ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಹೋಬಳಿಯ ಬೀರಯ್ಯನಪಾಳ್ಯದ ಮೂರ್ತಿ.ಬಿ.ನಾನು ಓದಿದ್ದು ಪಿಯುಸಿ,ಹೆಸರಘಟ್ಟ ಫಿಲ್ಮ್ ಆ್ಯಂಡ್ ಟಿವಿ ಕಾಲೇಜಿನಲ್ಲಿ ಕೆಲಸಗಾರನಾಗಿ ಕ್ಯಾಮರಾ ಕಲಿತು ದಿನಪತ್ರಿಕೆಗಳಿಗೆ ಪೋಟೋ ಕಳಿಸುವ ಕೆಲಸ ಬಳಿಕ 17ವರ್ಷದ ಹಿಂದೆ ನೇರವಾಗಿ ಟಿವಿನೈ ನಲ್ಲಿ ಕ್ಯಾಮರಾಮೆನ್ ಕೆಲಸಕ್ಕೆ ಸೇರಲಾಯಿತು. ಕಳೆದ 6ವರ್ಷದ ಹಿಂದೆ ಇದ್ದಕ್ಕಿದ್ದಂತೆ ಕ್ರೈಂ ಸಿಟಿ,ರಕ್ತಮಂಗಲ ಅಂತೆಲ್ಲ ಖ್ಯಾತಿ ಪಡೆದಿದ್ದ ನೆಲಮಂಗಲಕ್ಕೆ ಕ್ಯಾಮರಾ ಮ್ಯಾನ್ ಹಾಗೂ ವರದಿಗಾರನಾಗಿ ಕೆಲಸ ಮಾಡುವ ಅವಕಾಶ ನಮ್ಮ ಸೀನಿಯರ್ ಗಳಿಂದ ಕೂಡಿ ಬಂತು,ತನಗಿಂತ ಚನ್ನಾಗಿ ಕೆಲಸ ಮಾಡುವ ಕ್ಯಾಮರಾ ಮ್ಯಾನ್ ಗಳು ಇದ್ದರು ನನಗೆ ಅವಕಾಶ ಸಿಕ್ಕಿದ್ದಕ್ಕೆ ನನಗೆ ಹೆಮ್ಮೆ ಇದೆ,ನಾನು ಈ ಭಾಗದಲ್ಲಿ ಬಂದಾಗಿನಿಂದ ರೌಡಿಶೀಟರಗಳ ಉಪಟಳ ಕಂಟ್ರೋಲ್ಗೆ ಬಂದಿದೆ,ಯಾವುದೇ ಒಂದು ಚಿಕ್ಕದಾಗಲಿ ದೊಡ್ಡ ಮಟ್ಟದ ಕ್ರೈಂ ಅದ್ರೂ ಮೊದಲು ನಮ್ಮಲ್ಲಿ ನ್ಯೂಸ್ ಕವರ್ ಆಗಿರುತ್ತೆ,
ನೆಲಮಂಗಲ: ತಮ್ಮದೇ ಜಮೀನಿನಲ್ಲಿ ಬೆಂಕಿ ಆರಿಸಲು ಹೋಗಿದ್ದ ವೃದ್ಧ ಸಜೀವದಹನ
ಬೆಂಗಳೂರು ಉತ್ತರ ತಾಲೂಕಿನ ಕಗ್ಗಲಿಪಾಳ್ಯದಲ್ಲಿ ನೀಲಗಿರಿ ತೋಟದಲ್ಲಿ ಬೆಂಕಿ ಅವಘಡ ಸಂಭವಿಸಿ 65 ವರ್ಷದ ಕಬ್ಬಾಳಯ್ಯ ಎಂಬ ವೃದ್ಧ ಸಾವನ್ನಪ್ಪಿದ್ದಾರೆ. ತಮ್ಮ ಜಮೀನಿನಲ್ಲಿ ಬೆಂಕಿ ನಂದಿಸುವ ಪ್ರಯತ್ನದ ವೇಳೆ ಈ ಅವಘಡ ಸಂಭವಿಸಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
- ಬಿ ಮೂರ್ತಿ, ನೆಲಮಂಗಲ
- Updated on: Feb 10, 2025
- 9:37 pm
ಬೆಂಗಳೂರು: ಮಾದಾವರ ಸುತ್ತಮುತ್ತ ಫುಲ್ ಟ್ರಾಫಿಕ್ಜಾಮ್, ವಾಹನ ಸವಾರರ ಪರದಾಟ
