30 ಗ್ರಾಂ ಚಿನ್ನ​ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ: ಪೊಲೀಸರಿಂದ ಸನ್ಮಾನ

30 ಗ್ರಾಂ ಚಿನ್ನ​ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ: ಪೊಲೀಸರಿಂದ ಸನ್ಮಾನ

ಅಮೀನ್​ ಸಾಬ್​
| Updated By: ಗಂಗಾಧರ​ ಬ. ಸಾಬೋಜಿ

Updated on: May 11, 2024 | 5:31 PM

ಆಟೋದಲ್ಲಿ ಮರೆತು ಬಿಟ್ಟು ಹೋಗಿದ್ದ 30 ಗ್ರಾಂ ಚಿನ್ನ ಇರುವ ಬ್ಯಾಗ್​ ಅನ್ನು ವಾಪಸ್​ ಪ್ರಯಾಣಿಕರಿಗೆ ಹಿಂತಿರುಗಿಸುವ ಮೂಲಕ ಆಟೋ ಚಾಲಕ ಪ್ರಾಮಾಣಿಕತೆ ಮೆರೆದಿರುವಂತಹ ಘಟನೆ ಯಾದಗಿರಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತಿರುಪತಿ ಚೌಹಾಣ್ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ. ಚಾಲಕನ ಪ್ರಾಮಾಣಿಕತೆ ಕಂಡು ಪೊಲೀಸರು ಸನ್ಮಾನಿಸಿದ್ದಾರೆ.

ಯಾದಗಿರಿ, ಮೇ 11: ಆಟೋದಲ್ಲಿ ಮರೆತು ಬಿಟ್ಟು ಹೋಗಿದ್ದ 30 ಗ್ರಾಂ ಚಿನ್ನ (gold) ಇರುವ ಬ್ಯಾಗ್​ ಅನ್ನು ವಾಪಸ್​ ಪ್ರಯಾಣಿಕರಿಗೆ ಹಿಂತಿರುಗಿಸುವ ಮೂಲಕ ಆಟೋ ಚಾಲಕ (auto driver) ಪ್ರಾಮಾಣಿಕತೆ ಮೆರೆದಿರುವಂತಹ ಘಟನೆ ಯಾದಗಿರಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತಿರುಪತಿ ಚೌಹಾಣ್ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ. ಮದುವೆಗೆ ಬಂದು ವಾಪಸ್ ಊರಿಗೆ ಹೋಗುತ್ತಿದ್ದ ಪ್ರಯಾಣಿಕ ಜಾವೇದ್ ಎಂಬುವವರು ಆಟೋದಲ್ಲಿ ಬ್ಯಾಗ್ ಬಿಟ್ಟು ಹೋಗಿದ್ದಾರೆ. ಬಳಿಕ ಇದನ್ನು ಗನಮಿಸಿದ ತಿರುಪತಿ ಚೌಹಾಣ್​ ಬ್ಯಾಗ್​ ಅನ್ನು ಕಂಡು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಬಳಿಕ ಪೊಲೀಸರು ಸಂಬಂಧಪಟ್ಟವರಿಗೆ ಬ್ಯಾಗ್​ವನ್ನು ಮುಟ್ಟಿಸಿದ್ದಾರೆ. ಚಾಲಕನ ಪ್ರಾಮಾಣಿಕತೆ ಕಂಡು ಪೊಲೀಸರು ಸನ್ಮಾನಿಸಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.