ಅಪಹೃತ ಮಹಿಳೆಯನ್ನು ರಕ್ಷಿಸಿ 4-ದಿನ ಕಳೆದರೂ ನ್ಯಾಯಾಲಯದ ಮುಂದೆ ಹಾಜರುಪಡಿಸಿಲ್ಲ ಯಾಕೆ? ಕುಮಾರಸ್ವಾಮಿ
ಆಕೆಯ ಕುಟುಂಬದ 12 ಜನರನ್ನು ಕರೆತಂದು ಕುಮಾರ ಕೃಪಾದಲ್ಲಿಟ್ಟು ರಾಜಾತಿಥ್ಯ ಒದಗಿಸುತ್ತಿರುವುದು ಯಾಕೆ? ಅಂತ ಕುಮಾರಸ್ವಾಮಿ ಹೇಳಿದರು. ಅವರನ್ನು ನೋಡಿದ್ದೀರಾ ಪ್ರೆಸ್ ನವರು ಕೇಳಿದಾಗ ಜಾರಿಕೊಳ್ಳುವ ಪ್ರಯತ್ನ ಮಾಡಿದ ಕುಮಾರಸ್ವಾಮಿ ನನಗೆ ಸಿಕ್ಕಿರುವ ಮಾಹಿತಿ ಹೇಳುತ್ತಿದ್ದೇನೆ ಎಂದರು.
ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನನಿಧಿಗಳೊಂದಿಗೆ ಮಾತಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರು ಮತ್ತೊಮ್ಮೆ ಎಸ್ಐಟಿ (SIT) ಕಾರ್ಯವೈಖರಿಯನ್ನು ಪ್ರಶ್ನಿಸಿದರು. ಯಾಕೆ ಸಂತ್ರಸ್ತೆಯರಲ್ಲಿ (victims) ಯಾರೂ ಮುಂದೆ ಬಂದು ದೂರು ಸಲ್ಲಿಸುತ್ತಿಲ್ಲ. 2, 900 ಕ್ಕಿಂತ ಹೆಚ್ಚು ಪೆನ್ ಡ್ರೈವ್ ಗಳಿವೆ ಅಂತ ಹೇಳಿದ್ರಲ್ಲ ಎಲ್ಲಿ ಹೋದರು ಅವರೆಲ್ಲ? ಬಲವಂತದಿಂದ ಕೆಲವರನ್ನು ಕರೆತಂದು ದೂರು ಬರೆಸಿಕೊಳ್ಳಲಾಗಿದೆ ಎಂದು ಕುಮಾರಸ್ವಾಮಿ ಹೇಳಿದರು. ರೇವಣ್ಣ ವಿರುದ್ಧ ದಾಖಲಾಗಿದ್ದ ಎಫ್ಐಅರ್ ಬೇಲೇಬಲ್ ಆಗಿತ್ತು, ಅದರೆ ಅದಕ್ಕೆ ಮಹಿಳೆ ಅಪಹರಣದ ಕತೆ ಜೋಡಿಸಲಾಯಿತು. ಅಪಹೃತ ಮಹಿಳೆಯನ್ನು ತೋಟದ ಮನೆಯಿಂದ ರಕ್ಷಿಸಲಾಗಿದೆ ಅಂತ ಹೇಳಿರುವುದು ಸುಳ್ಳು, ಆಕೆಯನ್ನು ಹುಣಸೂರಿನ ಕರಿಗೌಡರ ಮನೆಯಿಂದ ಕರೆತರಲಾಗಿದೆ, ಒಬ್ಬ ಡಿಎಸ್ ಪಿ ಹೋಗಿ ಆಕೆಯನ್ನು ಕರೆತರಲಾಗಿದೆ, ಅವರಿಗೆ ಮಾಹಿತಿ ನೀಡಿದ್ದು ಯಾರು? ಆಕೆಯ ಕುಟುಂಬದ 12 ಜನರನ್ನು ಕರೆತಂದು ಕುಮಾರ ಕೃಪಾದಲ್ಲಿಟ್ಟು ರಾಜಾತಿಥ್ಯ ಒದಗಿಸುತ್ತಿರುವುದು ಯಾಕೆ? ಅಂತ ಕುಮಾರಸ್ವಾಮಿ ಹೇಳಿದರು. ಅವರನ್ನು ನೋಡಿದ್ದೀರಾ ಪ್ರೆಸ್ ನವರು ಕೇಳಿದಾಗ ಜಾರಿಕೊಳ್ಳುವ ಪ್ರಯತ್ನ ಮಾಡಿದ ಕುಮಾರಸ್ವಾಮಿ ನನಗೆ ಸಿಕ್ಕಿರುವ ಮಾಹಿತಿ ಹೇಳುತ್ತಿದ್ದೇನೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪ್ರಜ್ವಲ್ ವಿಡಿಯೋ ಪ್ರಕರಣ: ಎಸ್ಐಟಿ ಎಂದರೆ ಸಿದ್ದರಾಮಯ್ಯ, ಶಿವಕುಮಾರ್ ಇನ್ವೆಸ್ಟಿಗೇಷನ್ ಟೀಮ್: ಕುಮಾರಸ್ವಾಮಿ ಕಿಡಿ