AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆಗಾಲದಲ್ಲೇ ಆಗಲಿದೆ ‘ಭಗೀರಥ’ನ ಎಂಟ್ರಿ; ಮಂಡಳಿ ಅಧ್ಯಕ್ಷರಿಂದ ಟೀಸರ್​ ಬಿಡುಗಡೆ

ಜಯಪ್ರಕಾಶ್, ಶ್ರೀಯಾ ಪಾವನಿ ಮುಂತಾದವರು ‘ಭಗೀರಥ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಟೀಸರ್​ ಬಿಡುಗಡೆ ಮಾಡಲಾಗಿದೆ. ಮಳೆಗಾಲದಲ್ಲೇ ಸಿನಿಮಾ ರಿಲೀಸ್​ ಮಾಡಲು ನಿರ್ಮಾಪಕರು ತೀರ್ಮಾನಿಸಿದ್ದಾರೆ. ರಾಮ್​ ಜನಾರ್ದನ್​ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದೆ.

ಮಳೆಗಾಲದಲ್ಲೇ ಆಗಲಿದೆ ‘ಭಗೀರಥ’ನ ಎಂಟ್ರಿ; ಮಂಡಳಿ ಅಧ್ಯಕ್ಷರಿಂದ ಟೀಸರ್​ ಬಿಡುಗಡೆ
‘ಭಗೀರಥ’ ಸಿನಿಮಾ ತಂಡ
ಮದನ್​ ಕುಮಾರ್​
|

Updated on: May 09, 2024 | 10:56 PM

Share

ಭೂಮಿಗೆ ಗಂಗೆಯನ್ನು ಕರೆತಂದ ಭಗೀರಥನು ಬಹಳ ಅಸಾಧ್ಯವಾದ ಕೆಲಸವನ್ನು ಮಾಡಿ ತೋರಿಸಿದ. ಅಂಥ ಪ್ರಯತ್ನವನ್ನು ಭಗೀರಥ ಪ್ರಯತ್ನ ಎನ್ನುತ್ತೇವೆ. ಈಗ ‘ಭಗೀರಥ’ ಎಂಬ ಶೀರ್ಷಿಕೆಯಲ್ಲೇ ಹೊಸ ಕನ್ನಡ ಸಿನಿಮಾ (Kannada Movie) ಮೂಡಿಬಂದಿದೆ. ವಿಶೇಷ ಎಂದರೆ, ಈ ಸಿನಿಮಾ ಮಳೆಗಾಲದಲ್ಲೇ ಬಿಡುಗಡೆ ಆಗಲಿದೆ. ಜೂನ್​ನಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಲು ತಂಡ ಸಿದ್ಧತೆ ಮಾಡಿಕೊಂಡಿದೆ. ‘ಸಾಯಿ ರಮೇಶ್ ಪ್ರೊಡಕ್ಷನ್’ ಸಂಸ್ಥೆ ಮೂಲಕ ಕೆ. ರಮೇಶ್ ಮತ್ತು ಬಿ.ಭೈರಪ್ಪ ಮೈಸೂರು ಅವರು ‘ಭಗೀರಥ’ (Bhageeratha) ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ರಾಮ್ ಜನಾರ್ದನ್ ಅವರು ನಿರ್ದೇಶನ ಮಾಡಿದ್ದಾರೆ.

ಇತ್ತೀಚೆಗೆ ‘ಭಗೀರಥ’ ಸಿನಿಮಾದ ಟೀಸರ್ ಅನ್ನು ಬಿಡುಗಡೆ ಮಾಡಲಾಯಿತು‌. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ. ಸುರೇಶ್ ಅವರು ಟೀಸರ್ ಅನಾವರಣ ಮಾಡಿ ಶುಭ ಹಾರೈಸಿದರು. ‘ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ನಮ್ಮ ಸಿನಿಮಾದ ಮುಹೂರ್ತ ಆಗಿತ್ತು. ಈಗ ಶೂಟಿಂಗ್​ ಮುಕ್ತಾಯ ಆಗಿದೆ. ತೆರೆಗೆ ಬರಲು ಸಿನಿಮಾ ಸಿದ್ಧವಾಗಿದೆ. ಮಂದಿನ ತಿಂಗಳಲ್ಲಿ ಬಿಡುಗಡೆ ಮಾಡಲು ಪ್ರಯತ್ನ ನಡೆಯುತ್ತಿದೆ‌’ ಎಂದು ನಿರ್ದೇಶಕ ರಾಮ್​ ಜನಾರ್ದನ್​ ಹೇಳಿದ್ದಾರೆ.

‘ಚಿತ್ರತಂಡದ ಎಲ್ಲರ ಸಹಕಾರದಿಂದ ಈ ಸಿನಿಮಾ ಉತ್ತಮವಾಗಿ ಮೂಡಿಬಂದಿದೆ. ನಾನು ‘ಬಾಯ್ ಫ್ರೆಂಡ್’ ಸಿನಿಮಾದಿಂದ ನಿರ್ದೇಶಕನಾದೆ. ‘ಭಗೀರಥ’ ನಾನು ನಿರ್ದೇಶನ ಮಾಡಿದ 5ನೇ ಸಿನಿಮಾ. ಇದರಲ್ಲಿ ಪ್ರಸ್ತುತ ರಾಜಕಾರಣದ ಕಥಾಹಂದರ ಇದೆ. ಪತ್ರಕರ್ತರೊಬ್ಬರ ಸುತ್ತ ಕಥೆ ಸಾಗುತ್ತದೆ’ ಎಂದು ರಾಮ್ ಜನಾರ್ದನ್‌ ಹೇಳಿದ್ದಾರೆ. ಪತ್ರಕರ್ತನಾಗಿದ್ದ ಜಯಪ್ರಕಾಶ್​ ಅವರು ಈ ಸಿನಿಮಾಗೆ ಹೀರೋ ಆಗಿದ್ದಾರೆ. ಇದು ಅವರ ಮೂರನೇ ಸಿನಿಮಾ.

