Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೇವಣ್ಣ ಬಂಧನ ಖಂಡಿಸಿ ಹಾಸನದಲ್ಲಿ ಜೆಡಿಎಸ್ ಕಾರ್ಯಕರ್ತರ ಹೋರಾಟ; ಡಿಕೆ ಶಿವಕುಮಾರ್​ ವಜಾಕ್ಕೆ ಆಗ್ರಹ

ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿರುವ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದ ಎಸ್​ಐಟಿ ತನಿಖೆ ನಡೆಯುತ್ತಿರುವಾಗಲೇ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ನಿನ್ನೆ ಹಾಸನದ ವಕೀಲ ಬಿಜೆಪಿ ಮುಖಂಡ ದೇವರಾಜೇಗೌಡರ ಪತ್ರಿಕಾಗೋಷ್ಠಿಯ ಬಳಿಕ ರಾಜ್ಯದಲ್ಲಿ ದೊಡ್ಡ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ. ಲೈಂಗಿಕ ಕಿರುಕುಳ ಆರೋಪ ಹಾಗೂ ಅತ್ಯಾಚಾರ ಆರೊಪ ಸಂಬಂಧ ದೂರು ದಾಖಲಾಗೋ ಮೊದಲೇ ಕಾಂಗ್ರೆಸ್​ ನಾಯಕರು ಸಂತಸ್ಥೆಯರನ್ನು ಭೇಟಿಯಾಗಿದ್ದರು, ಪೆನ್ ಡ್ರೈವ್ ಅನ್ನು ಎಲ್ಲೆಡೆ ಹಂಚಿರೋದರ ಹಿಂದೆ ಡಿಕೆ ಶಿವಕುಮಾರ್ ಹಾಗೂ ಮಂಡ್ಯದ ಶಿವರಾಮೇಗೌಡ ಕೈವಾಡ ಇದೆ ಎನ್ನೋ ಆರೋಪ ಕೇಳಿ ಬರುತ್ತಲೆ ಜೆಡಿಎಸ್ ಪಾಳಯದಲ್ಲಿ ಆಕ್ರೋಶದ ಜ್ವಾಲೆ ಬುಗಿಲೆದ್ದಿದೆ

ರೇವಣ್ಣ ಬಂಧನ ಖಂಡಿಸಿ ಹಾಸನದಲ್ಲಿ ಜೆಡಿಎಸ್ ಕಾರ್ಯಕರ್ತರ ಹೋರಾಟ; ಡಿಕೆ ಶಿವಕುಮಾರ್​ ವಜಾಕ್ಕೆ ಆಗ್ರಹ
ರೇವಣ್ಣ ಬಂಧನ ಖಂಡಿಸಿ ಹಾಸನದಲ್ಲಿ ಜೆಡಿಎಸ್ ಕಾರ್ಯಕರ್ತರ ಹೋರಾಟ
Follow us
ಮಂಜುನಾಥ ಕೆಬಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: May 07, 2024 | 8:06 PM

ಹಾಸನ, ಮೇ.07: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿರುವ ಸಂಸದ ಪ್ರಜ್ವಲ್ ವಿರುದ್ದ ಅತ್ಯಾಚಾರ ಹಾಗೂ ಎಚ್​ಡಿ ರೇವಣ್ಣ(HD Revanna) ವಿರುದ್ದ ಲೈಂಗಿಕ ಕಿರುಕುಳ, ಸಂತ್ರಸ್ಥೆ ಅಪಹರಣ ಆರೋಪದ ಮೇಲೆ ಎಸ್​ಐಟಿ ತನಿಖೆ ನಡೆಯುತ್ತಿರುವಾಗಲೇ ನಿನ್ನೆ(ಮೇ.06) ಸಂಜೆ ವಕೀಲ ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡ(Devaraje Gowda) ನಡೆಸಿದ ಸುದ್ದಿಗೋಷ್ಟಿ, ಇದೀಗ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ನೀಡಿದೆ. ಇಡೀ ಪೆನ್ ಡ್ರೈವ್ ಡ್ರಾಮಾದ ಸೂತ್ರದಾರ ಡಿಸಿಎಂ ಡಿಕೆ ಶಿವಕುಮಾರ್(DK Shivakumar) ಹಾಗೂ ಶಿವರಾಮೇಗೌಡ ಎಂದು ಆರೋಪಿಸಿರುವ ದೇವರಾಜೇಗೌಡ ಅವರು ಆಡಿಯೋ ರಿಲೀಸ್ ಮಾಡುತ್ತಲೆ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ.

