AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸನಾಂಬೆ ದರ್ಶನಕ್ಕೆ ಬರುವಾಗ ಕಾರು ತಡೆದಿದ್ದಕ್ಕೆ ಶಾಸಕ ಹೆಚ್​.ಡಿ. ರೇವಣ್ಣ ಗರಂ

ಹಾಸನಾಂಬೆ ದರ್ಶನಕ್ಕೆ ಬರುವಾಗ ಕಾರು ತಡೆದಿದ್ದಕ್ಕೆ ಶಾಸಕ ಹೆಚ್​.ಡಿ. ರೇವಣ್ಣ ಗರಂ

ಮಂಜುನಾಥ ಕೆಬಿ
| Updated By: ಪ್ರಸನ್ನ ಹೆಗಡೆ|

Updated on: Oct 13, 2025 | 11:24 AM

Share

ಶಿಷ್ಟಾಚಾರ ಪಾಲನೆ ಅಧಿಕಾರಿಗಳಿಗೆ ತಿಳಿಸದೆ ಹಾಸನಾಂಬೆ ದರ್ಶನಕ್ಕೆ ತಮ್ಮ ಭದ್ರತಾ ವ್ಯವಸ್ಥೆ ಜೊತೆ ಬಂದ ಶಾಸಕ ಹೆಚ್​.ಡಿ. ರೇವಣ್ಣ ಅವರನ್ನು ಸಿಬ್ಬಂದಿ ತಡೆದ ಪರಿಣಾಮ ಹೈಡ್ರಾಮಾ ನಡೆದಿದೆ. ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಶಾಸಕರು ಸಿಟ್ಟಾಗಿದ್ದು, ಬಳಿಕ ಕಾರಿನಿಂದ ಇಳಿದು ನಡೆದುಕೊಂಡೇ ದರ್ಶನಕ್ಕೆ ತೆರಳಿದ್ದಾರೆ.

ಹಾಸನ, ಅಕ್ಟೋಬರ್​ 13: ಹಾಸನಾಂಬೆ ದರ್ಶನಕ್ಕೆಂದು ಬರುವಾಗ ತಮ್ಮ ಕಾರನ್ನು ತಡೆದ ಅಧಿಕಾರಿಗಳ ವಿರುದ್ಧ ಶಾಸಕ ಹೆಚ್​.ಡಿ.ರೇವಣ್ಣ (H.D. Revanna) ಗರಂ ಆದ ಪ್ರಸಂಗ ನಡೆದಿದೆ. ತಮ್ಮ ಭದ್ರತಾ ವ್ಯವಸ್ಥೆಯೊಂದಿಗೆ ಶಿಷ್ಟಾಚಾರ ಪಾಲನೆ ಅಧಿಕಾರಿಗಳಿಗೆ ತಿಳಿಸದೆ ಹಾಸನಾಂಬೆ ದರ್ಶನಕ್ಕೆ ರೇವಣ್ಣ ಆಗಮಿಸಿದ್ದರು. ಹೀಗಾಗಿ ಅವರ ಕಾರನ್ನು ಕಂದಾಯ ಇಲಾಖೆ ಸಿಬ್ಬಂದಿ ತಡೆದಿದ್ದಾರೆ. ಈ ವೇಳೆ ಗರಂ ಆದ ಶಾಸಕರು, ಬಳಿಕ ಕಾರಿನಿಂದ ಇಳಿದು ನಡೆದುಕೊಂಡು ದರ್ಶನಕ್ಕೆ ತೆರಳಿದ್ದಾರೆ. ಹೆಚ್​.ಡಿ.ರೇವಣ್ಣ, ಪತ್ನಿ ಭವಾನಿಗೆ ಸಿಬ್ಬಂದಿ ನೇರ ಎಂಟ್ರಿ ಕೊಟ್ಟಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.