ಕಾರಣವಾಯ್ತು; ಸೂರಜ್ ಬೇಸರ
ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