ಇಡೀ ಪ್ರಕರಣದ ಹಿಂದೆ ಡಿಕೆ ಶಿವಕುಮಾರ್ ಇದ್ದಾರೆ, ನಮ್ಮ ನಾಯಕ ಎಚ್​ಡಿ ರೇವಣ್ಣರನ್ನು ವ್ಯವಸ್ಥಿತವಾಗಿ ಸಿಲುಕಿಸಲಾಗಿದೆ ಎಂದು ರೊಚ್ಚಿಗೆದ್ದ ಜೆಡಿಎಸ್ ಕಾರ್ಯಕರ್ತರು, ಮುಖಂಡರು ಇಂದು(ಮೇ.07) ಹಾಸನದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಮಾಜಿ ಸಚಿವ ಶಾಸಕ ಎ ಮಂಜು, ಶ್ರವಣಬೆಳಗೊಳ ಶಾಸಕ ಬಾಲಕೃಷ್ಣ ಹಾಗೂ ಮಾಜಿ ಶಾಶಕರುಗಳಾದ ಎಚ್ಕೆ ಕುಮಾರಸ್ವಾಮಿ, ಕೆಎಸ್ ಲಿಂಗೇಶ್ ನೇತೃತ್ವದಲ್ಲಿ ಹೇಮಾವತಿ ಪ್ರತಿಮೆಯಿಂದ ಬೃಹತ್ ಮೆರವಣಿಗೆ ನಡೆಸಿದರು. ಎನ್​ಆರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಡಿಕೆ ಶಿವಕುಮಾರ್ ಮತ್ತು ಶಿವರೇಮೇಗೌಡ ಪ್ರತಿಕೃತಿ ದಹನ ಮಾಡಿ ರೇವಣ್ಣರನ್ನ ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಇಡೀ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಕೈವಾಡ ಇದ್ದು, ರೇವಣ್ಣರನ್ನ ಸಿಲುಕಿಸಿದ್ದಾರೆ. ಕೂಡಲೆ ಅವರನ್ನು ಬಿಡುಗಡೆ ಮಾಡಬೇಕು. ಜೊತೆಗೆ ಡಿಕೆಶಿ  ಯನ್ನಸಂಪುಟದಿಂದ ವಜಾ ಮಾಡಿ ತನಿಖೆಯನ್ನ ಎಸ್​ಐಟಿ ಗೆ ವಹಿಸಿ ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಪ್ರಜ್ವಲ್ ಪ್ರಕರಣದ ಬಗ್ಗೆ ರಾಹುಲ್ ಗಾಂಧಿ ಬಳಿ ಎಲ್ಲಾ ಮಾಹಿತಿ ಇದ್ದಂತಿದೆ-HD ಕುಮಾರಸ್ವಾಮಿ

