Tata iPhone: ಭಾರತದಲ್ಲೇ ಸಂಪೂರ್ಣವಾಗಿ ಆ್ಯಪಲ್ ಐಫೋನ್ ತಯಾರಿಸಲು ಮುಂದಾದ ಟಾಟಾ
ಗ್ಯಾಜೆಟ್ ಮತ್ತು ಟೆಕ್ ಲೋಕದಲ್ಲಿ ಚೀನಾ ಅವಲಂಬನೆ ತಪ್ಪಿಸಲು ಟಾಟಾ ಕಂಪನಿ ಭಾರತದಲ್ಲೇ ಹೈಟೆಕ್ ಮೆಷಿನ್ ತಯಾರಿಕೆಗೆ ಮುಂದಾಗಿದೆ. ಟಾಟಾ ಎಲೆಕ್ಟ್ರಾನಿಕ್ಸ್ ಸಂಸ್ಥೆ ಬೆಂಗಳೂರು ಮತ್ತು ಪುಣೆಯ ಎರಡು ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದು ಐಫೋನ್ ಕೇಸಿಂಗ್ ತಯಾರಿಸಲು ಬೇಕಾದ ಯಂತ್ರಗಳನ್ನು ತಯಾರಿಸಿದೆ.
ದೇಶದಲ್ಲಿ ಮೇಕ್ ಇನ್ ಇಂಡಿಯಾ ಯೋಜನೆ ಮತ್ತು ಮೇಡ್ ಇನ್ ಇಂಡಿಯಾ ಕ್ಯಾಂಪೇನ್ಗೆ ಪೂರಕವಾಗಿ ಟಾಟಾ ಕಂಪನಿ ಹಲವು ಮಹತ್ವದ ಯೋಜನೆಗಳನ್ನು ಘೋಷಿಸುತ್ತಿದೆ. ಅಲ್ಲದೆ, ಗ್ಯಾಜೆಟ್ ಮತ್ತು ಟೆಕ್ ಲೋಕದಲ್ಲಿ ಚೀನಾ ಅವಲಂಬನೆ ತಪ್ಪಿಸಲು ಟಾಟಾ ಕಂಪನಿ ಭಾರತದಲ್ಲೇ ಹೈಟೆಕ್ ಮೆಷಿನ್ ತಯಾರಿಕೆಗೆ ಮುಂದಾಗಿದೆ. ಟಾಟಾ ಎಲೆಕ್ಟ್ರಾನಿಕ್ಸ್ ಸಂಸ್ಥೆ ಬೆಂಗಳೂರು ಮತ್ತು ಪುಣೆಯ ಎರಡು ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದು ಐಫೋನ್ ಕೇಸಿಂಗ್ ತಯಾರಿಸಲು ಬೇಕಾದ ಯಂತ್ರಗಳನ್ನು ತಯಾರಿಸಿದೆ. ಹೊಸೂರಿನ ತನ್ನ ಘಟಕದಲ್ಲಿ ಈ ಹೈ ಪ್ರಿಸಿಶನ್ ಯಂತ್ರಗಳನ್ನು ಪರೀಕ್ಷಿಸುತ್ತಿದೆ. ಇದು ಸಫಲವಾದರೆ ಟಾಟಾ ಸಂಸ್ಥೆಯ ದೊಡ್ಡ ಯೋಜನೆಯ ಒಂದು ಭಾಗ ಯಶಸ್ವಿಯಾಗುತ್ತದೆ. ಐಫೋನ್ ತಯಾರಿಕೆಗೆ ಬೇಕಾದ ಬಿಡಿಭಾಗಗಳ ಉದ್ದಿಮೆಗಳನ್ನು ಭಾರತದಲ್ಲೇ ನಿರ್ಮಿಸುವುದು ಟಾಟಾದ ಗುರಿಯಾಗಿದೆ. ಇದರಿಂದ ಟಾಟಾಗೆ ಮಾತ್ರವಲ್ಲ, ಭಾರತದ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಕ್ಕೂ ಪುಷ್ಟಿ ಸಿಕ್ಕಂತಾಗುತ್ತದೆ.
Latest Videos