ಪ್ರಜ್ವಲ್ ರೇವಣ್ಣನನ್ನು ಹುಡುಕಿಕೊಟ್ಟವರಿಗೆ ಜನತಾ ಪಕ್ಷ ಒಂದು ಲಕ್ಷ ರೂ. ಬಹುಮಾನ ನೀಡುತ್ತಂತೆ!

ಪ್ರಜ್ವಲ್ ರೇವಣ್ಣನನ್ನು ಹುಡುಕಿಕೊಟ್ಟವರಿಗೆ ಜನತಾ ಪಕ್ಷ ಒಂದು ಲಕ್ಷ ರೂ. ಬಹುಮಾನ ನೀಡುತ್ತಂತೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: May 11, 2024 | 1:52 PM

ಪ್ರಜ್ವಲ್ ನನ್ನು ಹುಡುಕಿಕೊಟ್ಟವರಿಗೆ ಒಂದು ಲಕ್ಷ ರೂ. ಬಹುಮಾನ ನೀಡಿ ಸನ್ಮಾನಿಸುವವುದಾಗಿ ಪೋಸ್ಟರ್ ನಲ್ಲಿ ಹೇಳಲಾಗಿದೆ. ನಗರದ ಶಿವಾನಂದ ಸರ್ಕಲ್ ಮತ್ತು ಶೇಷಾದ್ರಿಪುರಂ ಪ್ರದೇಶಗಳಲ್ಲಿ ಅವರು ಪೋಸ್ಟರ್ ಮೆತ್ತುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು.

ಬೆಂಗಳೂರು: ಇದು ಸರ್ಕಾರದ ಘೋಷಣೆ ಅಲ್ಲ, ಅದೇನಾದರೂ ಹಾಗೆ ಮಾಡಿದರೆ ತನ್ನ ಅಸಾಮರ್ಥ್ಯವನ್ನು ಜಾಹೀರುಗೊಳಿದಂತಾಗುತ್ತದೆ! ಅಸಲಿಗೆ ಜನತಾ ಪಕ್ಷ (Janata party) ಸದಸ್ಯರು ಎಂದು ಹೇಳಿಕೊಳ್ಳುತ್ತಿರುವ ಕೆಲ ಜನ ಲೈಂಗಿಕ ದೌರ್ಜನ್ಯಗಳ ಪ್ರಕರಣದಲ್ಲಿ ಕಳೆದ 15 ದಿನಗಳಿಂದ ತಲೆಮರೆಸಿಕೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧ ಪೋಸ್ಟರ್ ಅಭಿಯಾನ (poster campaign) ಆರಂಭಿಸಿದ್ದಾರೆ. ಪ್ರಜ್ವಲ್ ನನ್ನು ಹುಡುಕಿಕೊಟ್ಟವರಿಗೆ ಒಂದು ಲಕ್ಷ ರೂ. ಬಹುಮಾನ ನೀಡಿ ಸನ್ಮಾನಿಸುವವುದಾಗಿ ಪೋಸ್ಟರ್ ನಲ್ಲಿ ಹೇಳಲಾಗಿದೆ. ನಗರದ ಶಿವಾನಂದ ಸರ್ಕಲ್ ಮತ್ತು ಶೇಷಾದ್ರಿಪುರಂ ಪ್ರದೇಶಗಳಲ್ಲಿ ಅವರು ಪೋಸ್ಟರ್ ಮೆತ್ತುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಅಭಿಯಾನದ ಬಗ್ಗೆ ಸದಸ್ಯರೊಬ್ಬರು ಮಾತಾಡಿ ಒಬ್ಬ ಸಂಸದನನ್ನು ಪತ್ತೆ ಮಾಡಲು ರಾಜ್ಯ ಮತ್ತು ಕೇಂದ್ರ ಸರ್ಕಾರ ಎರಡೂ ವಿಫಲವಾಗಿವೆ, ಹಾಗಾಗೇ ಕರ್ನಾಟಕ ಜನತಾ ಪಕ್ಷ ಪೋಸ್ಟರ್ ಅಭಿಯಾನ ಶುರುಮಾಡಿದೆ ಅಂತ ಹೇಳುತ್ತಾರೆ. ಬ್ಲ್ಯೂ ಕಾರ್ನರ್ ನೋಟೀಸ್ ಜಾರಿ ಮಾಡಿ ಇಂಟರ್ ಪೋಲ್ ಅನ್ನು ಅಲರ್ಟ್ ಮಾಡಿದರೂ ಪತ್ತೆಯಾಗದ ಪ್ರಜ್ವಲ್ ಬೆಂಗಳೂರಿನ ಮುಗ್ಧ ಕನ್ನಡಿಗರಿಗೆ ಕಂಡಾನೆಯೇ ಮಾರಾಯ್ರೇ? ನೀವು ಒಂದು ಕೋಟಿ ರೂ. ಬಹಮಾನ ಘೋಷಿಸಿದರೂ ಅದು ಪ್ರಜ್ವಲ್ ನಷ್ಟೇ ಸೇಫ್!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪ್ರಜ್ವಲ್ ರೇವಣ್ಣರನ್ನು ಸಂಪರ್ಕಿಸಿಲ್ಲ ಮತ್ತು ಅವರು ನನ್ನ ಸಂಪರ್ಕದಲ್ಲಿಲ್ಲ: ನಿಖಿಲ್ ಕುಮಾರಸ್ವಾಮಿ