Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Rains: ಬೆಂಗಳೂರಿನಲ್ಲಿ ಭಾರಿ ಮಳೆಗೆ ಕಾರಿನ ಮೇಲೆ ಬಿದ್ದ ಮರಗಳು

Bengaluru Rains: ಬೆಂಗಳೂರಿನಲ್ಲಿ ಭಾರಿ ಮಳೆಗೆ ಕಾರಿನ ಮೇಲೆ ಬಿದ್ದ ಮರಗಳು

ಶಾಂತಮೂರ್ತಿ
| Updated By: Ganapathi Sharma

Updated on: May 11, 2024 | 2:36 PM

ಬೆಂಗಳೂರಿನ ಯೂನಿವರ್ಸಿಟಿ ಗೇಟ್​​​, ಆರ್​ಆರ್​​ ನಗರ ಆರ್ಚ್​ ರಸ್ತೆ ಜಲಾವೃತಗೊಂಡಿತ್ತು. ಯೂನಿವರ್ಸಿಟಿ ಗೇಟ್ ಅಂತೂ ಕರೆಯಂತೆಯೇ ಆಗಿತ್ತು. ​​​ಈ ಮಧ್ಯೆ, ರಾತ್ರಿ ಮೈಸೂರು ರಸ್ತೆಯಲ್ಲಿ ಟ್ರಾಫಿಕ್ ​ಜಾಮ್​ನಿಂದ ಸವಾರರು ಪರದಾಡಿದರು.

ಬೆಂಗಳೂರು, ಮೇ 11: ಬೆಂಗಳೂರು ನಗರದ ಹಲವೆಡೆ ಶುಕ್ರವಾರ ರಾತ್ರಿ ಸುರಿದ ಭಾರಿ ಗಾಳಿ ಮಳೆ (Bengaluru Rains) ಅವಾಂತರ ಸೃಷ್ಟಿಸಿದ್ದು, ಹಲವೆಡೆ ಕಾರುಗಳ ಮೇಲೆ ಮರಗಳು ಉರುಳಿಬಿದ್ದಿವೆ. ಇನ್ನು ಕೆಲವೆಡೆ ಸಮಸ್ಯೆ ಆಗಿರುವ ಬಗ್ಗೆ ಬಿಬಿಎಂಪಿ (BBMP) ಅಧಿಕಾರಿಗಳಿಗೆ ದೂರು ನೀಡಿದರೂ ತಕ್ಷಣ ಸ್ಪಂದಿಸಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಬೆಂಗಳೂರಿನ ಯೂನಿವರ್ಸಿಟಿ ಗೇಟ್​​​, ಆರ್​ಆರ್​​ ನಗರ ಆರ್ಚ್​ ರಸ್ತೆ ಜಲಾವೃತಗೊಂಡಿತ್ತು. ಯೂನಿವರ್ಸಿಟಿ ಗೇಟ್ ಅಂತೂ ಕರೆಯಂತೆಯೇ ಆಗಿತ್ತು. ​​​ಈ ಮಧ್ಯೆ, ರಾತ್ರಿ ಮೈಸೂರು ರಸ್ತೆಯಲ್ಲಿ ಟ್ರಾಫಿಕ್​ಜಾಮ್​ನಿಂದ ಸವಾರರು ಪರದಾಡಿದರು. ಸುಗಮ ಸಂಚಾರಕ್ಕೆ ಅಡ್ಡಿಯಾದ್ದರಿಂದ ಸಂಚರಿಸುತ್ತಿದ್ದ ವಾಹನ, ಕಾರುಗಳಲ್ಲಿ ಗಂಟೆಗಟ್ಟಲೇ ಲಾಕ್​ ಆಗಬೇಕಾಯಿತು. ಇಷ್ಟೆಲ್ಲಾ ಆದರೂ ಸ್ಥಳಕ್ಕೆ ಬಾರದ ಪಾಲಿಕೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಇನ್ನೂ ಹೆಚ್ಚು ಮಳೆ ಬಂದಿದ್ದರೆ ಕಾರುಗಳು ಕೊಚ್ಚಿ ಹೋಗುವ ಸಾಧ್ಯತೆ ಇತ್ತು. ಅದೃಷ್ಟವಶಾತ್ ಪ್ರಯಾಣಿಕರು ಪಾರಾಗಿದ್ದು ಯಾವುದೇ ಜೀವಹಾನಿ ಸಂಭವಿಸಿಲ್ಲ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮುಂಗಾರು ಮಳೆ ಪ್ರವಾಹ ಮುನ್ನೆಚ್ಚರಿಕೆ ನೀಡಲಿದೆ ಸೆನ್ಸರ್​​​: ತಂತ್ರಜ್ಞಾನದ ಮೊರೆಹೋದ ಬಿಬಿಎಂಪಿ

ಚಾಮರಾಜಪೇಟೆಯಲ್ಲಿಯೂ ಮನೆಗಳಿಗೆ ನೀರು ನುಗ್ಗಿ ಅವಾಂತರವಾಗಿತ್ತು‌.‌ ಚಾಮರಾಜಪೇಟೆಯ ಬಿನ್ನಿ ಮಿಲ್ ಬಳಿಯ ಖಾಸಗಿ ಅಪಾರ್ಟ್ಮೆಂಟ್​​ ಬಳಿಯಿಂ ಹರಿಯುವ ನೀರು ಅಕ್ಕಪಕ್ಕದಲ್ಲಿರುವ ಮನೆಗಳಿಗೆ ನುಗ್ಗಿ ಅವಾಂತರ ಉಂಟಾಗಿತ್ತು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