ಡಿಕೆಶಿ ಆರೋಪ ಸಾಭೀತು ಮಾಡಿದ್ರೆ ರಾಜಕೀಯ ನಿವೃತ್ತಿ ಎಂದು ಶ್ರೇಯಸ್ ಸವಾಲು

ರಾಜ್ಯದಲ್ಲಿ ಮೊದಲ ಹಂತದ ಚುನಾವಣೆಗೂ ಮುನ್ನವೇ ಹಾಸನದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಸಂತ್ರಸ್ಥೆಯನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಪೆನ್ ಡ್ರೈವ್ ಅನ್ನು ಅವರೇ ಡಿಕೆ ಶಿವಕುಮಾರ್​ಗೆ ತಲುಪಿಸಿದ್ದು, ನಂತರ ಅವರು ಹಾಸನದಲ್ಲಿ ಹಂಚಿಕೆಯಾಗಿವೆ. ಹಾಸನ ತಾಲ್ಲೂಕಿನ ಶಾಂತಿಗ್ರಾಮ ಬಳಿಕ ಸ್ಕೈ ಬರ್ಡ್ ಹೊಟೆಲ್​ನಲ್ಲೇ ಶ್ರೇಯಸ್ ಸಂತ್ರ್ಥೆಯನ್ನ ಭೇಟಿಯಾಗಿದ್ದಾರೆ ಎಂದು ದೇವರಾಜೇಗೌಡ ದೂರಿದ್ದಾರೆ. ಈ ಕುರಿತು ಹೊಳೆನರಸೀಪುರದಲ್ಲಿ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್, ‘ರೇವಣ್ಣ ಕುಟುಂಬಕ್ಕೂ ನಮ್ಮ ಕುಟುಂಬಕ್ಕೂ ರಾಜಕೀಯ ಜಿದ್ದಾ ಜಿದ್ದು ಇದೆ ಅಷ್ಟೇ. ಆದ್ರೆ, ಅವರ ಓರ್ವ ಮಾಜಿ ಸಚಿವರಾಗಿ ಜೈಲಿಗೆ ಹೋಗಿದ್ದು, ನಮಗೂ ಬೇಜಾರಿದೆ.  ಅವರು ಯಾಕೆ ಹಾಗೆ ಮಾಡಿಕೊಂಡ್ರೊ ಗೊತ್ತಿಲ್ಲ. ದೇವರಾಜೇಗೌಡ ಆರೋಪದಲ್ಲಿ ಯಾವುದೇ ಸತ್ಯಾಂಶ ಇಲ್ಲ, ಅವರು ಮಾಡಿದ ಆರೋಪ ಸಾಭೀತು ಮಾಡಿದ್ರೆ ನಾನು ರಾಜಕೀಯದಿಂದ ದೂರ ಇರ್ತೇನೆ. ಇಲ್ಲವಾದ್ರೆ ಮಾನನಷ್ಟ ಮೊಕದ್ದಮ್ಮೆ ಹೂಡುವ ಎಚ್ಚರಿಕೆ ನೀಡಿದ್ದಾರೆ.

ಒಟ್ಟಿನಲ್ಲಿ ಗಂಭೀರ ಸ್ವರೂಪದ ಆರೋಪಗಳು ಕೇಳಿ ಬಂದಿದ್ದರಿಂದ ಮೌನವಾಗಿದ್ದ ಜೆಡಿಎಸ್ ಕಾರ್ಯಕರ್ತರು, ದೇವರಾಜೇಗೌಡ ಸುದ್ದಿಗೋಷ್ಟಿ ನಡೆಸಿ ಕಾಂಗ್ರೆಸ್ ನಾಯಕರ ಆಡಿಯೋ ಬಿಡುಗಡೆ ಮಾಡುತ್ತಲೆ ರೊಚ್ಚಿಗೆದ್ದಿರೊ ಜೆಡಿಎಸ್ ಕಾರ್ಯಕರ್ತರು, ರೇವಣ್ಣ ಅವರ ಬಿಡುಗಡೆಗೆ ಆಗ್ರಹಿಸಿ ಹೋರಾಟ ಶುರುಮಾಡಿದ್ದಾರೆ. ಎಸ್​ಐಟಿ ತನಿಖೆ ಬೇಡವೇ ಬೇಡಾ ಸಿಬಿಐ ತನಿಖೆಗೆ ಕೊಡಿ ಎಂದು ಆಗ್ರಹಿಸಿದ್ದು, ಇದು ಮುಂದೆ ಮತ್ಯಾವ ತಿರುವು ಪಡೆಯುತ್ತೋ ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