ಬೆಂಗಳೂರಿನಲ್ಲಿ ನಿನ್ನೆ ಸುರಿದ ಮಳೆಗೆ ಹಲವೆಡೆ ಅನಾಹುತ; ಪಾಲಿಕೆ ಹೆಲ್ಪ್ ಲೈನ್​ಗೆ ಬಂತು ನೂರಾರು ದೂರುಗಳು

ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಭರ್ಜರಿ ಮಳೆಯಾಗುತ್ತಿದ್ದು, ಬಿರುಬಿಸಿಲಿಗೆ ಹೈರಾಣರಾಗಿದ್ದ ಜನರು ಖುಷ್​ ಆಗಿದ್ದಾರೆ. ಅದರಂತೆ ನಿನ್ನೆ(ಮೇ.08) ಸುರಿದ ಬಿರುಗಾಳಿ ಸಹಿತ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು, ಹಲವೆಡೆ ಮರಗಳು ಧರೆಗುರುಳಿದಿವೆ. ಈ ಹಿನ್ನಲೆ ಪಾಲಿಕೆ ಹೆಲ್ಪ್ ಲೈನ್​ಗೆ ನೂರಾರು ಕರೆಗಳು ಬಂದಿವೆ.

ಬೆಂಗಳೂರಿನಲ್ಲಿ ನಿನ್ನೆ ಸುರಿದ ಮಳೆಗೆ ಹಲವೆಡೆ ಅನಾಹುತ; ಪಾಲಿಕೆ ಹೆಲ್ಪ್ ಲೈನ್​ಗೆ ಬಂತು ನೂರಾರು ದೂರುಗಳು
ಬೆಂಗಳೂರಿನಲ್ಲಿ ಮಳೆಯಿಂದ ಅವಾಂತರ, ಪಾಲಿಕೆ ಹೆಲ್ಪಲೈನ್​ಗೆ ದೂರು
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:May 09, 2024 | 6:19 PM

ಬೆಂಗಳೂರು, ಮೇ.09: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಳೆಯ(Bengaluru Rain) ದರ್ಶನಕ್ಕಾಗಿ ಕಾದು ಕಾದು ಸುಸ್ತಾಗಿದ್ದರು. ವರುಣ ದೇವನಿಗಾಗಿ ಹಲವರು ಪ್ರಾರ್ಥನೆ ಕೂಡ ಮಾಡಿದ್ದರು. ಅದರಂತೆ ವರುಣ ಕೃಫೆ ತೋರಿದ್ದು, ಕಳೆದ ನಾಲ್ಕೈದು ದಿನಗಳಿಂದ ಸಿಲಿಕಾನ್​ ಸಿಟಿಯಲ್ಲಿ ಭರ್ಜರಿ ಮಳೆಯಾಗಿದೆ. ಬಿಸಿಲಿನ ಬೇಗೆಗೆ ಕಂಗಾಲಾಗಿದ್ದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಇದೇ ಮಳೆ ನಗರದ ಕೆಲವೆಡೆ ಅನಾಹುತವನ್ನೇ ಸೃಷ್ಟಿ ಮಾಡಿದ್ದು, ನಿನ್ನೆ ಸುರಿದ ಮಳೆಗೆ ಬೆಂಗಳೂರಿನ ಹಲವೆಡೆ ಮರಗಳು ಧರೆಗುರುಳಿದಿವೆ.

ಪಾಲಿಕೆ ಹೆಲ್ಪ್ ಲೈನ್​ಗೆ ಬಂತು ನೂರಾರು ದೂರುಗಳು

ಬಿರುಗಾಳಿ ಸಹಿತ ಮಳೆಯ ಆರ್ಭಟಕ್ಕೆ  ಮರಗಳು, ರೆಂಬೆ, ಕೊಂಬೆ ಉರುಳಿದ ಬಗ್ಗೆ ಪಾಲಿಕೆ ಹೆಲ್ಪ್ ಲೈನ್​ಗೆ ನೂರಾರು ದೂರುಗಳು ದಾಖಲಾಗಿವೆ. ಜೊತೆಗೆ ವಿವಿಧ ವಲಯಗಳಿಂದ ಮರ ಬಿದ್ದ ಬಗ್ಗೆ ದೂರು ಬರುತ್ತಿದ್ದಂತೆ ಸಿಬ್ಬಂದಿಗಳು ತೆರಳಿ ಸಮಸ್ಯೆ ಬಗೆಹರಿಸಿದ್ದಾರೆ.

