Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಂಭೀರ ಅರೋಪ ಹೊತ್ತು ಪೊಲೀಸರ ವಶದಲ್ಲಿದ್ದರೂ ದೇವರಾಜೇಗೌಡರ ಆತ್ಮವಿಶ್ವಾಸಕ್ಕೆ ಧಕ್ಕೆಯಾಗಿಲ್ಲ!

ಗಂಭೀರ ಅರೋಪ ಹೊತ್ತು ಪೊಲೀಸರ ವಶದಲ್ಲಿದ್ದರೂ ದೇವರಾಜೇಗೌಡರ ಆತ್ಮವಿಶ್ವಾಸಕ್ಕೆ ಧಕ್ಕೆಯಾಗಿಲ್ಲ!

ಅರುಣ್​ ಕುಮಾರ್​ ಬೆಳ್ಳಿ
|

Updated on: May 11, 2024 | 5:23 PM

ಅವರ ಥಮ್ಸ್ ಅಪ್ ಸನ್ನೆ ಅತ್ಮವಿಶ್ವಾಸದ ಪ್ರತೀಕವೆನಿಸುತ್ತದೆ. ಪೊಲೀಸರ ವಶದಲ್ಲಿದ್ದರೂ ಅವರು ಧೃತಿಗೆಟ್ಟಿಲ್ಲ. ಮಹಿಳೆ ಮೇಲೆ ಲೈಂಗಿಕ ಅತ್ಯಾಚಾರ ನಡೆಸಿದ ಗುರುತರವಾದ ಆರೋಪ ಅವರ ಮೇಲಿದೆ. ದೇವೇರಾಜೇಗೌಡರ ಡೆವಿಲ್ ಮೇ ಕೇರ್ ಧೋರಣೆ ನೋಡಿದರೆ, ನನ್ನ ಹಿಂದೆ ದೊಡ್ಡ ಜನ ಇದ್ದಾರೆ ಅಂತ ಅವರು ಹೇಳಿದ್ದರಲ್ಲಿ ಸತ್ಯಾಂಶ ಇರುವಂತೆ ಭಾಸವಾಗುತ್ತದೆ.

ಹಾಸನ: ಹೊಳೆನರಸೀಪುರದ ಸರ್ಕಲ್ ಇನ್ಸ್ ಪೆಕ್ಟರ್ ಕಚೇರಿಯಲ್ಲಿ (circle inspector) ವಕೀಲ ಮತ್ತು ಬಿಜೆಪಿ ಮುಖಂಡ ಡಿ ದೆವರಾಜೇಗೌಡರ (D Devarajegowda) ವಿಚಾರಣೆ ನಡೆಯುತ್ತಿದೆ. ದೇವರಾಜೇಗೌಡರ ಕಾರನ್ನು ವಶಕ್ಕೆ ಪಡೆದ ಪೊಲೀಸರು ಅವರ ಅವರ ಸಮ್ಮುಖದಲ್ಲೇ ವಾಹನದ ತಪಾಸಣೆ ನಡೆಸಿದರು. ಅವರ ಕಾರಲ್ಲಿದ್ದ ಸಾಮಾನುಗಳನ್ನು ಪೊಲೀಸರ ವಶಪಡಿಸಿಕೊಂಡಿದ್ದಾರೆ. ಕಾರಿನ ತಪಾಸಣೆ ಮಾಡಿದ ಬಳಿಕ ದೇವರಾಜೇಗೌಡರನ್ನು ವಾಪಸ್ಸು ಕಚೇರಿಯೊಳಗೆ ಕರೆದೊಯ್ಯುವಾಗ ಸಹಜವಾಗೇ ಬೈಟ್ ಗಾಗಿ ಮಾಧ್ಯಮದವರು ದುಂಬಾಲು ಬಿದ್ದರು. ಪೊಲೀಸರ ಸರ್ಪಗಾವಲು ಬೇಧಿಸಿ ದೇವರಾಜೇಗೌಡರ ಸನಿಹ ಹೋಗುವುದು ಸಾಧ್ಯವಿರಲಿಲ್ಲ. ಹಾಗಾಗೇ, ಕೆಲ ಪತ್ರಕರ್ತರು ಗೌಡ್ರೇ, ಗೌಡ್ರೇ ಅಂತ ಕೂಗಿದರು. ಕೂಗಿದವರ ಕಡೆ ತಿರಿಗಿ ನೋಡಿದ ಅವರು ಮುಗುಳ್ನಕ್ಕು ಥಮ್ಸ್ ಅಪ್ (thumbs up) ಮಾಡುತ್ತಾ ಒಳಗಡೆ ಹೋದರು. ಅವರ ಥಮ್ಸ್ ಅಪ್ ಸನ್ನೆ ಅತ್ಮವಿಶ್ವಾಸದ ಪ್ರತೀಕವೆನಿಸುತ್ತದೆ. ಪೊಲೀಸರ ವಶದಲ್ಲಿದ್ದರೂ ಅವರು ಧೃತಿಗೆಟ್ಟಿಲ್ಲ. ಮಹಿಳೆ ಮೇಲೆ ಲೈಂಗಿಕ ಅತ್ಯಾಚಾರ ನಡೆಸಿದ ಗುರುತರವಾದ ಆರೋಪ ಅವರ ಮೇಲಿದೆ. ದೇವೇರಾಜೇಗೌಡರ ಡೆವಿಲ್ ಮೇ ಕೇರ್ ಧೋರಣೆ ನೋಡಿದರೆ, ನನ್ನ ಹಿಂದೆ ದೊಡ್ಡ ಜನ ಇದ್ದಾರೆ ಅಂತ ಅವರು ಹೇಳಿದ್ದರಲ್ಲಿ ಸತ್ಯಾಂಶ ಇರುವಂತೆ ಭಾಸವಾಗುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಪ್ರಜ್ವಲ್ ರೇವಣ್ಣ ಪ್ರಕರಣ; ಎಸ್ಐಟಿ ತನಿಖೆ ಒನ್ ವೇನಲ್ಲಿ ಸಾಗುತ್ತಿರುವ ಕಾರಣ ಸಿಬಿಐಗೆ ವಹಿಸಿಕೊಡಬೇಕು: ಜಿಟಿ ದೇವೇಗೌಡ