ಬುಕ್ ಮೈ ಶೋ ಆಯೋಜಿಸಿದ್ದ ಎಡ್ ಶೆರಾನ್ ಅವರ ಅಂತರಾಷ್ಟ್ರೀಯ ಸಂಗೀತ ಕಾರ್ಯಕ್ರಮ ನೆಲಮಂಗಲದ ಬಿಐಇಸಿ ಮಾದಾವರ ಮೈದಾನದಲ್ಲಿ ನಡೆಯಿತು. 20,000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರಿಂದ ಮಾದಾವರದ ಸುತ್ತಮುತ್ತ ಭಾರಿ ಸಂಚಾರ ದಟ್ಟಣೆ ಉಂಟಾಯಿತು. ಪೊಲೀಸರು ಸಂಚಾರ ನಿಯಂತ್ರಿಸಲು ಹರಸಾಹಸ ಪಟ್ಟರು. ಸಾವಿರಾರು ವಾಹನಗಳು ಸಿಲುಕಿಕೊಂಡವು.
- ಬಿ ಮೂರ್ತಿ, ನೆಲಮಂಗಲ
- Updated on: Feb 9, 2025
- 7:46 pm
ನಿರ್ಮಾಣ ಹಂತದ ಕಟ್ಟಡದಲ್ಲಿ ಬೆಂಕಿ ಅವಘಡ: ಇಬ್ಬರು ಕಾರ್ಮಿಕರು ದುರ್ಮರಣ
ಬೆಂಗಳೂರಿನ ಉತ್ತರ ತಾಲೂಕಿನ ಸೀಗೆಹಳ್ಳಿಯಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿದೆ. ಉತ್ತರ ಪ್ರದೇಶ ಮತ್ತು ಬಿಹಾರ ಮೂಲದ ಇಬ್ಬರು ಕಾರ್ಮಿಕರು ದುರ್ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ವುಡ್ ವರ್ಕಿಂಗ್ ಕೆಲಸದ ವೇಳೆ ಬೆಂಕಿ ಹೊತ್ತಿಕೊಂಡಿದೆ. ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ.
- ಬಿ ಮೂರ್ತಿ, ನೆಲಮಂಗಲ
- Updated on: Feb 6, 2025
- 2:58 pm
ಮ್ಯಾಟ್ರಿಮೋನಿಯಲ್ಲಿ ಪರಿಚಯ, ಮದುವೆಯಾಗುವುದಾಗಿ ನಂಬಿಸಿ ಮಹಿಳಾ ಕಾನ್ಸ್ಟೇಬಲ್ಗೆ 18 ಲಕ್ಷ ರೂ. ವಂಚನೆ
ಮ್ಯಾಟ್ರಿಮೋನಿ ಸೈಟ್ನಲ್ಲಿ ಪರಿಚಯವಾದ ವ್ಯಕ್ತಿ ಮದುವೆಯಾಗುವುದಾಗಿ ನೀಡಿದ ಮಾತನ್ನು ನಂಬಿ ವರದಕ್ಷಿಣೆ ಎಂದು 18 ಲಕ್ಷ ರೂ. ನೀಡಿ ಮಹಿಳಾ ಕಾನ್ಸ್ಟೇಬಲ್ ಒಬ್ಬರು ವಂಚನೆಗೆ ಒಳಗಾದ ಘಟನೆ ನೆಲಮಂಗಲ ತಾಲೂಕಿನಿಂದ ವರದಿಯಾಗಿದೆ. ಇದೀಗ ದಾಬಸ್ ಪೇಟೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.