ಎಲ್ಲೆಲ್ಲಿ ಎಷ್ಟು ಮರ-ಕೊಂಬೆ ಬಿದ್ದ ಬಗ್ಗೆ ದೂರು

                          ದೂರು ದಾಖಲು                                         ತೆರವು
                       ಆರ್.ಆರ್. ನಗರ – 70                                           04
                        ದಕ್ಷಿಣ ವಲಯ    -16                                           08
                       ಬೊಮ್ಮನಹಳ್ಳಿ     -2                                            02
                       ಪಶ್ಚಿಮ ವಲಯ   -30                                            10
                   ಯಲಹಂಕ ವಲಯ -7                                             03
                       ಪೂರ್ವವಲಯ    -24                                             12
                   ದಾಸರಹಳ್ಳಿ ವಲಯ -3                                              01

ಇನ್ನು ಆರ್.ಆರ್. ನಗರ ವಲಯದಿಂದ ಅತೀ ಹೆಚ್ಚು ಅಂದರೆ ಬರೊಬ್ಬರಿ 70 ಮರ ಬಿದ್ದ ದೂರು ದಾಖಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮಳೆ ಅವಾಂತರ, ಬೋರ್ ಬ್ಯಾಂಕ್ ರಸ್ತೆ ಕುಸಿತ

ಮಳೆಗಾಲ ಶುರುವಾದ ಹಿನ್ನಲೆ ಈ ಬಾರಿ ಮಳೆ ಅವಾಂತರಗಳನ್ನು ಬೇಗ ಬಗೆಹರಿಸಲು ಬಿಬಿಎಂಪಿ ಹೊಸ ಪ್ಲಾನ್ ಮಾಡಿದ್ದು, ವಲಯವಾರು ವಿಪತ್ತು ನಿರ್ವಹಣೆಯ ಕಂಟ್ರೋಲ್ ರೂಂ ಸ್ಥಾಪನೆ ಮಾಡಿದೆ. ಸಹಾಯವಾಣಿ ಸಂಖ್ಯೆ 1533 ಜೊತೆಗೆ ವಿವಿಧ ಎಂಟು ವಲಯಗಳಲ್ಲಿ ಪ್ರತ್ಯೇಕವಾಗಿ ಕಂಟ್ರೋಲ್ ರೂಮ್‌ ಓಪನ್ ಆಗಿದೆ.

ಇಲ್ಲಿದೆ ಹೆಲ್ಪಲೈನ್​ ಸಂಖ್ಯೆ

ಬೊಮ್ಮನಹಳ್ಳಿ ವಲಯ: 080-25732447,25735642,9480685707

ದಾಸರಹಳ್ಳಿ ವಲಯ: 080-28394909,9480685709

ಪೂರ್ವ ವಲಯ: 080-22975803,9480685702

ಮಹದೇವಪುರ ವಲಯ: 080-28512300,9480685706

ರಾಜರಾಜೇಶ್ವರಿ ನಗರ ವಲಯ: 080-28601851,9480685708

ದಕ್ಷಿಣ ವಲಯ: 9480685704,8026566362,8022975703

ಪಶ್ಚಿಮ ವಲಯ: 080-23463366,23561692,9480685703

ಯಲಹಂಕ ವಲಯ: 080-23636671,22975936,9480685705

ತುರ್ತು ಸಂದರ್ಭಗಳಲ್ಲಿ ತಮ್ಮ ವ್ಯಾಪ್ತಿಯ ಕಂಟ್ರೋಲ್ ರೂಂಗೆ ಕರೆ ಮಾಡಿ ದೂರು ಸಲ್ಲಿಸಬಹುದು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:15 pm, Thu, 9 May 24

ತಾಜಾ ಸುದ್ದಿ
Daily Devotional: ಸನಾತನ ಧರ್ಮದಲ್ಲಿ 108ರ ಮಹತ್ವ ತಿಳಿದುಕೊಳ್ಳಿ
Daily Devotional: ಸನಾತನ ಧರ್ಮದಲ್ಲಿ 108ರ ಮಹತ್ವ ತಿಳಿದುಕೊಳ್ಳಿ
Daily Horoscope: ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ
Daily Horoscope: ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ
‘ದರ್ಶನ್ ರಿಲೀಸ್​ ಆಗ್ತಾರಾ?’: ದೇವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದ ಪೂಜಾರಿ
‘ದರ್ಶನ್ ರಿಲೀಸ್​ ಆಗ್ತಾರಾ?’: ದೇವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದ ಪೂಜಾರಿ
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