ಚುನಾವಣಾ ಪ್ರಚಾರ ಮತ್ತು ಅನಧಿಕೃತವಾಗಿ ಈಶ್ವರಪ್ಪ ಪ್ರಧಾನಿ ಮೋದಿಯವರ ಫೋಟೋ ಬಳಸುವಂತಿಲ್ಲ: ಆರ್ ಅಶೋಕ
ಸರ್ಕಾರೀ ಕಾರ್ಯಕ್ರಮ ಅಥವಾ ಮದುವೆಯಂಥ ಸಮಾರಂಭಗಳಲ್ಲಿ ಫೋಟೋ ಬಳಸಬಹುದು, ಆದರೆ ಅನಧಿಕೃತವಾಗಿ ಬಳಸುವಂತಿಲ್ಲ, ಚುನಾವಣಾ ಸಂದರ್ಭದಲ್ಲಿ ಕೇವಲ ಬಿಜೆಪಿಗೆ ಮಾತ್ರ ಪ್ರಧಾನಿಯವರ ಫೋಟೋ ಬಳಸುವ ಅವಕಾಶವಿದೆ ಎಂದು ಅಶೋಕ ಹೇಳಿದರು.
ಬೆಂಗಳೂರು: ಕೆಲ ದಿನಗಳ ಹಿಂದೆಯೇ ನಾವು ಬಿಜೆಪಿ ರೆಬೆಲ್ ನಾಯಕ ಕೆಎಸ್ ಈಶ್ವರಪ್ಪ (KS Eshwarappa) ತಮ್ಮ ಚುನಾವಣಾ ಪ್ರಚಾರ ಕಚೇರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ (PM Narendra Modi) ಫೋಟೋ ಬಳಸಿದ್ದನ್ನು ವರದಿ ಅದು ವಿವಾದಕ್ಕೆ ಕಾರಣವಾಗಲಿದೆ ಎಂದು ಹೇಳಿದ್ದೆವು. ರಾಜ್ಯ ಬಿಜೆಪಿ ನಾಯಕರು ಈಶ್ವರಪ್ಪ ನಡೆ ಬಗ್ಗೆ ತೀವ್ರ ಅಸಮಾಧಾನ ಮತ್ತು ರೋಷ ವ್ಯಕ್ತಪಡಿಸುತ್ತಿದ್ದಾರೆ. ನಗರದಲ್ಲಿಂದು ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದ ಹಿರಿಯ ಬಿಜೆಪಿ ನಾಯಕ ಅರ್ ಅಶೋಕ (R Ashoka), ಈಶ್ವರಪ್ಪ ಮಾಡುತ್ತಿರುವುದು ತಪ್ಪು, ಅವರು ತಮ್ಮ ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ಮೋದಿ ಫೋಟೋ ಬಳಸುವಂತಿಲ್ಲ, ಅವರ ವಿರುದ್ಧ ದೂರು ದಾಖಲಿಸಲಾಗುವುದು ಎಂದು ಸ್ಪಷ್ಟವಾಗಿ ಹೇಳಿದರು. ಸರ್ಕಾರೀ ಕಾರ್ಯಕ್ರಮ ಅಥವಾ ಮದುವೆಯಂಥ ಸಮಾರಂಭಗಳಲ್ಲಿ ಫೋಟೋ ಬಳಸಬಹುದು, ಆದರೆ ಅನಧಿಕೃತವಾಗಿ ಬಳಸುವಂತಿಲ್ಲ, ಚುನಾವಣಾ ಸಂದರ್ಭದಲ್ಲಿ ಕೇವಲ ಬಿಜೆಪಿಗೆ ಮಾತ್ರ ಪ್ರಧಾನಿಯವರ ಫೋಟೋ ಬಳಸುವ ಅವಕಾಶವಿದೆ ಎಂದು ಅಶೋಕ ಹೇಳಿದರು. ಈಶ್ವರಪ್ಪ ಬಿಜೆಪಿ ಸದಸ್ಯರು ಹೌದಾ ಅಥವಾ ಅಲ್ಲವಾ ಅಂತ ಪಕ್ಷ ತೀರ್ಮಾನಿಸುತ್ತದೆಯೇ ಹೊರತು ಅವರಲ್ಲ ಎಂದು ಅಶೋಕ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕಾಂಗ್ರೆಸ್ ಪಕ್ಷದ ಕುಟುಂಬ ರಾಜಕಾರಣ ವಿರೋಧಿಸಿದ್ದ ಮೋದಿ ಯಡಿಯೂರಪ್ಪ ಪುತ್ರನಿಗೆ ಟಿಕೆಟ್ ನೀಡಿದ್ದಾರೆ -ಕೆಎಸ್ ಈಶ್ವರಪ್ಪ