AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜವರಾಯನ ಅಟ್ಟಹಾಸಕ್ಕೆ ನಡುರಸ್ತೆಯಲ್ಲೇ ಪ್ರಾಣಬಿಟ್ಟ ಬಾವ-ಬಾಮೈದ: ಆಗಿದ್ದೇನು?

ಭೀಕರ ರಸ್ತೆ ಅಪಘಾತದಲ್ಲಿ ಬಾವ ಮತ್ತು ಬಾಮೈದ ದಾರುಣವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ನಾಯಕರಂಡನಹಳ್ಳಿ ಬಳಿ ನಡೆದಿದೆ. ಸಿಮೆಂಟ್​​ ಬಲ್ಕರ್ ಲಾರಿಗೆ ಹಿಂಬದಿಯಿಂದ ಬೈಕ್​​ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಲಾರಿ ಚಾಲಕ ಎಸ್ಕೇಪ್​​ ಆಗಿದ್ದು, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜವರಾಯನ ಅಟ್ಟಹಾಸಕ್ಕೆ ನಡುರಸ್ತೆಯಲ್ಲೇ ಪ್ರಾಣಬಿಟ್ಟ ಬಾವ-ಬಾಮೈದ: ಆಗಿದ್ದೇನು?
ಮೃತ ಅಶೋಕ್ ಮತ್ತು ಪವನ್ ಕುಮಾರ್
ನವೀನ್ ಕುಮಾರ್ ಟಿ
| Edited By: |

Updated on: Dec 29, 2025 | 7:45 PM

Share

ದೇವನಹಳ್ಳಿ, ಡಿಸೆಂಬರ್​​ 29: ಸಿಮೆಂಟ್​​ ಸಿಮೆಂಟ್ ಬಲ್ಕರ್ ಲಾರಿಗೆ ಹಿಂಬದಿಯಿಂದ ಬೈಕ್​​ ಡಿಕ್ಕಿಯಾದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ನಾಯಕರಂಡನಹಳ್ಳಿ ಬಳಿ ನಡೆದಿದೆ. ಲಾರಿ ಚಾಲಕ ಏಕಾಏಕಿ ಬ್ರೇಕ್​​ ಹಾಕಿದ ಕಾರಣ ಹಿಂಬದಿ ಇದ್ದ ಬೈಕ್​​ ನಿಯಂತ್ರಣ ತಪ್ಪಿ ಡಿಕ್ಕಿಯಾಗಿದೆ. ಅಶೋಕ್ ಮತ್ತು ಪವನ್ ಕುಮಾರ್ ಘಟನೆಯಲ್ಲಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.

ಮೂಲತಹ ಹಿಂದೂಪುರದವರಾದ ಅಶೋಕ್ ಮತ್ತು ಪವನ್ ಕುಮಾರ್ ವೀಕೆಂಡ್ ಅಂತ ಊರಿಗೆ ಬಂದಿದ್ದು ಗ್ರಾಮದಲ್ಲಿ ಕಾಲ ಕಳೆದಿದ್ದರು. ಪವನ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಕಾರಣ ತನಗೆ ಆಫೀಸ್​​ಗೆ ತೆರಳಲು ಬಸ್ ಸಿಗಲ್ಲ ಅಂತ ಬಾಮೈದ ಅಶೋಕನಿಗೆ ಡ್ರಾಪ್ ಕೊಡಲು ಹೇಳಿದ್ದ. ಹೀಗಾಗಿ ಬೈಕ್​​ನಲ್ಲಿ ಹಿಂದೂಪುರದಿಂದ ಯಲಹಂಕದ ಕಡೆ ಇವರಿಬ್ಬರು ಹೊರಟಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ನಾಯಕರಂಡನಹಳ್ಳಿ ಬಳಿ ಇವರು ಬರುತ್ತಿದ್ದಾಗ ರಸ್ತೆಯಲ್ಲಿ ಮುಂದೆ ಸಾಗ್ತಿದ್ದ ಸಿಮೆಂಟ್ ಬಲ್ಕರ್ ಲಾರಿ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದಾನೆ. ಈ ವೇಳೆ ನಿಯಂತ್ರಣ ಕಳೆದುಕೊಂಡ ಬೈಕ್​​ ಲಾರಿಗೆ ಹಿಂಬದಿಯಿಂದ ಡಿಕ್ಕಿಯಾಗಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ನಕಲಿ ಗೋಲ್ಡ್​​ ಲೋನ್​​ ಸೃಷ್ಟಿಸಿ ಕೋಟಿ ಕೋಟಿ ವಂಚನೆ; 41 ಗ್ರಾಹಕರಿಗೆ ಟೋಪಿ ಹಾಕಿ ಮ್ಯಾನೇಜರ್ ಎಸ್ಕೇಪ್!

