ಪ್ರಜ್ವಲ್ ರೇವಣ್ಣ ಪ್ರಕರಣ: ದೇವರಾಜೇಗೌಡ ಬಗ್ಗೆ ಕೇಳಿದ ಪ್ರಶ್ನೆಗೆ ಡಿಕೆ ಶಿವಕುಮಾರ್ ಸ್ಪಷ್ಟ ಉತ್ತರ ನೀಡಲಿಲ್ಲ

ಪ್ರಜ್ವಲ್ ರೇವಣ್ಣ ಪ್ರಕರಣ: ದೇವರಾಜೇಗೌಡ ಬಗ್ಗೆ ಕೇಳಿದ ಪ್ರಶ್ನೆಗೆ ಡಿಕೆ ಶಿವಕುಮಾರ್ ಸ್ಪಷ್ಟ ಉತ್ತರ ನೀಡಲಿಲ್ಲ

ಅರುಣ್​ ಕುಮಾರ್​ ಬೆಳ್ಳಿ
|

Updated on: May 11, 2024 | 10:56 AM

ರಾತ್ರಿಯೆಲ್ಲ ಬ್ಯೂಸಿಯಾಗಿದ್ದ ಕಾರಣ ಬೆಳಗ್ಗೆ ಪೇಪರ್ ಓದಲಾಗಿಲ್ಲ, ಚುನಾವಣಾ ಪ್ರಚಾರಕ್ಕಾಗಿ ಕಡಪಾಗೆ ಹೋಗುತ್ತಿರುವೆ, ಬಂದ ಬಳಿಕ ಉತ್ತರಿಸುವುದಾಗಿ ಶಿವಕುಮಾರ್ ಹೇಳಿದರು. ಈಗ ಹೊಳೆನರಸಿಪುರ ಪೊಲೀಸರ ವಶದಲ್ಲಿರುವ ದೇವರಾಜೇಗೌಡರನ್ನು ಇಂದೇ ಎಸ್ಐಟಿ ಅಧಿಕಾರಿಗಳ ವಶಕ್ಕೆ ಒಪ್ಪಿಸುವ ಸಾಧ್ಯತೆ ಇದೆ.

ಬೆಂಗಳೂರು: ಈಗ ಹೊಳೆನರಸೀಪುರ ಪೊಲೀಸರ ವಶದಲ್ಲಿರುವ ವಕೀಲ ಮತ್ತು ಬಿಜೆಪಿ ಮುಖಂಡ ಡಿ ದೇವರಾಜೇಗೌಡನ (D Devarajegowda) ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರಿಂದ ಸಮಂಜಸ ಉತ್ತರ ಸಿಗುತ್ತಿಲ್ಲ. ಒಂದೋ ಅವರು ಹಾರಿಕೆಯ ಉತ್ತರ ನೀಡುತ್ತಾರೆ ಇಲ್ಲವೇ ಆಮೇಲೆ ಪ್ರತಿಕ್ರಿಯೆ ನೀಡುತ್ತೇನೆ ಅನ್ನುತ್ತಾರೆ. ನಿನ್ನೆ ಬಂಧನಕ್ಕೊಳಗಾಗಿರುವ ದೇವರಾಜೇಗೌಡ ತನ್ನ ಹಿಂದೆ ದೊಡ್ಡವರಿದ್ದಾರೆ ಅಂತ ಹೇಳಿದ್ದಾರೆ. ಅವರ ಹೇಳಿಕೆ ಹಿನ್ನೆಲೆಯಲ್ಲಿ ಇಂದು ಚುನಾವಣಾ ಪ್ರಚಾರಕ್ಕೆಂದು ಆಂಧ್ರ ಪ್ರದೇಶದ ಕಡಪಾಗೆ (Kadapa) ಹೊರಟಿದ್ದ ಶಿವಕುಮಾರ್ ಅವರನ್ನು ಮಾಧ್ಯಮ ಪ್ರತಿನಿಧಿಗಳು ತಡೆದು ದೇವರಾಜೇಗೌಡ ಹೇಳಿರುವುದನ್ನು ತಿಳಿಸಿದಾಗ, ತಾನು ರಾತ್ರಿಯೆಲ್ಲ ಬ್ಯೂಸಿಯಾಗಿದ್ದ ಕಾರಣ ಬೆಳಗ್ಗೆ ಪೇಪರ್ ಓದಲಾಗಿಲ್ಲ, ಚುನಾವಣಾ ಪ್ರಚಾರಕ್ಕಾಗಿ ಕಡಪಾಗೆ ಹೋಗುತ್ತಿರುವೆ, ಬಂದ ಬಳಿಕ ಉತ್ತರಿಸುವುದಾಗಿ ಹೇಳಿದರು. ಈಗ ಹೊಳೆನರಸಿಪುರ ಪೊಲೀಸರ ವಶದಲ್ಲಿರುವ ದೇವರಾಜೇಗೌಡರನ್ನು ಇಂದೇ ಎಸ್ಐಟಿ ಅಧಿಕಾರಿಗಳ ವಶಕ್ಕೆ ಒಪ್ಪಿಸುವ ಸಾಧ್ಯತೆ ಇದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪ್ರಜ್ವಲ್ ತಪ್ಪು ಮಾಡಿದ್ದರೆ ಗಲ್ಲಿಗೇರಿಸಿ ಆದರೆ ಸಿಎಂ ಕುರ್ಚಿಗಾಗಿ ಶಿವಕುಮಾರ್ ದುಡುಕುವುದು ಬೇಡ: ವಿ ಸೋಮಣ್ಣ