ಪ್ರಜ್ವಲ್ ಅಶ್ಲೀಲ ವಿಡಿಯೋ ಕೇಸ್​: ರಾಜಕೀಯಕ್ಕಾಗಿ ಸುಳ್ಳು ಹೇಳುವುದು ಸಿಎಂಗೆ ಶೋಭೆ ತರಲ್ಲ, ಜಿಟಿ ದೇವೇಗೌಡ

ಬೆಂಗಳೂರಿನಲ್ಲಿ ಟಿವಿ9 ಜೊತೆಗೆ ಮಾತನಾಡಿದ ಜೆಡಿಎಸ್​ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ, ಪ್ರಜ್ವಲ್​​ರನ್ನ ದೇವೇಗೌಡರೇ ವಿದೇಶಕ್ಕೆ ಕಳಿಸಿಕೊಟ್ಟರು, ಪ್ರಧಾನಿ ಮೋದಿ ಪಾಸ್‌ಪೋರ್ಟ್‌‌‌‌ ಸಿದ್ಧಮಾಡಿ ಕೊಟ್ಟರು ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಈ ಸಮಯದಲ್ಲಿ ರಾಜಕೀಯಕ್ಕಾಗಿ ಸುಳ್ಳು ಹೇಳುವುದು ಶೋಭೆಯಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ. ಮೈತ್ರಿ ಮಾಡಿಕೊಂಡಿದ್ದಕ್ಕೆ ಸಿಎಂ ಈ ರೀತಿ ಆರೋಪಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

Follow us
| Updated By: ಗಂಗಾಧರ​ ಬ. ಸಾಬೋಜಿ

Updated on:May 02, 2024 | 10:52 AM

ಬೆಂಗಳೂರು, ಮೇ  2: ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ರನ್ನು ದೇವೇಗೌಡರೇ ವಿದೇಶಕ್ಕೆ ಕಳಿಸಿಕೊಟ್ಟರು, ಪ್ರಧಾನಿ ಮೋದಿ ಪಾಸ್‌ಪೋರ್ಟ್‌‌‌‌ ಸಿದ್ಧಮಾಡಿ ಕೊಟ್ಟರು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳುತ್ತಿದ್ದಾರೆ. ಈ ಸಮಯದಲ್ಲಿ ರಾಜಕೀಯಕ್ಕಾಗಿ ಸುಳ್ಳು ಹೇಳುವುದು ಶೋಭೆಯಲ್ಲ ಎಂದು ಜೆಡಿಎಸ್​ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ ಹೇಳಿದ್ದಾರೆ. ನಗರದಲ್ಲಿ ಟಿವಿ9 ಜೊತೆಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಏಕೆ ತನಿಖೆ ಮಾಡುತ್ತಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಕೇಳಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಹೀಗೆ ಮಾತಾಡಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್​ ಮೈತ್ರಿ ಮಾಡಿಕೊಂಡಿದ್ದಕ್ಕೆ ಈ ರೀತಿ ಆರೋಪಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಸಂಸದರಾಗಿ ಆಯ್ಕೆಯಾಗಿ ಪ್ರಮಾಣವಚನ ಸ್ವೀಕರಿಸಿದ ಮೇಲೆ ಅವರಿಗೆ ರೆಡ್ ಪಾಸ್‌ಪೋರ್ಟ್‌‌‌‌ ಕೊಡುತ್ತಾರೆ. ರೆಡ್ ಪಾಸ್‌ಪೋರ್ಟ್‌‌‌‌ ಇದ್ದವರು ವಿದೇಶಗಳಿಗೆ ಹೋಗಬಹುದು. ಪ್ರಜ್ವಲ್​​​​​ ತಪ್ಪಿತಸ್ಥ ಎಂದು ಸಾಬೀತಾದರೆ ಪಕ್ಷದಿಂದ ಉಚ್ಚಾಟಿಸುತ್ತೇವೆ. ಸರ್ಕಾರ ನಿಮ್ಮ ಕೈಯಲ್ಲಿದೆ ಎಂದು ಹೇಳಿದ್ದಾರೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿ ಎಸ್ಐಟಿ ತನಿಖೆ ಆರಂಭದ ಮುಂಚಿತವಾಗಿ ತನಿಖೆ ನಡೆಯುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ತನಿಖೆ ನಡೆಯುತ್ತಿದೆ ತನಿಖೆ ನಡೆದು ತಪ್ಪಿತಸ್ಥ ಎಂದು ಸಾಬೀತಾದರೆ ಶಿಕ್ಷೆ ಆಗಲಿ ಎಂದಿದ್ದಾರೆ.

