ಪೂರ್ತಿ ಕುಟುಂಬ ರಾಜಕಾರಣದಲ್ಲಿದ್ದರೂ ಪ್ರಜ್ವಲ್ ಪರದೇಶಿ, ಇನ್ನು ಜೈಲುವಾಸವೇ ಬದುಕು
ಜನಪ್ರತಿನಿಧಿಗಳ ನ್ಯಾಯಾಲಯ ಪ್ರಜ್ವಲ್ಗೆ ಜೀವಾವಧಿ ಶಿಕ್ಷೆ ವಿಧಿಸಿದ್ದರೂ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸುವ ಅವಕಾಶವಿದೆ ಎಂದು ಹೇಳಲಾಗುತ್ತಿದೆ. ಅದು ಸರಿ, ಅದರೆ, ಜಾಮೀನು ಕೋರಿ ಇವರು ಸಲ್ಲಿಸಿದ್ದ ಅರ್ಜಿ ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯ ಎರಡು ಕಡೆಯೂ ತಿರಸ್ಕೃತಗೊಂಡಿತ್ತು ಅನ್ನೋದನ್ನು ಮರೆಯಬಾರದು. ಮತ್ತೊಂದು ಗಮನಾರ್ಹ ಸಂಗತಿಯೆಂದರೆ, ಅವರ ಮೇಲಿನ ಮತ್ತೊಂದು ಆರೋಪದ ವಿಚಾರಣೆ ಆರಂಭವಾಗಿದೆ.
ಬೆಂಗಳೂರು, ಆಗಸ್ಟ್ 1: ಕೆ ಅರ್ ನಗರ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಅಂತ ಸಾಬೀತಾಗಿ ಕೋರ್ಟ್ ಜೀವಾವಧಿ ಶಿಕ್ಷೆ ಪ್ರಕಟಿಸಿದ ಬಳಿಕ ಅಪರಾಧಿ ಪ್ರಜ್ವಲ್ ರೇವಣ್ಣರನ್ನು ಪೊಲೀಸ್ ವ್ಯಾನ್ನಲ್ಲಿ ನಗರದ ಪರಪ್ಪನ ಅಗ್ರಹಾರದಲ್ಲಿರುವ ಸೆಂಟ್ರಲ್ ಜೈಲಿಗೆ ಕರೆದೊಯ್ಯಲಾಯಿತು. ಪ್ರಜ್ವಲ್ನ ಈಗಿನ ಮನಸ್ಥಿತಿಯ ಬಗ್ಗೆ ಒಮ್ಮೆ ಯೋಚಿಸಿ ನೋಡಿ. ಮಾಜಿ ಪ್ರಧಾನಿಯ ಮೊಮ್ಮಗ, ಅಪ್ಪ ಮಾಜಿ ಸಚಿವ ಮತ್ತು ಹಾಲಿ ಶಾಸಕ, ಚಿಕ್ಕಪ್ಪ ಕೇಂದ್ರದಲ್ಲಿ ಹಾಲಿ ಸಚಿವ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ, ಒಡಹುಟ್ಟಿದ ಅಣ್ಣ ವಿಧಾನ ಪರಿಷತ್ ಸದಸ್ಯ-ಇಷ್ಟೆಲ್ಲ ಇದ್ದರೂ ಪ್ರಜ್ವಲ್ ಇನ್ನು ತನ್ನ ಕೊನೆ ಉಸಿರಿರುವವರೆಗೆ ಜೈಲಿನಲ್ಲಿ ಕೊಳೆಯಬೇಕು. ಅವರು ಎಸಗಿದ ಅಪರಾಧಗಳು ಹೀನ, ಪಾಶವೀ, ಪೈಶಾಚಿಕ, ಸಭ್ಯ ಸಮಾಜ ಧಿಕ್ಕರಿಸುವಂಥವು ಅಂತ ಹೇಳಿದರೂ ಅಂಡರ್ ಸ್ಟೇಟ್ಮೆಂಟ್ ಅನಿಸಿಕೊಳ್ಳುತ್ತವೆ. ತಾನು ಅಧಿಕಾರ ಮತ್ತು ಶ್ರೀಮಂತಿಕೆಯ ಅಪಾಯಕಾರಿ ಮತ್ತು ಸಮಾಜಘಾತುಕ ಕಾಕ್ಟೇಲ್ ಅನ್ನೋದನ್ನು ಪ್ರಜ್ವಲ್ ಸಾಬೀತು ಮಾಡಿದ್ದಾರೆ.
ಇದನ್ನೂ ಓದಿ: Life Imprisonment to Prajwal Revanna: ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್; ಜೀವಾವಧಿ ಶಿಕ್ಷೆ ಪ್ರಕಟಿಸಿದ ಕೋರ್ಟ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

