ಚಿಕ್ಕಬಳ್ಳಾಪುರದ ಜನಕ್ಕೆ ಸಿನಿಮಾ ಡೈಲಾಗ್ ಹೊಡೆಯುವ ರಕ್ಷಾ ರಾಮಯ್ಯನಲ್ಲ, ಮನೆಮಗ ಸುಧಾಕರ್ ಬೇಕು: ಆರ್ ಅಶೋಕ

ಚಿಕ್ಕಬಳ್ಳಾಪುರದ ಜನಕ್ಕೆ ಸಿನಿಮಾ ಡೈಲಾಗ್ ಹೊಡೆಯುವ ರಕ್ಷಾ ರಾಮಯ್ಯನಲ್ಲ, ಮನೆಮಗ ಸುಧಾಕರ್ ಬೇಕು: ಆರ್ ಅಶೋಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 08, 2024 | 5:02 PM

ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮತ್ತು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಎಲ್ಲ ನಾಯಕರ ಆಶೀರ್ವಾದ ಸುಧಾಕರ್ ಮೇಲಿದೆ ಎಂದ ಅಶೋಕ, ಭಾಷಣ ಮಾಡುವುದು ಕೂಡ ಗೊತ್ತಿರದ ಕಾಂಗ್ರೆಸ್ ಪಕ್ಷದ ರಕ್ಷಾರಾಮಯ್ಯಗೆ ಯಾರೂ ವೋಟು ಮಾಡಲ್ಲ ಅಂತ ಹೇಳಿದರು.

ದೊಡ್ಡಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ಕೆ ಸುಧಾಕರ್ (DR KS Sudhakar) ಪರ ಇಂದು ತಾಲ್ಲೂಕಿನ ಹಲವಾರು ಕಡೆಗಳಲ್ಲಿ ಪ್ರಚಾರ ಮಾಡಿದ ಹಿರಿಯ ಬಿಜೆಪಿ ನಾಯಕ ಆರ್ ಅಶೋಕ (R Ashoka), ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸುವ ಪ್ರಯತ್ನವನ್ನು ಮೂರನೇಯವರು ಯಾರೂ ಮಾಡಬೇಕಿಲ್ಲ, ಆ ಪಕ್ಷದ ನಾಯಕರೇ ಆ ಕೆಲಸ ಮಾಡಲಿದ್ದಾರೆ ಎಂದು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಮ್ಮ ಕುರ್ಚಿ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದರೆ ಅದನ್ನು ಪಡೆಯಲು ಡಿಕೆ ಶಿವಕುಮಾರ್ ಮಾಟ ಮಂತ್ರ ಮಾಡಿಸುತ್ತಿದ್ದಾರೆ, ಇವರ ಜಗಳದ ನಡುವೆ ಕಾಂಗ್ರೆಸ್ ಕಾರ್ಯಕರ್ತರು ಅಬ್ಬೇಪಾರಿಗಳಂತಾಗಿದ್ದಾರೆ ಎಂದು ಅಶೋಕ ಹೇಳಿದರು. ಜನರಿಗೂ ಇದು ಗೊತ್ತಾಗಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಅವರು ಇಲ್ಲಿನ ಮನೆಮಗ ಸುಧಾಕರ್ ಅವರನ್ನು ಅಯ್ಕೆ ಮಾಡಲು ತೀರ್ಮಾನ ಮಾಡಿಕೊಂಡಿದ್ದಾರೆ ಎಂದು ಅಶೋಕ ಹೇಳಿದರು. ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮತ್ತು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಎಲ್ಲ ನಾಯಕರ ಆಶೀರ್ವಾದ ಸುಧಾಕರ್ ಮೇಲಿದೆ ಎಂದ ಅಶೋಕ, ಭಾಷಣ ಮಾಡುವುದು ಕೂಡ ಗೊತ್ತಿರದ ಕಾಂಗ್ರೆಸ್ ಪಕ್ಷದ ರಕ್ಷಾರಾಮಯ್ಯಗೆ ಯಾರೂ ವೋಟು ಮಾಡಲ್ಲ ಅಂತ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಸರ್ಕಾರ ಪಾಪರ್‌ ಆಗಿರುವುದರಿಂದ ಕಾಂಗ್ರೆಸ್ ಸುಪ್ರೀಂಕೋರ್ಟ್ ಮೊರೆ ಹೋಗಿದೆ: ಆರ್ ಅಶೋಕ