ಮಂಡ್ಯದ ಬೀಕನಹಳ್ಳಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿರುವ ಕಿಡಿಗೇಡಿಗಳು, ಗ್ರಾಮಸ್ಥರಿಂದ ಪ್ರತಿಭಟನೆ
ಪ್ರತಿಮೆಗಳನ್ನು ಪ್ರತಿಷ್ಠಾಪಿಸುವ ಹಿಂದೆ ಒಂದು ಉದ್ದೇಶವಿರುತ್ತದೆ. ಮಹಾತ್ಮಾ ಗಾಂಧಿ, ಡಾ ಬಿಅರ್ ಅಂಬೇಡ್ಕರ್, ಸರ್ದಾರ್ ವಲ್ಲಭ್ ಭಾಯಿ ಪಟೇಲ್ ಮತ್ತು ಇನ್ನೂ ಹಲವಾರು ನಾಯಕರು ಪ್ರತಿಮೆಗಳನ್ನು ನಾವು ನೋಡುತ್ತೇವೆ. ಆದರೆ, ವಿಕೃತ ಮನಸ್ಥಿತಿಯವರಿಗೆ ಪುತ್ಥಳಿಗಳನ್ನು ವಿರೂಪಗೊಳಿಸಿದರೆ ಅದ್ಯಾವ ಆನಂದ ಸಿಗುತ್ತದೆಯೋ?
ಮಂಡ್ಯ: ಜಿಲ್ಲೆಯ ಕೆಆರ್ ಪೇಟೆ ತಾಲ್ಲೂಕಿನಲ್ಲಿರುವ ಬೀಕನಹಳ್ಳಿ (Beekanhalli) ದೊಡ್ಡ ಗ್ರಾಮವೇನೂ ಅಲ್ಲ, ಇಲ್ಲಿ ಗ್ರಾಮಸ್ಥರು ಹೇಳುವಂತೆ ಸುಮಾರು 100 ಮನೆಗಳಿವೆ ಮತ್ತು ಹೆಚ್ಚಿನ ಸಂಖ್ಯೆಯ ಕುಟುಂಬಗಳು ಹಾಲುಮತ ಸಮುದಾಯದವು. ಜನರೆಲ್ಲ ಶಾಂತಿ ಸೌಹಾರ್ದತೆ ಬದುಕುತ್ತಿದ್ದ ಈ ಪುಟ್ಟ ಗ್ರಾಮದಲ್ಲಿಕ ಕೆಲ ಕಿಡಿಗೇಡಿಗಳು (miscreants) ಅಶಾಂತಿ ತಲೆದೋರುವ ಸನ್ನಿವೇಶ ಸೃಷ್ಟಿಸಿದ್ದಾರೆ. ಗ್ರಾಮದ ನಡುಭಾಗದಲ್ಲಿರುವ ವೀರ ಸಂಗೊಳ್ಳಿ ರಾಯಣ್ಣ (Sangolli Rayanna) ಪ್ರತಿಮೆಯನ್ನು ದುಷ್ಕರ್ಮಿಗಳು ವಿರೂಪಗೊಳಿಸಿ ವಿಕೃತಿಯನ್ನು ಮೆರೆದಿದ್ದಾರೆ. ರಾಯಣ್ಣ ಬದುಕಿದ್ದಾಗ ಅವರ ಖಡ್ಗಕ್ಕೆ ಬ್ರಿಟಿಷರೇ ಬೆಚ್ಚುತ್ತಿದ್ದರು. ಅಂಥ ರಾಯಣ್ಣನ ಪ್ರತಿಮೆಯ ಕೈಯಲ್ಲಿದ್ದ ಖಡ್ಗವನ್ನು ದುಷ್ಟರು ತುಂಡರಿಸಿ ವಿಕೃತಾನಂದ ಅನುಭವಿಸುತ್ತಿದ್ದಾರೆ. ಪ್ರತಿಮೆಯ ಬೇರೆ ಭಾಗಳಿಗೂ ಹಾನಿಯನ್ನುಂಟು ಮಾಡಲಾಗಿದೆ. ಪ್ರತಿಮೆಗಳನ್ನು ಪ್ರತಿಷ್ಠಾಪಿಸುವ ಹಿಂದೆ ಒಂದು ಉದ್ದೇಶವಿರುತ್ತದೆ. ಮಹಾತ್ಮಾ ಗಾಂಧಿ, ಡಾ ಬಿಅರ್ ಅಂಬೇಡ್ಕರ್, ಸರ್ದಾರ್ ವಲ್ಲಭ್ ಭಾಯಿ ಪಟೇಲ್ ಮತ್ತು ಇನ್ನೂ ಹಲವಾರು ನಾಯಕರು ಪ್ರತಿಮೆಗಳನ್ನು ನಾವು ನೋಡುತ್ತೇವೆ. ಆದರೆ, ವಿಕೃತ ಮನಸ್ಥಿತಿಯವರಿಗೆ ಪುತ್ಥಳಿಗಳನ್ನು ವಿರೂಪಗೊಳಿಸಿದರೆ ಅದ್ಯಾವ ಆನಂದ ಸಿಗುತ್ತದೆಯೋ? ಕೆ ಆರ್ ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಂಗೊಳ್ಳಿ ರಾಯಣ್ಣ ಯಾವಾಗ ಬಿಜೆಪಿ ರಾಯಣ್ಣ ಆದ್ರು ಎಂದು ಸರ್ಕಾರವನ್ನ ಪ್ರಶ್ನಿಸಿದ ಕಾಫಿನಾಡಿನ ಜನ