ಎಸ್ಐಟಿ ಮೇಲೆ ಸರ್ಕಾರಕ್ಕೆ ಸಂಪೂರ್ಣ ವಿಶ್ವಾಸವಿದೆ, ಪ್ರಜ್ವಲ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವ ಅವಶ್ಯಕತೆಯಿಲ್ಲ: ಎಂಬಿ ಪಾಟೀಲ್
ಜ್ವಲ್ ರೇವಣ್ಣ ಪ್ರಕರಣದ ತನಿಖೆ ನಡೆಸಲು ಸರ್ಕಾರ ಎಸ್ಐಟಿಯನ್ನು ರಚಿಸಿದೆ ಮತ್ತು ಅದು ತನಿಖೆ ನಡೆಸುತ್ತಿದೆ, ತಾನು ಸರ್ಕಾರದ ಭಾಗ ಮತ್ತು ಒಬ್ಬ ಮಾಜಿ ಗೃಹ ಸಚಿವನಾಗಿರುವುದರಿಂದ ಹೇಳಿಕೆ ನೀಡುವುದು ಸರಿಯೆನಿಸಲ್ಲ. ತನಿಖಾ ತಂಡದಲ್ಲಿ ಸಮರ್ಥ ಅಧಿಕಾರಿಗಳಿದ್ದಾರೆ, ಅವರು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಿದ್ದಾರೆ ಎಂದು ಹೇಳಿದರು
ಬೆಂಗಳೂರು: ವಕೀಲ ಡಿ ದೇವರಾಜೇಗೌಡ (D Devarajegowda) ತನ್ನ ಹಿಂದೆ ದೊಡ್ಡವರಿದ್ದಾರೆ ಅಂತ ಹೇಳಿರುವುದ ರಾಜ್ಯದಲ್ಲಿ ದೊಡ್ಡಮಟ್ಟದ ಸದ್ದು ಮಾಡುತ್ತಿದೆ. ನಗರದಲ್ಲಿಂದು ಸುದ್ದಿಗೋಷ್ಟಿಯೊಂದರಲ್ಲಿ ಮಾತಾಡಿದ ಬೃಹತ್ ಕೈಗಾರಿಕೆಗಳ ಸಚಿವ ಎಂಬಿ ಪಾಟೀಲ್ (MB Patil) ಅವರಿಗೆ ದೇವರಾಜೇಗೌಡ ಹೇಳಿರುವುದನ್ನು ತಿಳಿಸಿದಾಗ ಪ್ರಜ್ವಲ್ ರೇವಣ್ಣ ಪ್ರಕರಣದ (Prajwal Revanna case) ತನಿಖೆ ನಡೆಸಲು ಸರ್ಕಾರ ಎಸ್ಐಟಿಯನ್ನು ರಚಿಸಿದೆ ಮತ್ತು ಅದು ತನಿಖೆ ನಡೆಸುತ್ತಿದೆ, ತಾನು ಸರ್ಕಾರದ ಭಾಗ ಮತ್ತು ಒಬ್ಬ ಮಾಜಿ ಗೃಹ ಸಚಿವನಾಗಿರುವುದರಿಂದ ಹೇಳಿಕೆ ನೀಡುವುದು ಸರಿಯೆನಿಸಲ್ಲ. ತನಿಖಾ ತಂಡದಲ್ಲಿ ಸಮರ್ಥ ಅಧಿಕಾರಿಗಳಿದ್ದಾರೆ, ಅವರು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಿದ್ದಾರೆ ಎಂದು ಹೇಳಿದರು. ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಸಿಬಿಐ ತನಿಖೆಎ ಒಪ್ಪಿಸಬೇಕೆಂದು ಜೆಡಿಎಸ್ ಮತ್ತು ಬಿಜೆಪಿ ನಾಯಕರು ಹೇಳುತ್ತಿದ್ದಾರಲ್ಲ? ಅಂತ ಪತ್ರಕರ್ತರು ಹೇಳಿದಾಗ, ಅದರ ಅವಶ್ಯಕತೆಯಿಲ್ಲ, ಕೇಸನ್ನು ಸಿಬಿಐಗೆ ಕೊಟ್ಟರೆ ಬಿಜೆಪಿ ವಾಶಿಂಗ್ ಮಶೀನ್ ನಲ್ಲಿ ಆರೋಪಿಗಳು ಸ್ವಚ್ಛಗೊಂಡು ಕ್ಲೀನ್ ಚಿಟ್ ಪಡೆಯುತ್ತಾರೆ. ಬಿಜೆಪಿ ನಾಯಕರೇ ಸಿಬಿಐಯನ್ನು ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ಅಂತ ಹೇಳಿದ್ದರು, ಎಸ್ಐಟಿ ಮೇಲೆ ಸರ್ಕಾರಕ್ಕೆ ವಿಶ್ವಾಸವಿದೆ ಮತ್ತು ಅವರು ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಾಣಿಸಲಿದ್ದಾರೆ ಎಂದು ಪಾಟೀಲ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ರಾಜ್ಯದಲ್ಲಿ ಸದ್ಯಕ್ಕಂತೂ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ, ಹೈಕಮಾಂಡ್ ನಿರ್ಣಯಕ್ಕೆ ಎಲ್ಲರೂ ತಲೆಬಾಗುತ್ತೇವೆ: ಎಂಬಿ ಪಾಟೀಲ್