ನೆಲಮಂಗಲ: ಹೆದ್ದಾರಿಯಲ್ಲೇ ಕಾರು ಬೈಕ್ ನಿಲ್ಲಿಸಿ ರಂಪಾಟ, ಕಿಲೋಮೀಟರ್ಗಟ್ಟಲೆ ಟ್ರಾಫಿಕ್ ಜಾಮ್
ಸಣ್ಣ ಅಪಘಾತದ ಬಳಿಕ ಚಾಲಕರಿಬ್ಬರು ದರ್ಪ ಮೆರೆದಿದ್ದರಿಂದ ದಾಬಸ್ ಪೇಟೆ ಎಡೇಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಕಿಲೋ ಮೀಟರ್ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಯಿತು. ಇದೇ ವೇಳೆ, ಸ್ಥಳದಲ್ಲಿ ಇತರ ಚಾಲಕರು ಹಾಗೂ ಕಾರು ಚಾಲಕನ ಮಧ್ಯೆ ಮಾತಿನ ಚಕಮಕಿಯೂ ನಡೆಯಿತು. ವಿಡಿಯೋ ಇಲ್ಲಿದೆ.
ನೆಲಮಂಗಲ, ಜನವರಿ 27: ಕಾರಿಗೆ ಹಿಂಬದಿಯಿಂದ ಕ್ಯಾಂಟರ್ ಡಿಕ್ಕಿಯಾದ ಕಾರಣ ಚಾಲಕರು ಹೆದ್ದಾರಿಯಲ್ಲೇ ಕಾರು, ಬೈಕ್ ನಿಲ್ಲಿಸಿ ರಂಪಾಟ ನಡೆಸಿದ್ದರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಎಡೇಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಸೋಮವಾರ ಟ್ರಾಫಿಕ್ ಜಾಮ್ ಉಂಟಾಯಿತು. ಟ್ರಾಫಿಕ್ ಜಾಮ್ ಆಗಿ ಸಮಸ್ಯೆ ಆಗುತ್ತದೆ ಕಾರು ಸೈಡ್ಗೆ ಹಾಕಿ ಎಂದಿದ್ದಕ್ಕೆ ಚಾಲಕ ದರ್ಪ ಮೆರೆದಿದ್ದಾನೆ. ಸದ್ಯ, ಸಾರ್ವಜನಿಕರ ವಾಹನಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆ ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