ಇದನ್ನೂ ಓದಿ: ಅಶ್ಲೀಲ ವಿಡಿಯೋ ಪ್ರಕರಣ: ಪ್ರಜ್ವಲ್ ರೇವಣ್ಣ​ ಮಾಜಿ ಕಾರು ಚಾಲಕ ಕಾರ್ತಿಕ್ ನಾಪತ್ತೆ

ಕಾಂಗ್ರೆಸ್​​ನಲ್ಲಿ ಎಷ್ಟು ಜನ ವಿಡಿಯೋ ಪ್ರಕರಣದಲ್ಲಿ ಸಿಕ್ಕಿಬಿದ್ದವರಿಗೆ ಇವರು ಬಿ ಫಾರ್ಮ್ ಕೊಟ್ಟು ಶಾಸಕರಾಗಿದ್ದಾರೆ. ಪ್ರಜ್ವಲ್ ರೇವಣ್ಣ ಈ ಪ್ರಕರಣದಲ್ಲಿ ಸಾಬೀತಾಗಿ ಬಂದರೆ ನೂರಕ್ಕೆ ನೂರು ಉಚ್ಚಾಟನೆ ಮಾಡುತ್ತೇವೆ ಈಗಾಗಲೇ ಅಮಾನತ್ತು ಕೂಡ ಮಾಡಿದ್ದೇವೆ ಎಂದರು.

ಇದನ್ನೂ ಓದಿ: ಪ್ರಜ್ವಲ್ ಅಶ್ಲೀಲ ವಿಡಿಯೋ ಪ್ರಕರಣ: ಎಸ್​ಐಟಿ ತನಿಖೆಯ ಇತಿಮಿತಿಗಳೇನು? ನಿವೃತ್ತ ಪೊಲೀಸ್ ಅಧಿಕಾರಿ ನೀಡಿದ ಮಾಹಿತಿ ಇಲ್ಲಿದೆ

ಎಸ್ಐಟಿ ಮೇಲೆ ಪ್ರತಿಭಟನೆ ಮಾಡಬೇಕು ಮುಖ್ಯಮಂತ್ರಿ, ಮನೆಯ ಮುಂದೆ ಪ್ರತಿಭಟನೆ ಮಾಡಬೇಕು. ಸರ್ಕಾರ, ಅಧಿಕಾರ ನಿಮ್ಮ ಕೈಯಲ್ಲಿದೆ. ಯಾರಿಗೆ ಅಧಿಕಾರ ಇಲ್ಲ ಯಾರು ವಿರೋಧ ಪಕ್ಷದಲ್ಲಿದ್ದಾರೆ ಅವರು ಹೋರಾಟ ಮಾಡಲು ಸಾಧ್ಯ. ಕಾಂಗ್ರೆಸ್ ಕಾರ್ಯಕರ್ತರನ್ನ ಪ್ರಚೋದನೆ ಮಾಡುವುದು ಹೋರಾಟ ಮಾಡಿಸುವುದು ಇದು ಜನರು ಒಪ್ಪುವುದಿಲ್ಲ. ಆಡಳಿತ ಪಕ್ಷದವರೇ ಕರೆಕೊಟ್ಟು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡುವುದನ್ನು ಯಾರು ಒಪ್ಪುತ್ತಾರೆ. ಚುನಾವಣೆ ದೃಷ್ಟಿಯಿಂದ ಈ ರೀತಿಯಾದ ಪ್ರತಿಭಟನೆ ನಡೆಯುತ್ತಿದೆ. ಮೊದಲೇ ವಿಡಿಯೋ ಪ್ರಕರಣ ನಿಮ್ಮ ಗಮನಕ್ಕೆ ಇದ್ದರೂ ಕಂಡುಹಿಡಿಯಲಿಲ್ಲ ಎಂದು ಹೇಳಿದ್ದಾರೆ.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:54 am, Thu, 2 May 24