Mysuru News: ಎಚ್ಡಿ ಕೋಟೆ ದಮ್ಮನಕಟ್ಟೆ ಕಾಡಲ್ಲಿ ಕಾಣಿಸ್ತು ಕಪ್ಪು ಚಿರತೆ; ವಿಡಿಯೋ ನೋಡಿ
ಬಹಳ ದಿನಗಳ ನಂತರ ಮೈಸೂರಿನ ಎಚ್ಡಿ ಕೋಟೆ ತಾಲೂಕಿನ ಸಫಾರಿ ಕೇಂದ್ರ ವ್ಯಾಪ್ತಿಯ ಬಳಿ ಸೋಮವಾರ ಬೆಳಗ್ಗೆ ಕಪ್ಪು ಚಿರತೆ ಕಾಣಿಸಿಕೊಂಡಿದೆ.
ಮೈಸೂರು: ಬಹಳ ದಿನಗಳ ನಂತರ ಮೈಸೂರಿನ ಎಚ್ಡಿ ಕೋಟೆ ತಾಲೂಕಿನ ಸಫಾರಿ ಕೇಂದ್ರ ವ್ಯಾಪ್ತಿಯ ಬಳಿ ಸೋಮವಾರ ಬೆಳಗ್ಗೆ ಕಪ್ಪು ಚಿರತೆ ಕಾಣಿಸಿಕೊಂಡಿದೆ. ಸಫಾರಿ ವೇಳೆ ಕರಿ ಚಿರತೆ ಕಾಣಿಸಿಕೊಂಡಿದೆ. ಮೈಸೂರಿನ ಜೀವನ್ ಕೃಷ್ಣಪ್ಪ ಅವರ ಕ್ಯಾಮೆರಾದಲ್ಲಿ ಚಿರತೆಯ ವಿಡಿಯೋ ಸೆರೆಯಾಗಿದೆ. ಸುಮಾರು 12 ವರ್ಷ ವಯಸ್ಸಿನ ಈ ಚಿರತೆಯು ಬಿಸಲವಾಡಿ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಡಿಬಿ ಕುಪ್ಪೆ ಭಾಗದಲ್ಲಿ ಎರಡು ತಿಂಗಳ ಹಿಂದೆ ಕಾಣಿಸಿಕೊಂಡಿತ್ತು. ನಂತರ ಕರಿ ಚಿರತೆಯ ಪತ್ತೆ ಇರಲಿಲ್ಲ. ಇದೀಗ ಸಫಾರಿ ವೇಳೆ ಕಪ್ಪು ಚಿರತೆ ಕಾಣಿಸಿಕೊಂಡಿದ್ದರಿಂದ ಪ್ರವಾಸಿಗರು ಸಂತಸಗೊಂಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು

