AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೈಂಗಿಕ ದೌರ್ಜನ್ಯ ಆರೋಪ: ವಕೀಲ ದೇವರಾಜೇಗೌಡ ಪೊಲೀಸರಿಗೆ ಸಿಕ್ಕಿದ್ದು ಹೇಗೆ? ಇಲ್ಲಿದೆ ಓದಿ

ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಹಿನ್ನೆಲೆ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಅವರನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ದೇವರಾಜೇಗೌಡ ಪೊಲೀಸರ ಬಲೆಗೆ ಬಿದ್ದಿದ್ದು ಹೇಗೆ? ಈ ಸ್ಟೋರಿ ಓದಿ.

ಲೈಂಗಿಕ ದೌರ್ಜನ್ಯ ಆರೋಪ: ವಕೀಲ ದೇವರಾಜೇಗೌಡ ಪೊಲೀಸರಿಗೆ ಸಿಕ್ಕಿದ್ದು ಹೇಗೆ? ಇಲ್ಲಿದೆ ಓದಿ
ವಕೀಲ ದೇವರಾಜೇಗೌಡ
ಮಂಜುನಾಥ ಕೆಬಿ
| Edited By: |

Updated on: May 11, 2024 | 11:09 AM

Share

ಹಾಸನ, ಮೇ 10: ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ (Sexual assault) ಎಸಗಿರುವ ಆರೋಪದ ಮೇಲೆ ಬಿಜೆಪಿ (BJP) ಮುಖಂಡ, ವಕೀಲ ದೇವರಾಜೇಗೌಡರನ್ನು (Devarajegowda) ಚಿತ್ರದುರ್ಗ ಪೊಲೀಸರು (Chitradurga Police) ಬಂಧಿಸಿದ್ದಾರೆ. ವಕೀಲ ದೇವರಾಜೇಗೌಡ ಪೊಲೀಸರ ಕೈಗೆ ಸಿಕ್ಕಿಬಿದ್ದು ಹೇಗೆ? ಇಲ್ಲಿದೆ.. ವಕೀಲ ದೇವರಾಜೇಗೌಡ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಏಪ್ರಿಲ್ 1 ರಂದು ಸಂತ್ರಸ್ತೆ ಹೊಳೆನರಸೀಪುರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ದೇವರಾಜೇಗೌಡರ ಬೆನ್ನು ಬಿದ್ದಿದ್ದರು. ಪೊಲೀಸರು ದೇವರಾಜೇಗೌಡರ ಮೊಬೈಲ್​ ಟ್ರ್ಯಾಪ್​ ಮಾಡಿ ಅವರನ್ನು ಬಂಧಿಸಲು ಮುಂದಾಗಿದ್ದರು.

