ಕುಮಾರಸ್ವಾಮಿ ಹೇಳಿದ್ದೆಲ್ಲ ಸುಳ್ಳು, ಮಗ ಬ್ರಸ್ಸೆಲ್ಸ್ ನಲ್ಲಿ ಸತ್ತಾಗ ಕೇಂದ್ರ ಸರ್ಕಾರದ ನೆರವು ಕೇಳಿರಲಿಲ್ಲ: ಸಿದ್ದರಾಮಯ್ಯ
ನನ್ನ ಮಗ ಸತ್ತಿದ್ದು ಹೊರದೇಶದಲ್ಲಿ, ನಾನೇ ಹೋಗಿ ಮೃತದೇಹವನ್ನು ತೆಗೆದುಕೊಂಡು ಬಂದೆ, ಪ್ರಧಾನಿಯವರ ಸಹಾಯ ಕೇಳುವ ಸಂದರ್ಭವಾದರೂ ಯಾಕೆ ಉದ್ಭವಿಸುಸುತ್ತದೆ ಎಂದ ಸಿದ್ದರಾಮಯ್ಯ, ಕುಮಾರಸ್ವಾಮಿ ಹೇಳುತ್ತಿರುವುದೆಲ್ಲ ಸುಳ್ಳು ಎಂದರು.
ಬೆಳಗಾವಿ: ಜಿಲ್ಲೆಯ ಗೋಕಾಕ್ ನಲ್ಲಿ ಇಂದು ಆಯೋಜಿಸಲಾಗಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಭಾಗಿಯಾದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ಕಾಮೆಂಟ್ ಮಾಡಲು ನಿರಾಕರಿಸಿದರು. ನಮ್ಮ ಸರಕಾರ ಈಗಾಗಲೇ ಒಂದು ಎಸ್ ಐಟಿಯನ್ನು ರಚಿಸಿದೆ, ಅವರು ತನಿಖೆ ಮಾಡಿ ವರದಿ ನೀಡುತ್ತಾರೆ, ವರದಿಯಲ್ಲಿ ಎಲ್ಲ ಸಂಗತಿಗಳು ಬಯಲಾಗಲಿವೆ ಎಂದಷ್ಟೇ ಅವರು ಹೇಳಿದರು. ಅವರ ಹಿರಿಯ ಮಗ ರಾಕೇಶ್ ಸಿದ್ದರಾಮಯ್ಯ (Rakesh Siddaramaiah) ಬೆಲ್ಜಿಯಂನ ಬ್ರಸ್ಸೆಲ್ಸ್ ನಲ್ಲಿ ತೀರಿಕೊಂಡಾಗ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಮತ್ತು ಆಗಿನ ವಿದೇಶಾಂಗ ಸಚಿವೆ ದಿವಂಗತ ಸುಷ್ಮಾ ಸ್ವರಾಜ್ ಅವರು ಮೃತದೇಹವನ್ನು ತರಲು ನೆರವಾದರೂ ಸೌಜನ್ಯಕ್ಕಾದರೂ ಸಿದ್ದರಾಮಯ್ಯ ಆ ಸಹಾಯ ನೆನಪಿಟ್ಟುಕೊಂಡಿಲ್ಲ ಎಂದು ಕುಮಾರಸ್ವಾಮಿ ಹೇಳಿರುವುದು ಸುದ್ಧ ಸುಳ್ಳು ಎಂದು ಸಿದ್ದರಾಮಯ್ಯ ಹೇಳಿದರು. ನನ್ನ ಮಗ ಸತ್ತಿದ್ದು ಹೊರದೇಶದಲ್ಲಿ, ನಾನೇ ಹೋಗಿ ಮೃತದೇಹವನ್ನು ತೆಗೆದುಕೊಂಡು ಬಂದೆ, ಪ್ರಧಾನಿಯವರ ಸಹಾಯ ಕೇಳುವ ಸಂದರ್ಭವಾದರೂ ಯಾಕೆ ಉದ್ಭವಿಸುಸುತ್ತದೆ ಎಂದ ಸಿದ್ದರಾಮಯ್ಯ, ಕುಮಾರಸ್ವಾಮಿ ಹೇಳುತ್ತಿರುವುದೆಲ್ಲ ಸುಳ್ಳು ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಗದ್ದಿಗೌಡರ್ ಸೇರಿ ರಾಜ್ಯದ 25 ಬಿಜೆಪಿ ಸಂಸದರು ಒಮ್ಮೆಯಾದರೂ ಸಂಸತ್ತಿನಲ್ಲಿ ಬಾಯಿಬಿಟ್ರಾ? ಸಿದ್ದರಾಮಯ್ಯ