ಇದನ್ನೂ ಓದಿ: ‘ಕಣ್ಣಪ್ಪ’ ಶೂಟಿಂಗ್​ ಸೆಟ್​ಗೆ ಬಂದ ಪ್ರಭಾಸ್​; ಪೋಸ್ಟರ್​ ಮೂಲಕ ಗುಡ್​ ನ್ಯೂಸ್​

ಕೆ. ರಮೇಶ್ ಮತ್ತು ಬಿ. ಭೈರಪ್ಪ ಅವರು ಮಾತನಾಡಿ, ‘ನಿರ್ದೇಶಕರು ಹೇಳಿದ ಕಥೆ ನಮಗೆ ತುಂಬ ಇಷ್ಟ ಆಯಿತು. ಆದ್ದರಿಂದ ನಿರ್ಮಾಣ ಮಾಡಿದೆವು. ಸದ್ಯದಲ್ಲೇ ಸಿನಿಮಾ ರಿಲೀಸ್ ಮಾಡುತ್ತೇವೆ. ನಿಮ್ಮೆಲ್ಲರ ಪ್ರೋತ್ಸಾಹ ಇರಲಿ’ ಎಂದು ಹೇಳಿದ್ದಾರೆ. ನಟಿ ಶ್ರೀಯಾ ಪಾವನಿ ಅವರು ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಪ್ರದೀಪ್ ವರ್ಮ ಅವರ ಸಂಗೀತ ನಿರ್ದೇಶನ ಈ ಸಿನಿಮಾಗಿದೆ. ಸೂರಿ ಚಿತ್ತೂರು ಅವರ ಛಾಯಾಗ್ರಹಣ ಮಾಡಿದ್ದಾರೆ. ಜಯಪ್ರಕಾಶ್, ಶ್ರೀಯಾ ಪಾವನಿ ಜೊತೆ ಚಂದನಾ ರಾಘವೇಂದ್ರ, ಶಿವರಾಜ್ ಕೆ.ಆರ್ ಪೇಟೆ, ಸುಧಾ ಬೆಳವಾಡಿ, ರವಿಕಾಳೆ, ಬಾಲರಾಜ್​ ವಾಡಿ, ಶ್ರೀನಿವಾಸ್​ ಪ್ರಭು, ನಯನಾ, ಸುರಭಿ ರವಿ ಮುಂತಾದವರು ‘ಭಗೀರಥ’ ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ವೋಟ್ ಚೋರಿ ವಿರೋಧಿಸಿ ರಾಹುಲ್​​ ಗಾಂಧಿ ಪ್ರತಿಭಟನೆ: ಜೋಶಿ ಏನಂದ್ರು ನೋಡಿ
ವೋಟ್ ಚೋರಿ ವಿರೋಧಿಸಿ ರಾಹುಲ್​​ ಗಾಂಧಿ ಪ್ರತಿಭಟನೆ: ಜೋಶಿ ಏನಂದ್ರು ನೋಡಿ
ದುಡ್ಡಿಲ್ಲವೆಂದು ಖಾಲಿ ಇರುವ 2 ಲಕ್ಷ ಹುದ್ದೆಗಳನ್ನ ಭರ್ತಿ ಮಾಡ್ತಿಲ್ಲ: ಜೋಶಿ
ದುಡ್ಡಿಲ್ಲವೆಂದು ಖಾಲಿ ಇರುವ 2 ಲಕ್ಷ ಹುದ್ದೆಗಳನ್ನ ಭರ್ತಿ ಮಾಡ್ತಿಲ್ಲ: ಜೋಶಿ
ಜಡ್ಜ್ ಮಹಾಭಿಯೋಗಕ್ಕೆ ಸಹಿ ಹಾಕಿದ ಕಾಂಗ್ರೆಸ್ ಸಂಸದರು: ಜೋಶಿ ಏನಂದ್ರು ನೋಡಿ
ಜಡ್ಜ್ ಮಹಾಭಿಯೋಗಕ್ಕೆ ಸಹಿ ಹಾಕಿದ ಕಾಂಗ್ರೆಸ್ ಸಂಸದರು: ಜೋಶಿ ಏನಂದ್ರು ನೋಡಿ
ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದು ಕಾಂಪೌಂಡ್ ಗೇಟ್​​ಗೆ ಗುದ್ದಿದ BMTC ಬಸ್
ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದು ಕಾಂಪೌಂಡ್ ಗೇಟ್​​ಗೆ ಗುದ್ದಿದ BMTC ಬಸ್
ಕೋಲಾರ: ಬೆಳ್ಳಂಬೆಳಗ್ಗೆ ಬಸ್, ಕಾರುಗಳ ನಡುವೆ ಭೀಕರ ಸರಣಿ ಅಪಘಾತ
ಕೋಲಾರ: ಬೆಳ್ಳಂಬೆಳಗ್ಗೆ ಬಸ್, ಕಾರುಗಳ ನಡುವೆ ಭೀಕರ ಸರಣಿ ಅಪಘಾತ
ಆಳಂದ ಮತಗಳ್ಳತನ: ಚಾರ್ಜ್​ಶೀಟ್ ಬಗ್ಗೆ ಸುಭಾಷ್ ಗುತ್ತೇದಾರ್ ಮಗ ಹೇಳಿದ್ದೇನು?
ಆಳಂದ ಮತಗಳ್ಳತನ: ಚಾರ್ಜ್​ಶೀಟ್ ಬಗ್ಗೆ ಸುಭಾಷ್ ಗುತ್ತೇದಾರ್ ಮಗ ಹೇಳಿದ್ದೇನು?
ರಾಶಿಕಾ ಕ್ಯಾಪ್ಟನ್ ಆಗಿದ್ದು ಇಷ್ಟ ಆಗಿಲ್ಲ ಎಂದ ಸೂರಜ್; ಆಪ್ತರಲ್ಲೇ ಕಿತ್ತಾಟ
ರಾಶಿಕಾ ಕ್ಯಾಪ್ಟನ್ ಆಗಿದ್ದು ಇಷ್ಟ ಆಗಿಲ್ಲ ಎಂದ ಸೂರಜ್; ಆಪ್ತರಲ್ಲೇ ಕಿತ್ತಾಟ
ರಾಶಿಗಳಿಗನುಗುಣವಾಗಿ ಕಷ್ಟಗಳಿಂದ ಪಾರಾಗುವುದು ಹೇಗೆ ಗೊತ್ತಾ?
ರಾಶಿಗಳಿಗನುಗುಣವಾಗಿ ಕಷ್ಟಗಳಿಂದ ಪಾರಾಗುವುದು ಹೇಗೆ ಗೊತ್ತಾ?
ಇಂದು ಈ ರಾಶಿಯವರು ಎಚ್ಚರಿಕೆಯಿಂದಿರಬೇಕು
ಇಂದು ಈ ರಾಶಿಯವರು ಎಚ್ಚರಿಕೆಯಿಂದಿರಬೇಕು
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!