Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ಕುಟುಂಬಕ್ಕೆ ಎಷ್ಟು ಸಲ ಅವಕಾಶ ಕೊಡುತ್ತೀರಿ? ಶ್ರೇಯಸ್ ಪಟೇಲ್ ಕೂಡ ರಾಜಕೀಯ ಹಿನ್ನೆಲೆಯ ಕುಟುಂಬದವರು: ಎನ್ ಚಲುವರಾಯಸ್ವಾಮಿ

ಒಂದೇ ಕುಟುಂಬಕ್ಕೆ ಎಷ್ಟು ಸಲ ಅವಕಾಶ ಕೊಡುತ್ತೀರಿ? ಶ್ರೇಯಸ್ ಪಟೇಲ್ ಕೂಡ ರಾಜಕೀಯ ಹಿನ್ನೆಲೆಯ ಕುಟುಂಬದವರು: ಎನ್ ಚಲುವರಾಯಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 08, 2024 | 5:53 PM

ಗೌಡರ ಕುಟುಂಬ ಚುನಾವಣೆ ಸಮಯದಲ್ಲಿ ನಿಮಗೆ ಸೌಕರ್ಯಗಳನ್ನು ನೀಡಲು ಮುಂದಾಗುತ್ತದೆ. ಆದರೆ ಆ ಆಮಿಶ ಕೇವಲ ಚುನಾವಣೆ ಮುಗಿಯುವವರೆಗೆ ಮಾತ್ರ, ಆದರೆ ನಮ್ಮ ಸರ್ಕಾರ ನೀಡುತ್ತಿರುವ ನೆರವು ಮುಂದಿನ ನಾಲ್ಕು ವರ್ಷಗಳವರೆಗೆ ಅಡೆತಡೆಯಿಲ್ಲದೆ ಮುಂದುವರಿಯಲಿದೆ ಎಂದು ಚಲುವರಾಯಸ್ವಾಮಿ ಹೇಳಿದರು.

ಹಾಸನ: ಹೆಚ್ ಡಿ ದೇವೇಗೌಡ (HD Devegowda) ಕುಟುಂಬ ಭದ್ರಕೋಟೆಯೆಂದು ಗುರುತಿಸಿಕೊಳ್ಳುವ ಹಾಸನದಲ್ಲಿ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ (N Cheluvarayaswamy) ಗೌಡರ ಕುಟುಂಬದ ವಿರುದ್ಧ ಗುಡುಗುತ್ತಾ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಪರ ಮತ ಯಾಚಿಸಿದರು. ಚನ್ನರಾಯಪಟ್ಟಣದಲ್ಲಿ (Channarayapatna) ಚುನಾವಣಾ ಪ್ರಚಾರ ಸಭೆಯಲ್ಲಿ ಮಾತಾಡಿದ ಚಲುವರಾಯಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೆಣ್ಣುಮಕ್ಕಳಿಗೆ ಪ್ರತಿ ತಿಂಗಳು ಎರಡೆರಡು ಸಾವಿರ ಅಲ್ಲದೆ ಬೇರೆ ಹಲವಾರು ಸೌಲಭ್ಯಗಳನ್ನು ಒದಗಿಸುತ್ತ್ತಿದ್ದಾರೆ. ಸ್ತ್ರೀಯರು ತಮ್ಮ ಪತಿಗೆ ಹಣ ಕೇಳಿದಾಗ ಒಮ್ಮೆ ಕೊಟ್ಟಾರು ಇಲ್ಲ ಎರಡು ಸಲ, ಆದರೆ ತಮ್ಮ ಸರ್ಕಾರ ಪ್ರತಿ ತಿಂಗಳು ಅವರಿಗೆ ಹಣ ನೀಡುತ್ತಿದೆ ಎಂದರು. ಇನ್ನೆಷ್ಟು ದಿನ ಒಂದೇ ಕುಟುಂಬಕ್ಕೆ ಮಣೆ ಹಾಕುತ್ತೀರಾ? ಶ್ರೇಯಸ್ ಪಟೇಲ್ ಕೂಡ ರಾಜಕೀಯ ಕುಟುಂಬದಿಂದ ಬಂದಿದ್ದಾರೆ, ದುರದೃಷ್ಟವಶಾತ್ ಅಸೆಂಬ್ಲಿ ಚುನಾವಣೆಯಲ್ಲಿ ಅಲ್ಪ ಅಂತರದಿಂದ ಸೋತಿದ್ದಾರೆ, ಆದರೆ ಈ ಬಾರಿ ಹಾಗಾಗಬಾರದು ಎಂದು ಚಲುವರಾಯಸ್ವಾಮಿ ಹೇಳಿದರು. ಗೌಡರ ಕುಟುಂಬ ಚುನಾವಣೆ ಸಮಯದಲ್ಲಿ ನಿಮಗೆ ಸೌಕರ್ಯಗಳನ್ನು ನೀಡಲು ಮುಂದಾಗುತ್ತದೆ. ಆದರೆ ಆ ಆಮಿಶ ಕೇವಲ ಚುನಾವಣೆ ಮುಗಿಯುವವರೆಗೆ ಮಾತ್ರ, ಆದರೆ ನಮ್ಮ ಸರ್ಕಾರ ನೀಡುತ್ತಿರುವ ನೆರವು ಮುಂದಿನ ನಾಲ್ಕು ವರ್ಷಗಳವರೆಗೆ ಅಡೆತಡೆಯಿಲ್ಲದೆ ಮುಂದುವರಿಯಲಿದೆ ಎಂದು ಚಲುವರಾಯಸ್ವಾಮಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಸುಮಲತಾ ಅವರಿಗೆ ರಾಜಕಾರಣದಲ್ಲೂ ಅಪಾರ ಜ್ಞಾನವಿದೆ, ಅವರಿಗಿರುವಷ್ಟು ತಿಳುವಳಿಕೆ ನನಗಿಲ್ಲ: ಎನ್ ಚಲುವರಾಯಸ್ವಾಮಿ