ಆದರೆ ವಕೀಲ ದೇವರಾಜೇಗೌಡ ತಾವಾಗಿಯೇ ಪೊಲೀಸರಿಗೆ ತಗಲಾಕಿಕೊಂಡಿದ್ದಾರೆ. ಹೌದು… ಬಂಧನ ಭೀತಿಯಲ್ಲಿ ವಕೀಲ ದೇವರಾಜೇಗೌಡ ಪರಾರಿಯಾಗಲು ಮುಂದಾಗಿದ್ದರು. ಪರಾರಿಯಾಗುವ ಮುನ್ನ ತಮ್ಮ ಮೊಬೈಲ್​ ಆನ್​ ಮಾಡಿದ್ದಾರೆ. ಬಳಿಕ ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಕ್ಕೆ ಸ್ಪಷ್ಟನೆ ನೀಡುವ ವೀಡಿಯೋ ಮಾಡಿದ್ದಾರೆ. ಈ ವಿಡಿಯೋವನ್ನು ಶುಕ್ರವಾರ ರಾತ್ರಿ 8 ಗಂಟೆ 5 ನಿಮಿಷಕ್ಕೆ ವಾಟ್ಸಾಪ್ ಗ್ರೂಪ್​ವೊಂದಕ್ಕೆ ಕಳುಹಿಸಿದ್ದಾರೆ. ದೇವರಾಜೇಗೌಡರ ಬೆನ್ನು ಬಿದ್ದ ಪೊಲೀಸರಿಗೆ ಅವರ ಮೊಬೈಲ್​ ಆನ್​ ಆಗಿರುವ ವಿಚಾರ ತಿಳಿದು, ಮೊಬೈಲ್ ನೆಟ್​ವರ್ಕ್​ ಆಧರಿಸಿ ಹಿರಿಯೂರು ಬಳಿ ದೇವರಾಜೇಗೌಡರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದೇವರಾಜೇಗೌಡ 3-4 ಬ್ಯಾಗ್ ಲೆಗೇಜ್ ಪ್ಯಾಕ್ ಮಾಡಿಕೊಂಡು ಹೊರಟಿದ್ದನು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ದೇವರಾಜೇಗೌಡ ನನ್ನನ್ನು ಭೇಟಿಯಾಗಿದ್ದು, ಡಿಕೆ ಶಿವಕುಮಾರ್​ ಜತೆ ಪೋನ್​​ನಲ್ಲಿ ಮಾತಾಡಿದ್ದು ನಿಜ: ಶಿವರಾಮೇಗೌಡ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕೈವಾಡವಿದೆ ಎಂದು ವಕೀಲ ದೇವರಾಜೇಗೌಡ ಆರೋಪ ಮಾಡಿದ್ದರು.

ಪೆನ್​ಡ್ರೈವ್ ಪ್ರಕರಣದ ಹಿಂದಿನ ರೂವಾರಿ ಬೇರೆ ಯಾರೂ ಅಲ್ಲ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್. ಪೆನ್​ಡ್ರೈವ್ ಹಂಚಿಕೆ ಮಾಡೋ ಗೇಮ್ ಪ್ಲ್ಯಾನಿಂಗ್ ಸಿದ್ದರಾಮಯ್ಯ ಸರ್ಕಾರದ್ದು. ಕಾಂಗ್ರೆಸ್ ಸರ್ಕಾರ ನಿಜವಾದ ಆರೋಪಿಗಳನ್ನು ಬಚ್ಚಿಟ್ಟುಕೊಂಡಿದೆ. ಸಂತೃಸ್ತರಿಗೆ ಹಣ ಕೊಟ್ಟುಕರ್ಕೊಂಡು ಬಂದಿದ್ದಾರೆ. ಎಲ್ ಆರ್ ಶಿವರಾಮೇಗೌಡರನ್ನು ಮಧ್ಯವರ್ತಿಯಾಗಿ ಕಳುಹಿಸಲಾಗಿದೆ ಎಂದು ಬಿಜೆಪಿ ಮುಖಂಡ ದೇವರಾಜೇಗೌಡ ಆರೋಪಿಸಿದ್ದರು.

ಈ ಆರೋಪಕ್ಕೆ ಸಂಬಂಧಿಸಿದಂತೆ ಶಿವರಾಮೇಗೌಡ ಜೊತೆ ಮಾತನಾಡಿದ ಎರಡು ಆಡಿಯೋ ತುಣುಕು ಹಾಗೂ ಹನಿಟ್ರ್ಯಾಪ್ ಸಂಬಂಧ ಮಹಿಳೆ ಗಂಡನ ಜೊತೆ ಮಾತಾಡಿದ ಒಂದು ಆಡಿಯೋ ಬಿಡುಗಡೆ ಮಾಡಿದ್ದಾರೆ. ಶಿವರಾಮೇಗೌಡ ಜೊತೆ ಡಿಕೆ ಶಿವಕುಮಾರ್​ ವಿಚಾರ ಮಾತಾಡುವ ಆಡಿಯೋ ಬಿಡುಗಡೆ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