AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡ್ರೈವರ್ ಕಾರ್ತೀಕ್ ತನ್ನನ್ನು ಭೇಟಿಯಾಗಿರಲಿಲ್ಲ ಅಂತ ಶ್ರೇಯಸ್ ಪಟೇಲ್ ಸುಳ್ಳು ಹೇಳಿದರೇ?

ಡ್ರೈವರ್ ಕಾರ್ತೀಕ್ ತನ್ನನ್ನು ಭೇಟಿಯಾಗಿರಲಿಲ್ಲ ಅಂತ ಶ್ರೇಯಸ್ ಪಟೇಲ್ ಸುಳ್ಳು ಹೇಳಿದರೇ?

ಅರುಣ್​ ಕುಮಾರ್​ ಬೆಳ್ಳಿ
|

Updated on: May 08, 2024 | 1:17 PM

Share

ಪುಟ್ಟರಾಜು ಮನೆಯಲ್ಲಿ ಶ್ರೇಯಸ್ ಮಾತ್ರ ಗಡದ್ದಾಗಿ ಊಟ ಮಾಡುತ್ತಿದ್ದರೆ ಕಾರ್ತೀಕ್ ಸೇರಿದಂತೆ ಉಳಿದವರೆಲ್ಲ ಡೈನಿಂಗ್ ಟೇಬಲ್ ಸುತ್ತ ನಿಂತು ನೋಡುತ್ತಿದ್ದಾರೆ. ಇನ್ನೊಂದು ಫೋಟೋದಲ್ಲಿ ಶ್ರೇಯಸ್, ಕಾರ್ತೀಕ್ ಮತ್ತು ಇನ್ನೊಬ್ಬ ವ್ಯಕ್ತಿ ಸ್ನೇಹಿತರ ಹಾಗೆ ಕೈ ಕೈ ಹಿಡಿದು ಫೋಟೋ ಹಿಡಿಸಿಕೊಂಡಿದ್ದಾರೆ. ಇದನ್ನೆಲ್ಲ ಯಾಕೆ ಹೇಳಬೇಕಾಗಿದೆಯೆಂದರೆ ಶ್ರೇಯಸ್ ಗೆ ಸುಳ್ಳು ಹೇಳುವ ಅವಶ್ಯಕತೆ ಏನಿತ್ತು ಅಂತ!

ಹಾಸನ: ಪ್ರಜ್ವಲ್ ರೇವಣ್ಣ (Prajwal Revanna) ಸೆಕ್ಸ್ ಟೇಪುಗಳ ಪ್ರಕರಣ ಎಸ್ಐಟಿ ಅಧಿಕಾರಿಗಳ ದಿಕ್ಕು ತಪ್ಪಿಸುತ್ತಿರಬಹುದು. ಪ್ರಕರಣ ಅಗಾಧವಾಗಿದೆ ಮತ್ತು ಗೋಜಲುಗೋಜಲಾಗಿದೆ. ಬಗೆದಷ್ಟು ಆಳ ಅಂತಾರಲ್ಲ ಹಾಗೆ. ನಿನ್ನೆ ನಗರದಲ್ಲಿ ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ (Shreyas Patel), ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ಪ್ರಜ್ವಲ್ ರೇವಣ್ಣನ ಡ್ರೈವರ್ ಕಾರ್ತೀಕ್ (driver Karthik) ಯಾವುದೋ ಜಮೀನು ವಿಷಯಕ್ಕೆ ಸಂಬಂಧಿಸಿದಂತೆ ಭೇಟಿಯಾಗಿದ್ದರು ಅದಾದ ಬಳಿಕ ಭೇಟಿಯಾಗಿಲ್ಲ ಎಂದಿದ್ದರು. ಆದರೆ, ಅವರು ಮತ್ತು ಕಾರ್ತೀಕ್ ಜೊತೆಗಿರುವ ಹಲವು ಫೋಟೋಗಳು ವೈರಲ್ ಆಗುತ್ತಿದ್ದು ಶ್ರೇಯಸ್ ನಿನ್ನೆ ಆಡಿದ ಮಾತಿನ ಬಗ್ಗೆ ಗೊಂದಲ ಮೂಡಿಸುತ್ತವೆ. ಗ್ರೂಪ್ ಫೋಟೋನಲ್ಲಿ ಅವರಿಬ್ಬರನ್ನು ಗಮನಿಸಬಹುದು ಮತ್ತು ಪುಟ್ಟರಾಜು ಮನೆಯಲ್ಲಿ ಸಹ ಅವರಿಬ್ಬರು ಇರೋದನ್ನು ನೋಡಬಹುದು. ಈ ಪುಟ್ಟರಾಜು ಪೆನ್ ಡ್ರೈವ್ ಗಳನ್ನು ಲೀಕ್ ಮಾಡಿದವರಲ್ಲಿ ಒಬ್ಬನೆನ್ನಲಾಗಿದೆ. ಅವನ ಮನೆಯಲ್ಲಿ ಶ್ರೇಯಸ್ ಮಾತ್ರ ಗಡದ್ದಾಗಿ ಊಟ ಮಾಡುತ್ತಿದ್ದರೆ ಕಾರ್ತೀಕ್ ಸೇರಿದಂತೆ ಉಳಿದವರೆಲ್ಲ ಡೈನಿಂಗ್ ಟೇಬಲ್ ಸುತ್ತ ನಿಂತು ನೋಡುತ್ತಿದ್ದಾರೆ. ಇನ್ನೊಂದು ಫೋಟೋದಲ್ಲಿ ಶ್ರೇಯಸ್, ಕಾರ್ತೀಕ್ ಮತ್ತು ಇನ್ನೊಬ್ಬ ವ್ಯಕ್ತಿ ಸ್ನೇಹಿತರ ಹಾಗೆ ಕೈ ಕೈ ಹಿಡಿದು ಫೋಟೋ ಹಿಡಿಸಿಕೊಂಡಿದ್ದಾರೆ. ಇದನ್ನೆಲ್ಲ ಯಾಕೆ ಹೇಳಬೇಕಾಗಿದೆಯೆಂದರೆ ಶ್ರೇಯಸ್ ಗೆ ಸುಳ್ಳು ಹೇಳುವ ಅವಶ್ಯಕತೆ ಏನಿತ್ತು ಅಂತ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ದೇವರಾಜೇಗೌಡ ತತ್ವ ಸಿದ್ಧಾಂತವಿಲ್ಲದ ವ್ಯಕ್ತಿ, ಒಮ್ಮೆ ತಾನು ರಾಜಕಾರಣಿ ಅಂತಾರೆ ಮತ್ತೊಮ್ಮೆ ವಕೀಲ: ಶ್ರೇಯಸ್ ಪಟೇಲ್