ವಿನಾಶದ ಅಂಚಿನಲ್ಲಿರುವ ಕಪ್ಪು ಚಿರತೆ ನಾಗರಹೊಳೆ ಅಭಯಾರಣ್ಯದಲ್ಲಿ ಪ್ರತ್ಯಕ್ಷ, ಕೆಮೆರಾದಲ್ಲಿ ಸೆರೆ!

ವಿನಾಶದ ಅಂಚಿನಲ್ಲಿರುವ ಕಪ್ಪು ಚಿರತೆ ನಾಗರಹೊಳೆ ಅಭಯಾರಣ್ಯದಲ್ಲಿ ಪ್ರತ್ಯಕ್ಷ, ಕೆಮೆರಾದಲ್ಲಿ ಸೆರೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: May 09, 2024 | 10:09 AM

ನಾಗರಹೊಳೆ ಅಭಯಾರಣ್ಯದಲ್ಲಿ ಸಫಾರಿಗೆ ಅಂತ ತೆರಳಿದ್ದ ಜನಕ್ಕೆ ಅದು ಕಾಣಿಸಿಕೊಂಡಿದೆ. ಸಫಾರಿ ವಾಹನದ ಚಾಲಕ ಕೆ ಜೆ ವಿನಯ್ ಕುಮಾರ್ ಚಿರತೆಯನ್ನು ತಮ್ಮ ಕೆಮೆರಾದಲ್ಲಿ ಸೆರೆಹಿಡಿದಿದ್ದು ಅದನ್ನೇ ನಾವಿಲ್ಲಿ ಬಳಸಿಕೊಂಡಿದ್ದೇವೆ. ಅದು ರಾಜಾರೋಷವಾಗಿ ರಸ್ತೆ ದಾಟಿಕೊಂಡು ವಾಹನದ ಎಡಭಾಗಕ್ಕಿರುವ ಕಾಡು ಪ್ರದೇಶದಲ್ಲಿ ತನ್ನ ಗತ್ತಿನಲ್ಲಿ ನಡೆದುಹೋಗುವುದನ್ನು ದೃಶ್ಯಗಳಲ್ಲಿ ನೋಡಬಹುದು.

ಮೈಸೂರು: ಕಪ್ಪು ಚಿರತೆ (ಬ್ಲ್ಯಾಕ್ ಪ್ಯಾಂಥರ್) (Black Panther) ಅಳಿದು ಹೋಗುತ್ತಿರುವ ಸಂತತಿ ಅನ್ನೋದುಂಟು (extinction species), ಅಪರೂಪಕ್ಕೊಮ್ಮೆ ಅವು ಕಾಣಿಸುತ್ತವೆ. ಸುಮಾರು 4 ವರ್ಷಗಳ ಹಿಂದೆ ಕಾಕನಕೋಟೆಯಲ್ಲಿ ಜನ ಸಫಾರಿಗೆ ತೆರಳಿದಾಗ ಒಂದು ಕಪ್ಪು ಚಿರತೆ ಕಾಣಿಸಿಕೊಂಡಿತ್ತು. ಯಾವಾಗಲೋ ಒಮ್ಮೆ ಮಹಾರಾಷ್ಟ್ರದ ಕಾಡೊಂದರಲ್ಲಿ ಅದು ಕಂಡಿತ್ತು. ಕಾಕನಕೋಟೆಯಲ್ಲಿ ಕಾಣಿಸಿಕೊಂಡಿದ್ದ ಚಿರತೆ ಈಗಲೂ ಅದೇ ಪ್ರದೇಶದಲ್ಲಿ ಓಡಾಡುತ್ತಿರುವಂತಿದೆ. ಇದನ್ನು ಯಾಕೆ ಹೇಳಬೇಕಾಗಿದೆಯೆಂದರೆ ಇಂದು ಬೆಳಗ್ಗೆ ನಾಗರಹೊಳೆಯ ಕುಟ್ಟಗೇಟ್ (Kutta gate, Nagarahole) ಬಳಿ ಕಪ್ಪು ಚಿರತೆಯೊಂದು ಪ್ರತ್ಯಕ್ಷವಾಗಿತ್ತು. ನಾಗರಹೊಳೆ ಅಭಯಾರಣ್ಯದಲ್ಲಿ ಸಫಾರಿಗೆ ಅಂತ ತೆರಳಿದ್ದ ಜನಕ್ಕೆ ಅದು ಕಾಣಿಸಿಕೊಂಡಿದೆ. ಸಫಾರಿ ವಾಹನದ ಚಾಲಕ ಕೆ ಜೆ ವಿನಯ್ ಕುಮಾರ್ ಚಿರತೆಯನ್ನು ತಮ್ಮ ಕೆಮೆರಾದಲ್ಲಿ ಸೆರೆಹಿಡಿದಿದ್ದು ಅದನ್ನೇ ನಾವಿಲ್ಲಿ ಬಳಸಿಕೊಂಡಿದ್ದೇವೆ. ಅದು ರಾಜಾರೋಷವಾಗಿ ರಸ್ತೆ ದಾಟಿಕೊಂಡು ವಾಹನದ ಎಡಭಾಗಕ್ಕಿರುವ ಕಾಡು ಪ್ರದೇಶದಲ್ಲಿ ತನ್ನ ಗತ್ತಿನಲ್ಲಿ ನಡೆದುಹೋಗುವುದನ್ನು ದೃಶ್ಯಗಳಲ್ಲಿ ನೋಡಬಹುದು. ಅಪರೂಪಕ್ಕೊಮ್ಮೆ ಕಾಣುವ ವನ್ಯಜೀವಿಗಳನ್ನು ನೋಡುವುದು ಮನಸ್ಸಿಗೆ ಮುದ ನೀಡುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   Mysuru News: ಎಚ್​ಡಿ ಕೋಟೆ ದಮ್ಮನಕಟ್ಟೆ ಕಾಡಲ್ಲಿ ಕಾಣಿಸ್ತು ಕಪ್ಪು ಚಿರತೆ; ವಿಡಿಯೋ ನೋಡಿ