ಸಿಮೆಂಟ್ ಲಾರಿಗೆ ಬೈಕ್ ಡಿಕ್ಕಿ ಹೊಡೆಯುತ್ತಿದ್ದಂತೆ ಸ್ಥಳೀಯರು ಗಾಯಾಳುಗಳನ್ನ ರಕ್ಷಿಸಿ ಆಸ್ವತ್ರೆಗೆ ದಾಖಲಿಸುವ ಯತ್ನ ಮಾಡಿದ್ದಾರೆ. ಆದರೆ ಸಮಯಕ್ಕೆ ಸರಿಯಾಗಿ ಆ್ಯಂಬುಲೆನ್ಸ್​​ ಬಾರದ ಕಾರಣ ಇಬ್ಬರೂ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಘಟನೆ ಬಳಿಕ ಲಾರಿ ಚಾಲಕ ಎಸ್ಕೇಪ್​​ ಆಗಿದ್ದು, ಮನೆ ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಪಘಾತ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಪರಾರಿ ಆಗಿರುವ ಲಾರಿ ಚಾಲಕನ ಬಂಧನಕ್ಕೆ ಬಲೆ ಬೀಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಬಿಗ್ ಬಾಸ್: ಮುಚ್ಚುಮರೆ ಇಲ್ಲದೇ 3 ರಿಲೇಷನ್​ಶಿಪ್ ಬಗ್ಗೆ ನಿಜ ಹೇಳಿದ ಸೂರಜ್
ಬಿಗ್ ಬಾಸ್: ಮುಚ್ಚುಮರೆ ಇಲ್ಲದೇ 3 ರಿಲೇಷನ್​ಶಿಪ್ ಬಗ್ಗೆ ನಿಜ ಹೇಳಿದ ಸೂರಜ್
ಕಾರಿನ ಮೇಲೆ ಬಿದ್ದ ವಾಟರ್ ಟ್ಯಾಂಕರ್
ಕಾರಿನ ಮೇಲೆ ಬಿದ್ದ ವಾಟರ್ ಟ್ಯಾಂಕರ್
ಮತ್ತೊಂದು ಕೆನರಾ ಬ್ಯಾಂಕಿನಿಂದ ಗ್ರಾಹಕರಿಗೆ ಮಹಾ ಮೋಸ
ಮತ್ತೊಂದು ಕೆನರಾ ಬ್ಯಾಂಕಿನಿಂದ ಗ್ರಾಹಕರಿಗೆ ಮಹಾ ಮೋಸ
ಕೋಗಿಲು ಲೇಔಟ್​​ಗೆ ಡಿಕೆ ಶಿವಕುಮಾರ್​ ಭೇಟಿ: ಪರಿಶೀಲನೆ, ಹೇಳಿದ್ದಿಷ್ಟು
ಕೋಗಿಲು ಲೇಔಟ್​​ಗೆ ಡಿಕೆ ಶಿವಕುಮಾರ್​ ಭೇಟಿ: ಪರಿಶೀಲನೆ, ಹೇಳಿದ್ದಿಷ್ಟು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆ: ಕ್ಯಾಪ್ಟನ್ ಗಿಲ್ಲಿ ನಟ ಯಾರ ಪರ?
ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆ: ಕ್ಯಾಪ್ಟನ್ ಗಿಲ್ಲಿ ನಟ ಯಾರ ಪರ?
ಕಾರಿಗೆ ಗುದ್ದಿ ಪಾದಚಾರಿ ಮೇಲೆ ಕ್ಯಾಂಟರ್ ಪಲ್ಟಿ​​: ಎದೆ ಝಲ್ ಎನಿಸೋ ದೃಶ್ಯ!
ಕಾರಿಗೆ ಗುದ್ದಿ ಪಾದಚಾರಿ ಮೇಲೆ ಕ್ಯಾಂಟರ್ ಪಲ್ಟಿ​​: ಎದೆ ಝಲ್ ಎನಿಸೋ ದೃಶ್ಯ!
ಬಾರ್​ಗೆ ನುಗ್ಗಿದ ಕೊಬ್ಬರಿ ಹೋರಿ, ಮದ್ಯಪ್ರಿಯರು ಕಕ್ಕಾಬಿಕ್ಕಿ!
ಬಾರ್​ಗೆ ನುಗ್ಗಿದ ಕೊಬ್ಬರಿ ಹೋರಿ, ಮದ್ಯಪ್ರಿಯರು ಕಕ್ಕಾಬಿಕ್ಕಿ!
ರಾಯಚೂರಲ್ಲೂ ಘರ್ಜಿಸಿದ ಜೆಸಿಬಿಗಳು: 20ಕ್ಕೂ ಅಧಿಕ ಮನೆಗಳ ತೆರವು
ರಾಯಚೂರಲ್ಲೂ ಘರ್ಜಿಸಿದ ಜೆಸಿಬಿಗಳು: 20ಕ್ಕೂ ಅಧಿಕ ಮನೆಗಳ ತೆರವು
ಅಪಾರ್ಟ್ಮೆಂಟ್​​ನಲ್ಲಿ ಸಿಲುಕಿಕೊಂಡ ಬೆಕ್ಕನ್ನು ಕಾಪಾಡಿದ ಅಗ್ನಿಶಾಮಕ ದಳ
ಅಪಾರ್ಟ್ಮೆಂಟ್​​ನಲ್ಲಿ ಸಿಲುಕಿಕೊಂಡ ಬೆಕ್ಕನ್ನು ಕಾಪಾಡಿದ ಅಗ್ನಿಶಾಮಕ ದಳ