ರಜತ್ ಜೊತೆ ಸ್ನೇಹ ಹೊಸದು, ಅವರು ಬಿಗ್ ಬಾಸ್ ಮನೆಗೆ ಬಂದ ಬಳಿಕ ಗೆಳೆತನ ಶುರುವಾಗಿದ್ದು: ತ್ರಿವಿಕ್ರಮ್
ಭವ್ಯಾ ಮತ್ತು ತ್ರಿವಿಕ್ರಮ್ ನಡುವಿನ ಬಾಂಧ್ಯವ್ಯ, ಒಡನಾಟ ಮತ್ತು ಅನುರಾಗದ ಬಗ್ಗೆ ಹೆಚ್ಚು ಚರ್ಚೆಯಾಗಿದೆ. ಪ್ರತಿ ಸೀಸನಲ್ಲಿ ಇಂಥದೊಂದು ಅಂದರೆ ಪ್ರಣಯ, ಪ್ರೀತಿ ಎನ್ನುತ್ತಾ ಮನೆತುಂಬಾ ಓಡಾಡುವ ಒಂದು ಜೋಡಿ ಇರುತ್ತದೆ. ಇದು ಟಿಆರ್ಪಿಗೋಸ್ಕರವೋ ಅಥವಾ ನಿಜವಾಗಿ ಅವರಲ್ಲಿ ಪ್ರೀತಿ ಉಂಟಾಗುತ್ತದೆಯೋ ಅಂತ ನಮಗಂತೂ ಗೊತ್ತಿಲ್ಲ ಮಾರಾಯ್ರೇ.
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ ಮುಗಿದಿದೆ ಮತ್ತು ಕನ್ನಡಿಗರಿಗೆಲ್ಲ ನೋಡಿರುವಂತೆ ಹಾವೇರಿಯ ಹಣಮಂತು ಹನ್ನೊಂದನೇ ಸೀಸನ್ ಗೆದ್ದುಕೊಂಡಿದ್ದಾರೆ. ಕೊನೇವರೆಗೂ ಉತ್ತಮ ಆಟ ಮತ್ತು ನಡಾವಳಿಯಿಂದ ಜನರ ಗಮನಸೆಳೆದಿದ್ದ ತ್ರಿವಿಕ್ರಮ್ ಟಿವಿ9 ಪ್ರತಿನಿಧಿಯೊಂದಿಗೆ ಮಾತಾಡಿದ್ದು ತಮ್ಮ ಅನುಭವ, ಭವ್ಯಾ ಗೌಡ ಅವರೊಂದಿಗೆ ಸ್ನೇಹ-ಪ್ರೀತಿ ಮತ್ತು ರಜತ್ ಅವರೊಂದಿಗೆ ಪೈಪೋಟಿ, ಗೆಳೆತನದ ಬಗ್ಗೆ ಮಾತಾಡಿದ್ದಾರೆ. ರಜತ್ ಜೊತೆ ಸ್ನೇಹ ಹೊಸದು ಆದರೆ ಭವ್ಯಾ ಮೊದಲಿಂದಲೇ ಪರಿಚಿತರು ಎಂದು ಅವರು ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ವಿನ್ನರ್ ಹನುಮಂತ; ಮೊದಲೇ ಸೋರಿಕೆ ಆಯ್ತು ಮಾಹಿತಿ
Latest Videos