- ಬಿ ಮೂರ್ತಿ, ನೆಲಮಂಗಲ
- Updated on: Jan 31, 2025
- 9:23 am
ಬೆಂಗಳೂರಿನಲ್ಲಿ ತನ್ನ ಹಾರಾಟ ಶುರು ಮಾಡಿದ ಗರುಡ ಗ್ಯಾಂಗ್: ಉದ್ಯಮಿಗಳೇ ಇವರ ಟಾರ್ಗೆಟ್
ಕಳ್ಳತನ, ದರೋಡೆ ಪ್ರಕರಣಗಳು ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಚಡ್ಡಿ ಗ್ಯಾಂಗ್, ಇರಾನಿ ಗ್ಯಾಂಗ್ ರೀತಿ ಇದೀಗ ಬೆಂಗಳೂರಿಗೆ ಉಡುಪಿ ಮೂಲದ ಗರುಡ ಗ್ಯಾಂಗ್ ಎಂಟ್ರಿ ಕೊಟ್ಟಿದೆ. ಉದ್ಯಮಿಗಳನ್ನು ಟಾರ್ಗೆಟ್ ಮಾಡಿಕೊಂಡು ಅವರನ್ನು ಕಿಡ್ಯ್ನಾಪ್ ಹಣ ಎಗರಿಸುವುದೇ ಇವರ ಪ್ಲ್ಯಾನ್ ಆಗಿದೆ. ಸದ್ಯ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.
- ಬಿ ಮೂರ್ತಿ, ನೆಲಮಂಗಲ
- Updated on: Jan 30, 2025
- 3:58 pm
ನೆಲಮಂಗಲ: ಹೆದ್ದಾರಿಯಲ್ಲೇ ಕಾರು ಬೈಕ್ ನಿಲ್ಲಿಸಿ ರಂಪಾಟ, ಕಿಲೋಮೀಟರ್ಗಟ್ಟಲೆ ಟ್ರಾಫಿಕ್ ಜಾಮ್
ಸಣ್ಣ ಅಪಘಾತದ ಬಳಿಕ ಚಾಲಕರಿಬ್ಬರು ದರ್ಪ ಮೆರೆದಿದ್ದರಿಂದ ದಾಬಸ್ ಪೇಟೆ ಎಡೇಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಕಿಲೋ ಮೀಟರ್ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಯಿತು. ಇದೇ ವೇಳೆ, ಸ್ಥಳದಲ್ಲಿ ಇತರ ಚಾಲಕರು ಹಾಗೂ ಕಾರು ಚಾಲಕನ ಮಧ್ಯೆ ಮಾತಿನ ಚಕಮಕಿಯೂ ನಡೆಯಿತು. ವಿಡಿಯೋ ಇಲ್ಲಿದೆ.
- ಬಿ ಮೂರ್ತಿ, ನೆಲಮಂಗಲ
- Updated on: Jan 27, 2025
- 1:12 pm
ದಾಸರಹಳ್ಳಿಲ್ಲೊಬ್ಬ ಸೈಕೋಪಾತ್ ತಂದೆ: ಬಿಸಿ ನೀರು ಕಾಯಿಸುವ ಹೀಟರ್‌ನಿಂದ ಪುಟ್ಟ ಮಕ್ಕಳಿಗೆ ಬರೆ
ಬೆಂಗಳೂರಿನ ದಾಸರಹಳ್ಳಿಯಲ್ಲಿ ಓರ್ವ ಮಲ ತಂದೆ ತನ್ನ 9 ಮತ್ತು 6 ವರ್ಷದ ಮಕ್ಕಳಿಗೆ ಬಿಸಿನೀರಿನ ಹೀಟರ್‌ನಿಂದ ಬರೆ ಎಳೆದಿರುವ ಘಟನೆ ಬೆಳಕಿಗೆ ಬಂದಿದೆ. ಮಕ್ಕಳು ತೀಟೆ ಮಾಡುತ್ತಾರೆ ಎಂದು ಆರೋಪಿಸಿ ಈ ಕೃತ್ಯ ಎಸಗಿದ್ದಾರೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಮಕ್ಕಳನ್ನು ರಕ್ಷಿಸಿ ತಾಯಿಗೆ ತಿಳಿಸಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- ಬಿ ಮೂರ್ತಿ, ನೆಲಮಂಗಲ
- Updated on: Jan 26, 2025
- 6:14 pm
ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!
