ಗೋಸುಂಬೆ ಮೇಲೆ ದಾಳಿ ಮಾಡಿ ನುಂಗಿದ ಹಸಿರು ಹಾವು; ವಿಡಿಯೋ ವೈರಲ್
ಯಾದಗಿರಿ ನಗರದ ಲುಂಬಿನಿ ಉದ್ಯಾನವನದಲ್ಲಿ ಇಂದು(ಮೇ.11) ಅಪರೂಪದ ಘಟನೆಯೊಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಂದು ಗೋಸುಂಬೆ ಮೇಲೆ ಹಸಿರು ಬಣ್ಣದ ಹಾವೊಂದು(green snake) ದಾಳಿ ನಡೆಸಿತ್ತು. ಹೆಚ್ಚಾಗಿ ಮರದ ಮೇಲೆ ಕಂಡು ಈ ಹಾವು, ಗೋಸುಂಬೆ ಮೇಲೆ ದಾಳಿ ಮಾಡಿ ನುಂಗಿದೆ.
ಯಾದಗಿರಿ, ಮೇ.11: ಯಾದಗಿರಿ ನಗರದ ಲುಂಬಿನಿ ಉದ್ಯಾನವನದಲ್ಲಿ ಇಂದು(ಮೇ.11) ಅಪರೂಪದ ಘಟನೆಯೊಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೌದು, ಗೋಸುಂಬೆ(chameleon), ಇದನ್ನು ಓತಿಕೇತ ಎಂತಲೂ ಕೆಲವು ಕಡೆಗಳಲ್ಲಿ ಕರೆಯುತ್ತಾರೆ. ಇಂದು ಇದರ ಮೇಲೆ ಹಸಿರು ಬಣ್ಣದ ಹಾವೊಂದು(green snake) ದಾಳಿ ನಡೆಸಿತ್ತು. ಹೆಚ್ಚಾಗಿ ಮರದ ಮೇಲೆ ಕಂಡು ಈ ಹಾವು, ಗೋಸುಂಬೆ ಮೇಲೆ ದಾಳಿ ಮಾಡಿ ನುಂಗಿದೆ. ಹಾವು ಗೋಸುಂಬೆ ನುಂಗುವ ವಿಡಿಯೋ ಟಿವಿ9 ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಸಿರು ಹಾವು
ಇದು ಉತ್ತರ ಅಮೆರಿಕಾದ ವಿಷರಹಿತ ಹಾವಿನ ಒಂದು ಜಾತಿಯಾಗಿದೆ. ಈ ಜಾತಿಯನ್ನು ಹುಲ್ಲು ಹಾವು ಎಂದು ಕೂಡ ಕರೆಯುತ್ತಾರೆ . ಇದು ತೆಳ್ಳಗಿನ, “ಸಣ್ಣ ಮಧ್ಯಮ” ಹಾವಾಗಿದ್ದು, 36 ರಿಂದ 51 ಸೇ.ಮೀ ಉದ್ದ ಇರುತ್ತದೆ. ಕೀಟನಾಶಕಗಳ ಬಳಕೆಯಿಂದ ಈ ಹಸಿರು ಹಾವಿನ ಸಂತತಿಯೂ ಕ್ಷೀಣಿಸುತ್ತಿದೆ. ಜೊತೆಗೆ ರಸ್ತೆ ನಿರ್ಮಾಣ, ಮರ ಕಡಿಯುವುದು, ಜಾನುವಾರು ಮೇಯಿಸುವಿಕೆ, ಹೊಳೆಗಳು ಬರಿದಾಗುವುದರಿಂದ ಆವಾಸಸ್ಥಾನ ನಾಶವಾಗುತ್ತದೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: May 11, 2024 05:09 PM
ಸಲಾಲ್ ಡ್ಯಾಂನ ಗೇಟ್ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಮದುವೆ ಬಳಿಕ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಚಿಕ್ಕಣ್ಣ, ಪಾವನಾ ಭೇಟಿ
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್ ಅಪ್ಡೇಟ್:ಪರಿಷ್ಕರಣೆಗೆ ಗಡುವು ವಿಸ್ತರಣೆ

