ಹುಬ್ಬಳ್ಳಿಯಲ್ಲಿ ದಿಢೀರ್ ಮಳೆ; ಧರೆಗುರುಳಿದ ಮರ, ರಸ್ತೆ ಸಂಚಾರ ಸಂಪೂರ್ಣ ಬಂದ್
ಬಿಸಿಲಿನ ಬೇಗೆಗೆ ಬಸವಳಿದಿದ್ದ ಹುಬ್ಬಳ್ಳಿ ಮಂದಿ, ಇಂದು(ಮೇ.11) ಬಂದ ದಿಢೀರ್ ಮಳೆಯಿಂದ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಕೆಲವೆಡೆ ಅನಾಹುತಗಳು ಆಗಿದ್ದು, ಜನರು ಕಂಗಾಲಾಗಿದ್ದಾರೆ. ಹುಬ್ಬಳ್ಳಿ(hubballi) ಯ ನಾರಾಯಣ ಸೋಪ, ಜನತಾ ಕ್ವಾರ್ಟರ್ಸ್ನ 10 ಕ್ಕೂ ಹೆಚ್ಚು ಮನೆಯೊಳಗಡೆ ನೀರು ನುಗ್ಗಿದೆ. ಇನ್ನು ಲಿಂಗರಾಜ ನಗರದಲ್ಲಿ ಬಿರುಗಾಳಿ ಸಹಿತ ಮಳೆಗೆ ಬೃಹತ್ ಮರವೊಂದು ರಸ್ತೆಯ ಮೇಲೆ ಬುಡ ಸಮೇತ ಧರೆಗುರುಳಿದಿದೆ.
ಹುಬ್ಬಳ್ಳಿ, ಮೇ.11: ರಾಜ್ಯ ರಾಜಧಾನಿಯಲ್ಲಿ ಕಳೆದ ಐದಾರು ದಿನದಿಂದ ಮಳೆಯಾಗುತ್ತಿತ್ತು. ಇಂದು(ಮೇ.11) ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲೂ ವರುಣನ ಆರ್ಭಟ ಜೋರಾಗಿದೆ. ದಿಢೀರ್ ಸುರಿದ ಮಳೆ(Rain)ಗೆ ಹುಬ್ಬಳ್ಳಿ ಮಂದಿ ಕಂಗಾಲಾಗಿದ್ದಾರೆ. ಇನ್ನು ಕೆಲವೆಡೆ ಅನಾಹುತಗಳಾಗಿದ್ದು, ಹುಬ್ಬಳ್ಳಿ(hubballi) ಯ ನಾರಾಯಣ ಸೋಪ, ಜನತಾ ಕ್ವಾರ್ಟರ್ಸ್ನ 10 ಕ್ಕೂ ಹೆಚ್ಚು ಮನೆಯೊಳಗಡೆ ನೀರು ನುಗ್ಗಿದೆ. ಇನ್ನು ಲಿಂಗರಾಜ ನಗರದಲ್ಲಿ ಬಿರುಗಾಳಿ ಸಹಿತ ಮಳೆಗೆ ಬೃಹತ್ ಮರವೊಂದು ರಸ್ತೆಯ ಮೇಲೆ ಬುಡ ಸಮೇತ ಧರೆಗುರುಳಿದ್ದು, ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಇನ್ನು ಒಂದು ಗಂಟೆ ಬಿಡುವ ಕೊಟ್ಟಿದ್ದ ವರುಣ, ಇದೀಗ ಮತ್ತೆ ಆರಂಭವಾಗಿದೆ. ಬಿಸಿಲಿನ ಬೇಗೆಗೆ ಬಸವಳಿದಿದ್ದ ಹುಬ್ಬಳ್ಳಿ ಮಂದಿ, ಮಳೆಯಿಂದ ನಿಟ್ಟುಸಿರು ಬಿಟ್ಟಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos