ರಮೇಶ್ ಜಾರಕಿಹೊಳಿ ಬಳಿ ಟ್ರೇಲರ್ ಇಲ್ಲ ಪಿಕ್ಚರೂ ಇಲ್ಲ, ಎಲ್ಲ ಬುರುಡೆ: ಎಂಬಿ ಪಾಟೀಲ್, ಸಚಿವ
ಲೋಕಸಭಾ ಚುನಾವಣೆ ಬಳಿಕ ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುತ್ತೆ ಅಂತ ರಮೇಶ್ ಹೇಳಿರುವುದನ್ನು ಲೇವಡಿ ಮಾಡಿದ ಪಾಟೀಲ್, ಸರ್ಕಾರ ಅಂದರೆ ಅವರು ಪುಟಾಣಿ ಶೇಂಗಾ ವ್ಯಾಪಾರ ಅಂದುಕೊಂಡಿದ್ದಾರಾ? ಚುನಾವಣೆ ಆದ ಮೇಲೆ ಜೆಡಿಎಸ್ 10-15 ಶಾಸಕರು ಮತ್ತು ಬಿಜೆಪಿಯ ಕೆಲ ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಪಾಟೀಲ್ ಹೇಳಿದರು.
ವಿಜಯಪುರ: ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ್ (MB Patil) ಕಾಂಗ್ರೆಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಮಾಡುವಾಗ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿ, ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ (Ramesh Jarkiholi) ಟ್ರೇಲರ್, ಪಿಕ್ಚರ್ ಅಂತ ಬುರುಡೆ ಬಿಡುತ್ತಾರೆಯೇ ಹೊರತು ಅವರು ಎರಡನ್ನೂ ತೋರಿಸಲ್ಲ, ಅವರ ಮಾತನ್ನು ಯಾರೂ ಗಂಭೀರವಾಗಿ ಪರಿಗಣಿಸಲ್ಲ ಎಂದು ಹೇಳಿದರು. ಅವರ ಬಳಿ ಅಂಥದ್ದೇನಾದರೂ ಇದ್ದರೆ ಸಾರ್ಜಜನಿಕಗೊಳಿಸಲಿ, ಅವರನ್ನು ತಡೆದವರು ಯಾರು? ಪ್ರಜ್ವಲ್ ರೇವಣ್ಣ (Prajwal Revanna) ಸೆಕ್ಸ್ ಟೇಪುಗಳು ಚುನಾವಣಾ ಸಮಯದಲ್ಲೇ ಹೊರಬಂದಿವೆ, ಜಾರಕಿಹೊಳಿ ಸಹ ಚುನಾವಣೆ ನಡೆಯುತ್ತಿರುವಾಗಲೇ ಬಿಡುಗಡೆ ಮಾಡಲಿ ಎಂದು ಪಾಟೀಲ್ ಸವಾಲೆಸೆದರು. ಲೋಕಸಭಾ ಚುನಾವಣೆ ಬಳಿಕ ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುತ್ತೆ ಅಂತ ರಮೇಶ್ ಹೇಳಿರುವುದನ್ನು ಲೇವಡಿ ಮಾಡಿದ ಪಾಟೀಲ್, ಸರ್ಕಾರ ಅಂದರೆ ಅವರು ಪುಟಾಣಿ ಶೇಂಗಾ ವ್ಯಾಪಾರ ಅಂದುಕೊಂಡಿದ್ದಾರಾ? ಚುನಾವಣೆ ಆದ ಮೇಲೆ ಜೆಡಿಎಸ್ 10-15 ಶಾಸಕರು ಮತ್ತು ಬಿಜೆಪಿಯ ಕೆಲ ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಪಾಟೀಲ್ ಹೇಳಿದರು. ಪ್ರಜ್ವಲ್ ಪ್ರಕರಣದ ಹಿಂದೆ ಡಿಕೆ ಶಿವಕುಮಾರ್ ಇದ್ದಾರೆ ಎಂದು ಬಿಜೆಪಿ ನಾಯಕರು ಹೇಳುತ್ತಿರುವುದಕ್ಕೆ ಕಿಡಿಕಾರಿದ ಪಾಟೀಲ್, ಸಾವಿರಾರು ಮಹಿಳೆಯರಿಗೆ ಶಿವಕುಮಾರ್ ಹೇಳ್ತಾರಾ? ಬಿಜೆಪಿಯವರು ಮಾಡುತ್ತಿರುವುದು ತಡೆಬುಡವಿಲ್ಲದ ಆರೋಪಗಳು ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: 3 ತಿಂಗಳ ಹಿಂದೆಯೇ ಪ್ರಜ್ವಲ್ ರೇವಣ್ಣ ವಿಡಿಯೋ ಗುಟ್ಟು ರಟ್ಟು ಮಾಡಿದ್ದ ಬಿಜೆಪಿ ನಾಯಕ