ಚಿಕ್ಕಮಗಳೂರಲ್ಲಿರುವ ಅಳಿಯನ ಕಾಫೀ ಎಸ್ಟೇಟ್ ಗೆ ಚಾಪರ್ ನಲ್ಲಿ ಹಾರಿದ ಡಿಕೆ ಶಿವಕುಮಾರ್ ಕುಟುಂಬ

ಚಿಕ್ಕಮಗಳೂರಲ್ಲಿರುವ ಅಳಿಯನ ಕಾಫೀ ಎಸ್ಟೇಟ್ ಗೆ ಚಾಪರ್ ನಲ್ಲಿ ಹಾರಿದ ಡಿಕೆ ಶಿವಕುಮಾರ್ ಕುಟುಂಬ

ಅರುಣ್​ ಕುಮಾರ್​ ಬೆಳ್ಳಿ
|

Updated on: May 08, 2024 | 12:30 PM

ಶಿವಕುಮಾರ್ ಮೊದಲ ಮಗಳು ಐಶ್ವರ್ಯ ಶಿಕ್ಷಣ ಸಂಸ್ಥೆಯೊಂದನ್ನು ನಡೆಸುವುದರಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಎರಡನೇ ಮಗಳು ಆಭರಣ ಎಲ್ಲೂ ಕಾಣಿಸಿಕೊಳ್ಳುವುದಿಲ್ಲ. ಅವರನ್ನು ಇಲ್ಲಿ ನೋಡಬಹುದು. ಅವರ ಮಗ ಆಕಾಶ್ ಕೆಂಪೇಗೌಡ ಸಹ ಅಪರೂಪಕ್ಕೊಮ್ಮೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ.

ಚಿಕ್ಕಮಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆಗಾಗಿ ಮತದಾನ ಮುಗಿದಿದೆ. ಹಾಗಾಗಿ, ಒಂದು ತಿಂಗಳಿಗೂ ಹೆಚ್ಚು ಸಮಯ ಬೇಸಿಗೆಯ ಸುಡು ಬಿಸಿಲಲ್ಲಿ ಊರೂರು ಸುತ್ತುತ್ತ ದಣಿದಿದ್ದ ರಾಜಕಾರಣಿಗಳು ರಿಲ್ಯಾಕ್ಸ್ ಮೋಡ್ ಗೆ (relax mode) ಜಾರಿದ್ದಾರೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಮತ್ತು ಅವರ ಕುಟುಂಬ ರೆಸ್ಟ್ ಪಡೆಯಲು ಅವರ ಅಳಿಯನ ಕಾಫಿ ಎಸ್ಟೇಟ್ ಗೆ ಬಂದಿದ್ದಾರೆ. ಚಿಕ್ಕಮಗಳೂರಿನ ಐಡಿಎಸ್ ಜಿ ಕಾಲೇಜು ಆವರಣದಲ್ಲಿ ಲ್ಯಾಂಡ್ ಆಗಿದ್ದ ಚಾಪರ್ ನಲ್ಲಿ ಶಿವಕುಮಾರ್ ಕುಟುಂಬ ಕತ್ಲೇಖಾನ್ ಎಸ್ಟೇಟ್ (Kathlekhan estate) ಕಡೆ ಹೊರಡಿಲಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಶಿವಕುಮಾರ್ ಅವರ ಪತ್ನಿ, ಇಬ್ಬರು ಪುತ್ರಿಯರು, ಮಗ ಹಾಗೂ ಅಳಿಯ ಚಾಪರ್ ನಲ್ಲಿ ಆಸೀನರಾಗಿದ್ದಾರೆ. ಟಿವಿ9 ಚಿಕ್ಕಮಗಳೂರು ವರದಿಗಾರ ನೀಡಿರುವ ಮಾಹಿತಿ ಪ್ರಕಾರ ಶಿವಕುಮಾರ್ ಅವರು ನಗರದ ರೆಸಾರ್ಟ್ ನಲ್ಲೇ ಉಳಿದಿದ್ದಾರೆ. ಶಿವಕುಮಾರ್ ಮೊದಲ ಮಗಳು ಐಶ್ವರ್ಯ ಶಿಕ್ಷಣ ಸಂಸ್ಥೆಯೊಂದನ್ನು ನಡೆಸುವುದರಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಎರಡನೇ ಮಗಳು ಆಭರಣ ಎಲ್ಲೂ ಕಾಣಿಸಿಕೊಳ್ಳುವುದಿಲ್ಲ. ಅವರನ್ನು ಇಲ್ಲಿ ನೋಡಬಹುದು. ಅವರ ಮಗ ಆಕಾಶ್ ಕೆಂಪೇಗೌಡ ಸಹ ಅಪರೂಪಕ್ಕೊಮ್ಮೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಕಿಡ್ನ್ಯಾಪ್ ಕೇಸ್‌ನಲ್ಲಿ ಹೆಚ್​ಡಿ ರೇವಣ್ಣ ಬಂಧನ; ಡಿಕೆ ಶಿವಕುಮಾರ್ ಸ್ಪೋಟಕ ಹೇಳಿಕೆ