ಪ್ರಜ್ವಲ್ ರೇವಣ್ಣ ಪ್ರಕರಣ; ಎಸ್ಐಟಿ ತನಿಖೆ ಒನ್ ವೇನಲ್ಲಿ ಸಾಗುತ್ತಿರುವ ಕಾರಣ ಸಿಬಿಐಗೆ ವಹಿಸಿಕೊಡಬೇಕು: ಜಿಟಿ ದೇವೇಗೌಡ

ಪ್ರಜ್ವಲ್ ರೇವಣ್ಣ ಪ್ರಕರಣ; ಎಸ್ಐಟಿ ತನಿಖೆ ಒನ್ ವೇನಲ್ಲಿ ಸಾಗುತ್ತಿರುವ ಕಾರಣ ಸಿಬಿಐಗೆ ವಹಿಸಿಕೊಡಬೇಕು: ಜಿಟಿ ದೇವೇಗೌಡ

ಅರುಣ್​ ಕುಮಾರ್​ ಬೆಳ್ಳಿ
|

Updated on: May 08, 2024 | 2:53 PM

ಪೆನ್ ಡ್ರೈವ್ ಗಳನ್ನು ತಯಾರಿಸಲು ಚೆನೈಯಿಂದ ಮೂರು ಕೋಟಿ ರೂ. ವೆಚ್ಚದಲ್ಲಿ ಒಂದು ಯಂತ್ರವನ್ನು ತಯಾರಿಸಲಾಗಿದೆ ಎಂದು ಹೇಳುವ ದೇವೇಗೌಡರು, ಪೆನ್ ಡ್ರೈವ್, ವಿಡಿಯೋಗಳನ್ನು ಒಮ್ಮೆ ಆಸ್ಟ್ರೇಲಿಯಾದಲ್ಲಿ ತಯಾರಿಸಲಾಗಿದೆ ಅನ್ನುತ್ತಾರೆ ಮತ್ತೊಮ್ಮೆ ಮಲೇಷ್ಯಾದಲ್ಲಿ ತಯಾರಿಸಲಾಗಿದೆ ಅನ್ನುತ್ತಾರೆ.

ಮೈಸೂರು: ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಸರ್ಕಾರ ರಚಿಸಿರುವ ಎಸ್ಐಟಿ ತನಿಖೆ (SIT investigation) ಸರಿಯಾದ ನಿಟ್ಟಿನಲ್ಲಿ ಸಾಗುತ್ತಿಲ್ಲ ಮತ್ತು ಸಂತ್ರಸ್ತೆಯರಿಗೆ ರಕ್ಷಣೆ ಸಿಗುತ್ತಿಲ್ಲ, ಇದರ ಜೊತೆಗೆ ಪ್ರಕರಣದಲ್ಲಿ ಡಿಕೆ ಶಿವಕುಮಾರ (DK Shivakumar) ಪಾತ್ರ ಇರೋದು ಮೇಲ್ನೋಟಕ್ಕೆ ಕಂಡುಬರುತ್ತಿದೆ, ಹಾಗಾಗಿ ಅವರ ರಾಜೀನಾಮೆ ಆಗ್ರಹಿಸಿ ಮತ್ತು ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಒತ್ತಾಯಿಸಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ (GT Devegowda) ಹೇಳಿದರು. ನಗರದಲ್ಲಿಂದು ಟಿವಿ9 ವರದಿಹಾರನೊಂದಿಗೆ ಮಾತಾಡಿದ ಅವರು ಎಸ್ಐಟಿ ತನಿಖೆ ಒನ್ ವೇನಲ್ಲಿ ಸಾಗುತ್ತಿದೆ, ಅಧಿಕಾರಿಗಳಿಗೆ ಸಂತ್ರಸ್ತೆಯರ ಬಗ್ಗೆ ಕಾಳಜಿ ಇಲ್ಲ, ಪೆನ್ ಡ್ರೈವ್ ಗಳನ್ನು ಕಾರ್ತೀಕ್ ಮೂಲಕ ಶಿವಕುಮಾರ್ ಮಾಡಿಸಿದರೆಂದು ಎಲ್ ಅರ್ ಶಿವರಾಮೇಗೌಡ ಅವರು ದೆವರಾಜೇಗೌಡರಿಂದ ಹೇಳಿಸಿದ್ದಾರೆ ಎಂದರು. ಪೆನ್ ಡ್ರೈವ್ ಗಳನ್ನು ತಯಾರಿಸಲು ಚೆನೈಯಿಂದ ಮೂರು ಕೋಟಿ ರೂ. ವೆಚ್ಚದಲ್ಲಿ ಒಂದು ಯಂತ್ರವನ್ನು ತಯಾರಿಸಲಾಗಿದೆ ಎಂದು ಹೇಳುವ ದೇವೇಗೌಡರು, ಪೆನ್ ಡ್ರೈವ್, ವಿಡಿಯೋಗಳನ್ನು ಒಮ್ಮೆ ಆಸ್ಟ್ರೇಲಿಯಾದಲ್ಲಿ ತಯಾರಿಸಲಾಗಿದೆ ಅನ್ನುತ್ತಾರೆ ಮತ್ತೊಮ್ಮೆ ಮಲೇಷ್ಯಾದಲ್ಲಿ ತಯಾರಿಸಲಾಗಿದೆ ಅನ್ನುತ್ತಾರೆ. ಎಸ್ ಐಟಿ ಅಧಿಕಾರಿಗಳು ವಿದೇಶದ ಮಾತು ಹಾಗಿರಲಿ, ಚೆನೈಗೂ ಹೋಗುವುದು ಸಾಧ್ಯವಿರದ ಕಾರಣ ತನಿಖೆಯನ್ನು ಸಿಬಿಐಗೆ ವರ್ಗಾಯಿಸಬೇಕು ಎಂದು ದೇವೇಗೌಡ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಪ್ರಜ್ವಲ್ ಅಶ್ಲೀಲ ವಿಡಿಯೋ ಕೇಸ್​: ರಾಜಕೀಯಕ್ಕಾಗಿ ಸುಳ್ಳು ಹೇಳುವುದು ಸಿಎಂಗೆ ಶೋಭೆ ತರಲ್ಲ, ಜಿಟಿ ದೇವೇಗೌಡ