ಚಿಕ್ಕಮಗಳೂರು ಜಿಲ್ಲೆಯಲ್ಲಿ ಇವತ್ತು ಸಹ ಬಿರುಸಿನ ಗಾಳಿಯೊಂದಿಗೆ ಭಾರೀ ಮಳೆ, ಮಲೆನಾಡಿಗೆ ಎಂದಿನ ಕಳೆ!
ಈಗ ಸುರಿಯುತ್ತಿರುವುದು ಬೇಸಿಗೆಯ ಅಕಾಲಿಕ ಮಳೆಯಾಗಿರುವುದರಿಂದ ಇದು ಈ ಬಾರಿ ಉತ್ತಮ ಮಳೆಯಾಗುವ ಮುನ್ಸೂಚನೆ ಅಲ್ಲವೇ ಅಲ್ಲ. ಮಾನ್ಸೂನ್ ಕರ್ನಾಟಕ ಪ್ರವೇಶಿಸಲು ಇನ್ನೂ ಒಂದು ತಿಂಗಳು ಬಾಕಿಯಿದೆ. ಅಂದಹಾಗೆ, ರಾಜ್ಯದ ರಾಜಧಾನಿ ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಇವತ್ತು ಸಹ ಮಳೆಯಾಗಿದೆ.
ಚಿಕ್ಕಮಗಳೂರು: ಕಾಫೀನಾಡು (coffee cup) ಮತ್ತು ಮಲೆನಾಡು ಚಿಕ್ಕಮಗಳೂರಲ್ಲಿ ಮಳೆಗಾಲ (rainy season) ಶುರುವಾದಂತಿದೆ ಮಾರಾಯ್ರೇ. ಈ ವಾರದಲ್ಲಿ ಮೂರನೇ ಬಾರಿಗೆ ಜಿಲ್ಲೆಯಲ್ಲಿ ಮಳೆಯಾಗಿದೆ. ಟಿವಿ9 ಚಿಕ್ಕಮಗಳೂರು ವರದಿಗಾರ ನೀಡಿರುವ ಮಾಹಿತಿಯ ಪ್ರಕಾರ ಚಿಕ್ಕಮಗಳೂರು ನಗರವಲ್ಲದೆ (Chikmagalur city), ಜಯಪುರ, ಎನ್ ಆರ್ ಪುರ ಮತ್ತು ಮೂಡಿಗೆರೆಯಲ್ಲಿ ಮಳೆಯಾಗಿದೆ. ಕಳೆದ ಎರಡು ಸಲದ ಮಳೆಗಿಂತ ಇವತ್ತಿನ ಮಳೆ ಜೋರಾಗಿದೆ. ಬಿರುಸಿನ ಮಳೆಯೊಂದಿಗೆ ಜೋರಾಗಿ ಗಾಳಿ ಬೀಸುತ್ತಿದೆ. ಚಿಕ್ಕಮಗಳೂರು ಪಶ್ಚಿಮಘಟ್ಟಗಳ ಮಡಿಲಲ್ಲಿರುವುದರಿಂದ ಪ್ರದೇಶದಲ್ಲಿ ಮಳೆಗೇನೂ ಕೊರತೆ ಇರಲ್ಲ. ಅದರೆ ಕಳೆದ ಮಾನ್ಸೂನ್ ಸೀಸನ್ ನಲ್ಲಿ ಈ ಪ್ರದೇಶದಲ್ಲೂ ಕೊರತೆ ಮಳೆಯಾಗಿತ್ತು. ಈಗ ಸುರಿಯುತ್ತಿರುವುದು ಬೇಸಿಗೆಯ ಅಕಾಲಿಕ ಮಳೆಯಾಗಿರುವುದರಿಂದ ಇದು ಈ ಬಾರಿ ಉತ್ತಮ ಮಳೆಯಾಗುವ ಮುನ್ಸೂಚನೆ ಅಲ್ಲವೇ ಅಲ್ಲ. ಮಾನ್ಸೂನ್ ಕರ್ನಾಟಕ ಪ್ರವೇಶಿಸಲು ಇನ್ನೂ ಒಂದು ತಿಂಗಳು ಬಾಕಿಯಿದೆ. ಅಂದಹಾಗೆ, ರಾಜ್ಯದ ರಾಜಧಾನಿ ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಇವತ್ತು ಸಹ ಮಳೆಯಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮಳೆಗಾಲದಲ್ಲೇ ಆಗಲಿದೆ ‘ಭಗೀರಥ’ನ ಎಂಟ್ರಿ; ಮಂಡಳಿ ಅಧ್ಯಕ್ಷರಿಂದ ಟೀಸರ್ ಬಿಡುಗಡೆ