ದಾಬಸ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಶಾರದ ಕ್ರಾಸ್ GNS ಬಾರ್ ಆ್ಯಂಡ್ ರೆಸ್ಟೋರೆಂಟ್ ಮುಂಭಾಗದಲ್ಲಿ ನಡೆದ ಗಲಾಟೆಯಲ್ಲಿ ಗಾಯಗೊಂಡಿದ್ದ ವ್ಯಕ್ತಿ ಮೃತಪಟ್ಟಿದ್ದಾನೆ. ಯಾವನಿಗೆ ಸೇರಿದ್ದು ಈ ಬಾರ್ ಎಂದು ಅವಾಚ್ಯ ಶಬ್ಧಗಳಿಂದ ಬೈದ ಎನ್ನುವ ಕಾರಣಕ್ಕೆ ಮೂವರು ಸೇರಿಕೊಂಡು ದೊಣ್ಣೆಯಿಂದ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ,
- ಬಿ ಮೂರ್ತಿ, ನೆಲಮಂಗಲ
- Updated on: Jan 22, 2025
- 9:38 pm
Bengaluru Traffic: ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!
ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ: 4ರಲ್ಲಿ ಭಾರೀ ಟ್ರಾಫಿಕ್ ಜಾಮ್ ಆಗಿದೆ. ಬೆಂಗಳೂರು ಉತ್ತರ ತಾಲೂಕಿನ ಬಳಿ ಕಿಲೋಮೀಟರ್ ಗಟ್ಟಲೇ ಸಂಚಾರದ ದಟ್ಟಣೆಯಾಗಿದೆ. ಮಾದಾವರದಿಂದ ನೈಸ್ ರಸ್ತೆವರೆಗೆ ಫುಲ್ ಟ್ರಾಫಿಕ್ ಜಾಮ್ ಆಗಿದ್ದು, ಸ್ಥಳದಲ್ಲಿ ಯಾರೊಬ್ಬ ಸಂಚಾರಿ ಪೊಲೀಸರು ಇಲ್ಲ. ಹೀಗಾಗಿ ವಾಹನ ಸವಾರರ ಪರದಾಡುತ್ತಿದ್ದಾರೆ. ಹೀಗಾಗಿ ವಾಹನ ಸವಾರರು ಈ ಮಾರ್ಗದಲ್ಲಿ ಸಂಚರಿಸುವ ಬಗ್ಗೆ ಗಮನಹರಿಸಬೇಕು.
- ಬಿ ಮೂರ್ತಿ, ನೆಲಮಂಗಲ
- Updated on: Jan 22, 2025
- 6:21 pm
ಬಿಬಿಎಂಪಿ ಕಸದ ಟೆಂಡರ್ ಕೊಡಿಸುವುದಾಗಿ ಮಹಿಳೆಗೆ ಲಕ್ಷಾಂತರ ರೂ ವಂಚನೆ: ಕೇಸ್ ಬುಕ್
ನೆಲಮಂಗಲದ ಬಿಬಿಎಂಪಿ ಕಸದ ಗುತ್ತಿಗೆದಾರ 10 ಲಕ್ಷ ರೂ. ಹಣ ಮತ್ತು 90 ಗ್ರಾಂ ಚಿನ್ನಾಭರಣವನ್ನು ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ. ಕಸದ ಟೆಂಡರ್ ಕೊಡಿಸುವುದಾಗಿ ಹೇಳಿ ಮಹಿಳೆಯನ್ನು ವಂಚಿಸಲಾಗಿದೆ. ಈ ಘಟನೆಯ ಬಗ್ಗೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
- ಬಿ ಮೂರ್ತಿ, ನೆಲಮಂಗಲ
- Updated on: Jan 20, 2025
- 8:05 pm
ನಮ್ಮ ಮೆಟ್ರೋದ ಲಕ್ಷಾಂತರ ರೂ. ಮೌಲ್ಯದ ವಿದ್ಯುತ್ ಕೇಬಲ್ ಕಳವು!
ಬೆಂಗಳೂರಿನ ನಮ್ಮ ಮೆಟ್ರೋ ರೈಲು ಮಾರ್ಗಗಳಲ್ಲಿ ವ್ಯಾಪಕವಾದ ವಿದ್ಯುತ್ ಕೇಬಲ್ ಕಳ್ಳತನಗಳು ನಡೆಯುತ್ತಿವೆ. ಪೀಣ್ಯ, ರಾಜಾಜಿನಗರ ಮತ್ತು ಬಸವನಗುಡಿ ಮಾರ್ಗಗಳಲ್ಲಿ ಹಲವು ಮೀಟರ್ ಉದ್ದದ ಕೇಬಲ್‌ಗಳು ಕಳವುಗೊಂಡಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ಕಾಪರ್ ಕೇಬಲ್‌ಗಳ ಕಳ್ಳತನದಿಂದ ಬಿಎಂಆರ್‌ಸಿಎಲ್‌ಗೆ ಭಾರಿ ನಷ್ಟ ಉಂಟಾಗಿದೆ. ಈ ಘಟನೆಗಳು ಒಳಗಿನವರ ಸಹಾಯದಿಂದ ನಡೆದಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
- ಬಿ ಮೂರ್ತಿ, ನೆಲಮಂಗಲ
- Updated on: Jan 20, 2025
- 9:43 am
ನೆಲಮಂಗಲ: ದಪ್ಪಗಿರುವುದಕ್ಕೆ ಹುಡುಗಿ ಸಿಗುತ್ತಿಲ್ಲವೆಂದು ಆಟೋ ಚಾಲಕ ನೇಣಿಗೆ ಶರಣು
ಇತ್ತೀಚೆಗೆ ಯುವ ಸಮೂಹ ಮಾನಸಿಕ ಒತ್ತಡ, ಖಿನ್ನತೆಗೆ ಒಳಗಾಗುತ್ತಿರುವುದು ಸಾಕಷ್ಟು ವರದಿಗಳಾಗಿವೆ. ಅಷ್ಟೇ ಅಲ್ಲದೆ ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೂ ಬರುತ್ತಿದ್ದಾರೆ. ಇದೀಗ ಇಂತಹದೇ ಘಟನೆಯೊಂದು ನೆಲಮಂಗಲದಲ್ಲಿ ನಡೆದಿದ್ದು, ದಪ್ಪಗಿರುವುದಕ್ಕೆ ಹುಡುಗಿ ಸಿಗುತ್ತಿಲ್ಲವೆಂದು ಯುವಕ ನೇಣಿಗೆ ಶರಣಾಗಿದ್ದಾನೆ. ಅದೇ ರೀತಿಯಾಗಿ ಆನ್ ಲೈನ್ ಗೇಮ್ ಆಡಬೇಡ ಎಂದಿದ್ದಕ್ಕೆ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
- ಬಿ ಮೂರ್ತಿ, ನೆಲಮಂಗಲ
- Updated on: Jan 17, 2025
- 4:33 pm